ಪ್ರಧಾನಿ ಮೋದಿ ಮನವಿ ಮಾಡಿಕೊಂಡರೆ ಧೋನಿ ಟಿ20 ವಿಶ್ವಕಪ್ ಆಡಬಹುದು ಎಂದ ಪಾಕ್ ಮಾಜಿ ವೇಗಿ..!
First Published | Aug 19, 2020, 11:33 AM ISTಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಮೂರ್ನಾಲ್ಕು ದಿನಗಳೇ ಕಳೆದರು, ಧೋನಿ ಕುರಿತ ಮಾತುಕತೆ ಮಾತ್ರ ನಿಂತಿಲ್ಲ. ಇದೀಗ ಪಾಕಿಸ್ತಾನ ಮಾಜಿ ವೇಗಿ ಶೊಯೇಬ್ ಅಖ್ತರ್ ಕೂಡಾ ಧೋನಿ ನಿವೃತ್ತಿಯ ಬಗ್ಗೆ ಮಾತುಗಳನ್ನಾಡಿದ್ದು, ಅವರು ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ವರೆಗೂ ಆಡಬಹುದಿತ್ತು ಎಂದಿದ್ಧಾರೆ.
ಒಂದು ವೇಳೆ ದೇಶದ ಪ್ರಧಾನಿ ಮನವಿ ಮಾಡಿಕೊಂಡರೆ ಧೋನಿ ಮತ್ತೆ ನಿವೃತ್ತಿ ಹಿಂಪಡೆದು ತಂಡ ಕೂಡಿಕೊಳ್ಳುವ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಅಖ್ತರ್ ಹೇಳಿದ್ದೇನು, ನೀವೇ ನೋಡಿ.