ಕಡುಬಡತನದಲ್ಲಿ ಹುಟ್ಟಿ ಕೋಟ್ಯಾಧಿಪತಿಗಳಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!

Published : Jan 09, 2024, 06:09 PM IST

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮದಂತೆ ಆರಾಧಿಸುವ ಒಂದು ದೊಡ್ಡ ವರ್ಗವೇ ಇದೆ. ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎನ್ನುವುದು ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಆದರೆ ಸೂಕ್ತ ತರಬೇತಿ, ಆರ್ಥಿಕ ಪರಿಸ್ಥಿತಿ ಕ್ರಿಕೆಟ್ ಆಡುವುದನ್ನೇ ತೊರೆಯುವಂತೆ ಮಾಡಿಬಿಡುತ್ತದೆ. ಆದರೆ ಕೆಲವು ಕ್ರಿಕೆಟಿಗರು ಕಡುಬಡತನದಲ್ಲೇ ಹುಟ್ಟಿದರೂ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಕೋಟ್ಯಾಧಿಪತಿಗಳಾಗಿದ್ದಾರೆ. ನಾವಿಂದು ಅಂತಹ ಕ್ರಿಕೆಟಿಗರ ಪರಿಚಯ ಮಾಡಿಕೊಡುತ್ತೇವೆ ನೋಡಿ.  

PREV
114
ಕಡುಬಡತನದಲ್ಲಿ ಹುಟ್ಟಿ ಕೋಟ್ಯಾಧಿಪತಿಗಳಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಬಡತನ ಎನ್ನುವುದು ಹಲವರ ಪಾಲಿಗೆ ಶಾಪವಾದರೇ, ಇನ್ನು ಕೆಲವರು ಅದೇ ಶಾಪವನ್ನು ವರವನ್ನಾಗಿ ಪರಿವರ್ತಿಸಿಕೊಂಡ ಉದಾಹರಣೆಗಳಿವೆ. ಭಾರತ ಕ್ರಿಕೆಟ್ ತಂಡದಲ್ಲೂ ಅಂತಹ ಸ್ಪೂರ್ತಿಯ ಕಥೆಗಳಿವೆ.
 

214

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಒಂದು ಕಾಲದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಹಾಲು ಮಾರುತ್ತಿದ್ದರು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಈಗ ರೋಹಿತ್ ಶರ್ಮಾ ಕ್ರಿಕೆಟ್ ಮೂಲಕವೇ ನೂರಾರು ಕೋಟಿ ರುಪಾಯಿ ಒಡೆಯ ಎನಿಸಿಕೊಂಡಿದ್ದಾರೆ.
 

314

ಕೋಟ್ಯಾಂತರ ಜನರಿರುವ ಭಾರತ ದೇಶದಲ್ಲಿ ಸಾಕಷ್ಟು ಮಂದಿ ಹಲವು ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ. ಆದರೆ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸುವುದು ಮಾತ್ರ ಸುಲಭವಲ್ಲ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಬದ್ಧತೆ ಹಾಗೂ ಕಠಿಣ ಪರಿಶ್ರಮ ಬೇಕಾಗುತ್ತದೆ.
 

414

ಈಗ ಭಾರತದ ಅಗ್ರಮಾನ್ಯ ಆಟಗಾರರಾಗಿ ಬೆಳೆದು ನಿಂತಿರುವ ಹಲವು ಕ್ರಿಕೆಟಿಗರು ಒಂದು ಕಾಲದಲ್ಲಿ ಕಡುಬಡತನದಲ್ಲಿ ಜೀವನ ಸಾಗಿಸಿದ್ದರು. ಆದರೆ ತಾವು ಕಂಡ ದೊಡ್ಡ ಕನಸು ನನಸು ಮಾಡಿಕೊಳ್ಳುವಲ್ಲಿ ಅವರೆಲ್ಲ ಯಶಸ್ವಿಯಾಗಿದ್ದಾರೆ. ಅಂತಹ ಆಟಗಾರರ ಪರಿಚಯ ಇಲ್ಲಿದೆ ನೋಡಿ.
 

514
1. ರೋಹಿತ್ ಶರ್ಮಾ:

ಅಚ್ಚರಿ ಎನಿಸಿದರೂ ಸತ್ಯ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಒಂದು ಕಾಲದಲ್ಲಿ ತಮ್ಮ ಕ್ರಿಕೆಟ್ ಕಿಟ್ ಖರೀದಿಸಲು ಮನೆಯಿಂದ ಮನೆಗೆ ಹಾಲು ಹಾಕುತ್ತಿದ್ದರು. ಈಗ ರೋಹಿತ್ ಶರ್ಮಾ ನೂರಾರು ಕೋಟಿ ರುಪಾಯಿ ಒಡೆಯರಾಗಿದ್ದಾರೆ
 

614

ರೋಹಿತ್ ಶರ್ಮಾ ಅವರ ಬಾಲ್ಯದ ಬದುಕು ಅಷ್ಟೇನೂ ಸುಂದರವಾಗಿರಲಿಲ್ಲ. ಆದರೆ ರೋಹಿತ್ ಶರ್ಮಾ ಛಲಬಿಡದೇ ಕ್ರಿಕೆಟಿಗನಾಗುವ ಕನಸು ನನಸು ಮಾಡಿಕೊಂಡರು. ರೋಹಿತ್ ಅವರ ಬಾಲ್ಯದ ಈ ಸೀಕ್ರೇಟ್‌ ಅನ್ನು ಅನುಭವಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಒಂದು ಟಿವಿ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದರು
 

714
2. ಮುನಾಫ್ ಪಟೇಲ್:

ಮುನಾಫ್ ಪಟೇಲ್ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಮುನಾಫ್ ಪಟೇಲ್ ತೀರಾ ಕಡುಬಡತನದ ಕುಟುಂಬದಲ್ಲಿ ಜನಿಸಿದ್ದರು. 
 

814

ಮುನಾಫ್ ಪಟೇಲ್ ವೃತ್ತಿಪರ ಕ್ರಿಕೆಟಿಗನಾಗುವ ಮೊದಲು ಜೀವನೋಪಾಯ ನಡೆಸಲು ಕೇವಲ 35 ರುಪಾಯಿಗೆ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದಾರೆ. ಆದರೆ ಟೀಂ ಇಂಡಿಯಾ ಕೂಡಿಕೊಂಡ ಬಳಿಕ ಮುನಾಫ್ ಬದುಕು ಬದಲಾಯಿತು. 
 

914
3. ರಿಂಕು ಸಿಂಗ್:

ಭಾರತದ ಹಾಲಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ರಿಂಕು ಸಿಂಗ್ ಸದ್ಯ ಕ್ರಿಕೆಟ್ ವಲಯದಲ್ಲಿ ತೀರಾ ಚಿರಪರಿಚಿತ ಹೆಸರು. ಆದರೆ ಪವರ್ ಹಿಟ್ಟರ್ ರಿಂಕು ಸಿಂಗ್ ಬಾಲ್ಯ ಕೂಡಾ ಬಡತನದಿಂದಲೇ ಕೂಡಿತ್ತು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.
 

1014

ರಿಂಕು ಸಿಂಗ್ ತಂದೆ ಸಂಸಾರ ನಡೆಸಲು ಮನೆಮನೆಗೆ LPG ಸಿಲಿಂಡರ್ ಡಿಲೆವರಿ ಮಾಡುತ್ತಿದ್ದರು. ಒಂದು ಕಾಲದಲ್ಲಿ ರಿಂಕು ಸಿಂಗ್ ಜೀವನೋಪಾಯಕ್ಕಾಗಿ ನೆಲ ಗುಡಿಸುವ ಕೆಲಸ ಮಾಡಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿಲ್ಲ.
 

1114
4. ಯಶಸ್ವಿ ಜೈಸ್ವಾಲ್:

ಟೀಂ ಇಂಡಿಯಾ ಭರವಸೆಯ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡಾ ಬಡತನವನ್ನು ಮೆಟ್ಟಿನಿಂತು ಕ್ರಿಕೆಟಿಗ ಎನಿಸಿಕೊಂಡ ಅಸಾಮಾನ್ಯ ಪ್ರತಿಭೆ. ಜೈಸ್ವಾಲ್ ಕ್ರಿಕೆಟ್ ಕಲಿಯಲು ಮುಂಬೈಗೆ ಬಂದಾಗ ಪಾನಿಪೂರಿ ಮಾರುವ ಹುಡುಗನಾಗಿ ಕಾಣಿಸಿಕೊಂಡ ಫೋಟೋಗಳು ಸಾಕಷ್ಟು ವೈರಲ್ ಅಗಿದ್ದವು.
 

1214

ಆದರೆ ಕೆಲದಿನಗಳ ಹಿಂದಷ್ಟೇ ಅವರ ಬಾಲ್ಯದ ಕೋಚ್ ಈ ವಿಚಾರವನ್ನು ತಳ್ಳಿಹಾಕಿದ್ದರು. ಹಾಗಂತ ಯಶಸ್ವಿ ಪೋಷಕರು ತೀರಾ ಶ್ರೀಮಂತರೇನಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ.

1314
5. ಜಹೀರ್ ಖಾನ್:

ದಶಕಗಳ ಕಾಲ ಟೀಂ ಇಂಡಿಯಾ ವೇಗದ ದಾಳಿಯ ನೇತೃತ್ವ ವಹಿಸಿದ್ದ ಜಹೀರ್ ಖಾನ್, ಭಾರತದ ಯಶಸ್ವಿ ಎಡಗೈ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಟೀಂ ಇಂಡಿಯಾ ಸೇರುವ ಮುನ್ನ ಜಹೀರ್ ಖಾನ್ ಜೀವನ ಸುಲಭವಾಗಿರಲಿಲ್ಲ.
 

1414

ಎಷ್ಟೋ ದಿನಗಳ ಕಾಲ ಊಟವಿಲ್ಲದೇ ಜಹೀರ್ ಖಾನ್ ಕುಟುಂಬ ಖಾಲಿ ಹೊಟ್ಟೆಯಲ್ಲಿ ಮಲಗಿದ್ದಿದೆ. ಜಹೀರ್ ಖಾನ್ ಅವರ ಕುಟುಂಬದ ವೇತನ ತಿಂಗಳಿಗೆ 5 ಸಾವಿರಕ್ಕಿಂತ ಕಡಿಮೆಯಿತ್ತು ಎನ್ನುವುದನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದರು.
 

Read more Photos on
click me!

Recommended Stories