ವಿರಾಟ್ ಕೊಹ್ಲಿ - ಚಿಕು:
ಭಾರತದ ಹೆಸರಾಂತ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಚಿಕು ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ಈ ಅಡ್ಡ ಹೆಸರು ಎಂಎಸ್ ಧೋನಿಯಿಂದ ಜನಪ್ರಿಯತೆ ಗಳಸಿತು. ಅವರು ಇದನ್ನು ಮೈದಾನದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಚಂಪಕ್ ಕಾಮಿಕ್ಸ್‌ನ ಚಿಕು ಬನ್ನಿ ಪಾತ್ರದಿಂದ ಸ್ಪೂರ್ತಿಗೊಂಡಿದೆ. ಅವರ ದೊಡ್ಡ ಕಿವಿಗಳು ಮತ್ತು ಕೆನ್ನೆಯ ಮೂಳೆಗಳಿಂದಾಗಿ, ತನಗೆ ಈ ಪ್ರೀತಿಯ ಹೆಸರು ತಂದು ಕೊಟ್ಟಿದೆ ಎಂದು ಕೆವಿನ್ ಪೀಟರ್‌ಸನ್ ಅವರೊಂದಿಗಿನ Instagram ಸೆಷನ್‌ನಲ್ಲಿ ಕೊಹ್ಲಿ ಬಹಿರಂಗಪಡಿಸಿದರು.
ಶಿಖರ್ ಧವನ್ - ಗಬ್ಬರ್:
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಶಿಖರ್ ಧವನ್ ಅವರನ್ನು ಸಹ ಆಟಗಾರರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಗಬ್ಬರ್ ಎಂದು ಕರೆಯುತ್ತಾರೆ. ಈ ಅಡ್ಡ ಹೆಸರಿನ ಮೂಲವು ರಣಜಿ ಟ್ರೋಫಿ ಆಟದ ಸಮಯದ್ದು ಅಲ್ಲಿ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿರುವ ಧವನ್, ಶೋಲೆ ಚಲನಚಿತ್ರದ ಪ್ರಸಿದ್ಧ ಸಂಭಾಷಣೆಯನ್ನು ಹೇಳುತ್ತಿದ್ದರು ಮತ್ತು ಈ ಕಾರಣದಿಂದ ಧವನ್ ಅವರನ್ನು ಪ್ರೀತಿಯಿಂದ ಗಬ್ಬರ್ ಎಂದು ಕರೆಯಲಾಗುತ್ತದೆ.
Rahul Dravid
ರಾಹುಲ್ ದ್ರಾವಿಡ್ - ಜ್ಯಾಮಿ:
ರಾಹುಲ್ ದ್ರಾವಿಡ್ ಅವರ ಸಹ ಆಟಗಾರರು ಪ್ರೀತಿಯಿಂದ ಜ್ಯಾಮಿ ಎಂದು ಕರೆಯುತ್ತಾರೆ. ಈ ಅಡ್ಡ ಹೆಸರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕಕ್ಕಾಗಿ ಅವರು ಆಡುವ ಆರಂಭಿಕ ದಿನಗಳಲ್ಲಿ ಜಾವಗಲ್ ಶ್ರೀನಾಥ್ ಅವರನ್ನು ಜ್ಯಾಮ್ ಎಂದು ತಮಾಷೆಯಾಗಿ ಉಲ್ಲೇಖಿಸಿದಾಗ ಹುಟ್ಟಿಕೊಂಡಿತು. ನಂತರದಲ್ಲಿ, ಇದು ಜ್ಯಾಮಿ ಆಯಿತು.
ಅನಿಲ್ ಕುಂಬ್ಳೆ - ಜಂಬೋ:
ಭಾರತದ ಲೆಜೆಂಡ್ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ತಮ್ಮ ಅದ್ಬುತ ಬೌಲಿಂಗ್ ಕಾರಣದಿಂದ ಜಂಬೋ ಎಂಬ ಉಪನಾಮವನ್ನು ಪಡೆದರು. ದೆಹಲಿಯ ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ಇರಾನಿ ಟ್ರೋಫಿ ಪಂದ್ಯದ ವೇಳೆ ನವಜೋತ್ ಸಿಂಗ್ ಸಿಧು ಅವರಿಗೆ ಈ ಹೆಸರನ್ನು ನೀಡಿದರು. ಜಂಬೋ ಜೆಟ್‌ನಂತೆ ಎಂದು ಕುಂಬ್ಳೆ ಅವರ ಎಸೆತವನ್ನು ಸಿಧು ಆಶ್ಚರ್ಯದಿಂದ ಕರೆದರು. ಇದರಿಂದಾಗಿ ಅಡ್ಡಹೆಸರು ಹುಟ್ಟಿಕೊಂಡಿತು.
ವೆಂಕಟಪತಿ ರಾಜು - ಮಸ್ಸಲ್:
ಭಾರತದ ಮಾಜಿ ಎಡಗೈ ಸ್ಪಿನ್ನರ್ ವೆಂಕಟಪತಿ ರಾಜು ಅವರು ಮಸಲ್ಸ್ ಎಂಬ ಅಡ್ಡ ಹೆಸರು ಗಳಿಸಿದರು. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಬ್ರಿಯಾನ್ ಮೆಕ್‌ಮಿಲನ್ ಅವರು ರಾಜು ಅವರ ತೆಳ್ಳಗಿನ ಮೈಕಟ್ಟು ಕಾರಣದಿಂದಾಗಿ ತಮಾಷೆಯಿಂದ ಅವರಿಗೆ ಈ ಹೆಸರನ್ನು ನೀಡಿದರು.