ಸಂಭಾವನೆ, ಜನಪ್ರಿಯತೆ ವಿಷ್ಯದಲ್ಲಿ Cristiano Ronaldo ಮುಂದೆ Virat Kohli, MS Dhoni ನಗಣ್ಯ!

Published : Jul 07, 2026, 12:08 PM IST

cristiano ronaldo remuneration: ಇಂದು ವಿಶ್ವದ ಅತ್ಯಂತ ಜನಪ್ರಿಯ ಆಟಗಳಲ್ಲಿ ಕ್ರಿಕೆಟ್, ಫುಟ್‌ಬಾಲ್ ಅಗ್ರಗಣ್ಯ ಸ್ಥಾನದಲ್ಲಿವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕ್ರಿಕೆಟ್ ಆಟಗಾರರನ್ನು ದೇವರೆಂದು ಆರಾಧನೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಹೆಚ್ಚು ಸಂಭಾವನೆ ಕೊಡುತ್ತಾರೆ. 

PREV
14
ಒಪ್ಪಂದ ಮಾಡ್ಕೊಂಡಿರೋ ರೊನಾಲ್ಡೊ

ಭಾರತದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂ.ಎಸ್. ಧೋನಿ ಸಂಭಾವನೆ ಜಾಸ್ತಿ ಇದೆ ಎಂದು ಭಾವಿಸಿದರೆ ಅದು ತಪ್ಪು. ಜಾಗತಿಕ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ (Cristiano Ronaldo) ಸಂಭಾವನೆ ಮುಂದೆ ಇದೆಲ್ಲ ನಗಣ್ಯ.

ಕ್ರಿಶ್ಚಿಯಾನೋ ರೊನಾಲ್ಡೊ ಅವರು ಸೌದಿ ಅರೇಬಿಯಾದ 'ಅಲ್ ನಾಸರ್' ಕ್ಲಬ್‌ನೊಂದಿಗೆ ಬೃಹತ್ ಒಪ್ಪಂದ ಮಾಡಿಕೊಂಡಿದ್ದಾರೆ. ಕೇವಲ ಕ್ಲಬ್‌ನಿಂದಲೇ ಅವರು ವಾರ್ಷಿಕವಾಗಿ ಸುಮಾರು 200 ಮಿಲಿಯನ್ ಡಾಲರ್ (ಸುಮಾರು ₹1,650+ ಕೋಟಿ) ಸಂಭಾವನೆ ಪಡೆಯುತ್ತಾರೆ. ಒಂದು ತಿಂಗಳ ಗಳಿಕೆ ಸುಮಾರು ₹137 ಕೋಟಿ ರೂಪಾಯಿ ಆಗುತ್ತದೆ. ಒಂದು ದಿನಕ್ಕೆ ಸುಮಾರು ₹4.5 ಕೋಟಿಗಿಂತ ಹೆಚ್ಚು ಸಂಭಾವನೆ ಸಿಗುತ್ತದೆ!

ಐಪಿಎಲ್ ಮತ್ತು ಜಾಹೀರಾತು ಬಿಟ್ಟರೆ ಬಿಸಿಸಿಐ (BCCI) ಕಾಂಟ್ರಾಕ್ಟ್‌ನಲ್ಲಿ ಕಪ್ತಾನ ಅಥವಾ 'A+' ದರ್ಜೆಯ ಭಾರತೀಯ ಕ್ರಿಕೆಟರ್‌ಗೆ ವಾರ್ಷಿಕ ಸಂಭಾವನೆ ₹7 ಕೋಟಿ ಆಗುವುದು.

24
ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು, ಜಾಹೀರಾತುಗಳು

ರೊನಾಲ್ಡೊ ಅವರು ನೈಕಿ (Nike), ಹರ್ಬಲೈಫ್ (Herbalife), ಅರ್ಮಾನಿ (Armani) ನಂತಹ ಜಾಗತಿಕ ಬ್ರ್ಯಾಂಡ್‌ಗಳಿಗೆ ಅವರು ರಾಯಭಾರಿಯಾಗಿದ್ದಾರೆ. ನೈಕಿ ಕಂಪನಿ ಜೊತೆಗೆ 1 ಬಿಲಿಯನ್ ಡಾಲರ್ ಮೌಲ್ಯದ ಜೀವಿತಾವಧಿ ಒಪ್ಪಂದವನ್ನು ಹೊಂದಿದ್ದಾರೆ.

34
ಸೋಶಿಯಲ್ ಮೀಡಿಯಾ ಸಾಮ್ರಾಜ್ಯ

ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ 600 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಒಂದು Sponsored Postಗೆ ಸುಮಾರು ₹20 ರಿಂದ ₹25 ಕೋಟಿ ರೂಪಾಯಿ ಸಿಗುತ್ತದೆ. ವಿರಾಟ್ ಕೊಹ್ಲಿ ಅವರು ಏಷ್ಯಾದಲ್ಲೇ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಗಳಿಕೆ ಹೊಂದಿದ್ದರೂ ಒಂದು ಪೋಸ್ಟ್‌ಗೆ ಸುಮಾರು ₹11-14 ಕೋಟಿ ಪಡೆಯುತ್ತಾರೆ.

44
ಸ್ವಂತ ಬ್ರ್ಯಾಂಡ್ ಮತ್ತು ಉದ್ಯಮಗಳು

ರೊನಾಲ್ಡೊ ಅವರು CR7 ಬ್ರ್ಯಾಂಡ್ ಅಡಿಯಲ್ಲಿ Perfumes, ಒಳ ಉಡುಪುಗಳು, ಪಾದರಕ್ಷೆಗಳು, Pestana CR7 Hotels ಉದ್ಯಮ ನಡೆಸುತ್ತಿದ್ದಾರೆ.

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಕೆಲವೇ ದೇಶಗಳಲ್ಲಿ ಹೆಚ್ಚು ಕ್ರಿಕೆಟ್ ಜನಪ್ರಿಯವಾಗಿದೆ. ಆದರೆ ಫುಟ್‌ಬಾಲ್ ಜಗತ್ತಿನ 200ಕ್ಕೂ ಹೆಚ್ಚು ದೇಶಗಳಲ್ಲಿ ಆಡಲಾಗುವ ಜಾಗತಿಕ ಕ್ರೀಡೆಯಾಗಿದೆ. ಹೀಗಾಗಿ, ಫುಟ್‌ಬಾಲ್ ಮಾರುಕಟ್ಟೆ, ಪ್ರಸಾರ ಹಕ್ಕುಗಳು (Broadcasting Rights) ಮತ್ತು ಪ್ರಾಯೋಜಕತ್ವದ ಮೌಲ್ಯ ಕ್ರಿಕೆಟ್‌ಗಿಂತ ನೂರಾರು ಪಟ್ಟು ದೊಡ್ಡದಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories