ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಕರ್ನಾಟಕಕ್ಕೆ ಓಡಿ ಬಂದ Rahul Dravid; ಯಂತ್ರೋದ್ಧಾರಕ ಹನುಮನಿಗೆ ವಿಶೇಷ ಮೊರೆ!

Published : Jul 03, 2026, 01:08 PM IST

ಮಗನ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿ ಎಂಬ ಆಶಯದಿಂದ ರಾಹುಲ್ ದ್ರಾವಿಡ್ (Rahul Dravid) ಯಂತ್ರೋದ್ಧಾರಕ ಹನುಮ ಹಾಗೂ ಅಂಜನಾದ್ರಿ ಅಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇಲ್ಲಿದೆ ಯಂತ್ರೋದ್ಧಾರಕನ ಮಹಿಮೆ.

PREV
14
ರಾಹುಲ್ ದ್ರಾವಿಡ್‌ ಹಂಪಿಗೆ ಭೇಟಿ

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್‌ ಹಂಪಿಗೆ ಭೇಟಿ ನೀಡಿ ವಿರೂಪಾಕ್ಷ ದೇವಸ್ಥಾನ ದರ್ಶನ ಪಡೆದಿದ್ದು ಭಕ್ತರ ಗಮನ ಸೆಳೆದಿದೆ. ಹಂಪಿಗೆ ಭೇಟಿ ನೀಡುವ ಅನೇಕ ಭಕ್ತರು ವಿರೂಪಾಕ್ಷನ ದರ್ಶನದ ಜೊತೆಗೆ ತಪ್ಪದೇ ಭೇಟಿ ನೀಡುವ ಮತ್ತೊಂದು ಪವಿತ್ರ ಕ್ಷೇತ್ರವೇ ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ. ಈ ಕ್ಷೇತ್ರದ ಮಹಿಮೆ ಬಗ್ಗೆ ಅನೇಕ ಭಕ್ತರು ಅಪಾರ ನಂಬಿಕೆ ಹೊಂದಿದ್ದಾರೆ.

ತುಂಗಭದ್ರಾ ನದಿಯ ತಟದಲ್ಲಿರುವ ಈ ಪವಿತ್ರ ಕ್ಷೇತ್ರದಲ್ಲಿ ಶ್ರೀ ಹನುಮಂತನನ್ನು ಅಪರೂಪದ ಯಂತ್ರದ ಮಧ್ಯದಲ್ಲಿ ಆಸೀನನಾಗಿ ಪೂಜಿಸಲಾಗುತ್ತದೆ. ಸಂಪ್ರದಾಯದ ಪ್ರಕಾರ, ಮಹಾನ್ ದ್ವೈತ ತತ್ವಜ್ಞಾನಿ ವ್ಯಾಸತೀರ್ಥರು ಇಲ್ಲಿ ಹನುಮಂತನನ್ನು ಯಂತ್ರದೊಳಗೆ ಪ್ರತಿಷ್ಠಾಪನೆ ಮಾಡಿದರು ಎಂಬ ನಂಬಿಕೆ ಇದೆ.

24
ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ

ಭಕ್ತರ ನಂಬಿಕೆಯಂತೆ, ಈ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದರೆ ಮನಸ್ಸಿಗೆ ಶಾಂತಿ, ಧೈರ್ಯ, ಏಕಾಗ್ರತೆ ಹಾಗೂ ಅಡೆತಡೆ ನಿವಾರಣೆ ಆಗುತ್ತದೆ ಎನ್ನಲಾಗುತ್ತದೆ. ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ಕ್ರೀಡಾಪಟುಗಳು ವಿಶೇಷವಾಗಿ ಈ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವುದು ಸಾಮಾನ್ಯ.

ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ತಲುಪಲು ಸ್ವಲ್ಪ ಮೆಟ್ಟಿಲುಗಳನ್ನು ಏರಬೇಕು. ಮೇಲಿನಿಂದ ಕಾಣುವ ಹಂಪಿಯ ಐತಿಹಾಸಿಕ ದೃಶ್ಯ ಮತ್ತು ತುಂಗಭದ್ರಾ ನದಿಯ ಸೌಂದರ್ಯ ಭಕ್ತರಿಗೆ ವಿಭಿನ್ನ ಅನುಭವ ನೀಡುತ್ತದೆ.

34
ಜಾತಕದಲ್ಲಿರುವ ಶನಿಯ ಅಶುಭ ಪ್ರಭಾವದಿಂದ ಮುಕ್ತಿ

ವಿಶ್ವವಿಖ್ಯಾತ ಐತಿಹಾಸಿಕ ತಾಣ ಹಂಪಿಯಲ್ಲಿರುವ ಈ ದೇವಾಲಯವು ಅತ್ಯಂತ ಜಾಗೃತ ಹಾಗೂ ಶಕ್ತಿಶಾಲಿ ಸನ್ನಿಧಿಯಾಗಿದೆ. ಇಲ್ಲಿ ಆಂಜನೇಯ ಸ್ವಾಮಿಯು ಯಂತ್ರದ ಮಧ್ಯದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವುದು ವಿಶೇಷ. ಈ ಜಾಗೃತ ಹನುಮಂತನ ದರ್ಶನ ಮಾಡುವುದರಿಂದ ಹಾಗೂ ಇಲ್ಲಿ ಕುಳಿತು ಹನುಮಾನ್ ಚಾಲೀಸಾ ಪಠಿಸುವುದರಿಂದ ಜಾತಕದಲ್ಲಿರುವ ಶನಿಯ ಅಶುಭ ಪ್ರಭಾವಗಳು, ಭಯ ಮತ್ತು ಆತಂಕಗಳು ಸಂಪೂರ್ಣವಾಗಿ ನಾಶವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ.

44
ರಾಹುಲ್ ದ್ರಾವಿಡ್ ದಂಪತಿ ಸಮೇತ ಅಂಜನಾದ್ರಿಗೆ ಭೇಟಿ

ಹಂಪಿಯ ವಿರುಪಾಕ್ಷ ದೇವಾಲಯ ದರ್ಶನದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಪತ್ನಿಯೊಂದಿಗೆ ಅಂಜನಾದ್ರಿ ಬೆಟ್ಟಗೆ ಭೇಟಿ ನೀಡಿದರು. ಬಳಿಕ 575 ಮೆಟ್ಟಿಲುಗಳನ್ನು ಏರಿ, ಹನುಮ ಜನ್ಮಭೂಮಿ ಎಂದು ಪ್ರಸಿದ್ಧವಾಗಿರುವ ಅಂಜನಾದ್ರಿ ಬೆಟ್ಟದಲ್ಲಿರುವ ಅಂಜನಾದ್ರಿ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories