ರಿಯಾಲಿಟಿ ಶೋನಲ್ಲಿ ಸಿಂಗರ್‌ ಆಗಿದ್ದ ವ್ಯಕ್ತಿ ಈಗ ಐಪಿಎಲ್‌ನಲ್ಲಿ ಅಂಪೈರ್‌!

Published : May 06, 2025, 06:28 PM IST

ಒಂದು ಕಾಲದಲ್ಲಿ ಇಂಡಿಯನ್ ಐಡಲ್‌ನಲ್ಲಿ ಹಾಡುತ್ತಿದ್ದ ಪರಾಶರ್ ಜೋಶಿ ಈಗ ಐಪಿಎಲ್‌ನಲ್ಲಿ ಅಂಪೈರ್ ಆಗಿದ್ದಾರೆ. ಶ್ರೇಯಸ್ ಅಯ್ಯರ್ ಅವರಂತೆ ಕಾಣುವ ಪರಾಶರ್, ಹಾಡುಗಾರಿಕೆ ಮತ್ತು ಅಂಪೈರಿಂಗ್ ಎರಡರಲ್ಲೂ ಯಶಸ್ಸು ಕಂಡಿದ್ದಾರೆ. ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಅವರು ಕ್ರಿಕೆಟ್ ಮೇಲಿನ ಪ್ರೀತಿಯಿಂದ ಅಂಪೈರಿಂಗ್ ವೃತ್ತಿ ಆಯ್ಕೆ ಮಾಡಿಕೊಂಡರು.

PREV
15
ರಿಯಾಲಿಟಿ ಶೋನಲ್ಲಿ ಸಿಂಗರ್‌ ಆಗಿದ್ದ ವ್ಯಕ್ತಿ ಈಗ ಐಪಿಎಲ್‌ನಲ್ಲಿ ಅಂಪೈರ್‌!

ಒಂದು ಕಾಲದಲ್ಲಿ ಇಂಡಿಯನ್ ಐಡಲ್ ನಂತಹ  ಮ್ಯೂಸಿಕಲ್‌ ರಿಯಾಲಿಟಿ ಶೋಗಳ ವೇದಿಕೆಯಲ್ಲಿ ಕೈಯಲ್ಲಿ ಮೈಕ್‌ ಹಿಡಿದು ಹಾಡು ಹೇಳುತ್ತಿದ್ದ ವ್ಯಕ್ತಿ ಈಗ ಐಪಿಎಲ್‌ನಲ್ಲಿ ಅಂಪೈರ್‌ ಆಗಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಭಾರತೀಯ ತಂಡದ ಸ್ಟಾರ್ ಕ್ರಿಕೆಟಿಗ ಮತ್ತು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರಂತೆ ಹೋಲುತ್ತಾರೆ ಅನ್ನೋದು ಕೂಡ ವಿಶೇಷ.
 

25

ಐಪಿಎಲ್ 2025 ತುಂಬಾ ಸದ್ದು ಮಾಡುತ್ತಿದೆ. ಅದರೊಂದಿಗೆ ಸಿಂಗರ್‌-ಅಂಪೈರ್‌ ಪರಾಶರ್ ಜೋಶಿ ಕೂಡ ಹೈಲೈಟ್‌ ಆಗಿದ್ದಾರೆ. ಒಂದು ಕಾಲದಲ್ಲಿ ಸಂಗೀತ ಪರಾಶರ್ ಅವರ ಮೊದಲ ಆಯ್ಕೆಯಾಗಿತ್ತು. 2008 ರಲ್ಲಿ, ಅವರು ಇಂಡಿಯನ್ ಐಡಲ್‌ನ ನಾಲ್ಕನೇ ಸೀಸನ್‌ನಲ್ಲಿ ಎರಡನೇ ಸುತ್ತಿನವರೆಗೂ ಹೋಗಿದ್ದರು. ಈಗ ಅಂಪೈರ್‌ ಆಗಿದ್ದರೂ, ಕೆಲವು ಕಾರ್ಯಕ್ರಮಗಳಲ್ಲಿ ಅವರು ಈಗಲೂ ಹಾಡುತ್ತಾರೆ.
 

35

ಹಾಡು ಹಾಡುವುದರೊಂದಿಗೆ ಕ್ರಿಕೆಟ್‌ ಕೂಡ ಅವರ ನೆಚ್ಚಿನ ವಿಚಾರವಾಗಿದೆ. ಪುಣೆಯಲ್ಲಿ ಕ್ಲಬ್‌ ಕ್ರಿಕೆಟ್‌ ಆಗಿರುವ ಪರಾಶರ್‌, ಓದಿನಲ್ಲೂ ಕೂಡ ಮುಂದಿದ್ದರು. ಕಂಪ್ಯೂಟರ್‌ ಇಂಜಿನಿಯರ್‌ ಪದವೀಧರರಾಗಿದ್ದಾರೆ. ನಂತರ ಇವೆಲ್ಲವನ್ನೂ ಬಿಟ್ಟು ಅಂಪೈರಿಂಗ್‌ ಅನ್ನು ವೃತ್ತಿಯನ್ನಾಗಿ ಆರಿಸಿಕೊಂಡಿದ್ದರು.
 

45

ಆಟದ ಮೇಲಿನ ಪ್ರೀತಿಯಿಂದಾಗಿ ಕ್ರಿಕೆಟ್ ತ್ಯಜಿಸಿದರೂ, ಅವರು ಅಂಪೈರ್ ಆಗಲು ಪ್ರಯತ್ನಿಸುತ್ತಲೇ ಇದ್ದರು. ಪರಾಶರ್ ಅವರನ್ನು 2015 ರಲ್ಲಿ ಬಿಸಿಸಿಐ ಅಂಪೈರ್ ಆಗಿ ಗುರುತಿಸಿತು. ರಣಜಿ ಟ್ರೋಫಿ ಮತ್ತು ಡಬ್ಲ್ಯೂಪಿಎಲ್ ನಂತರ, ಪರಾಶರ್ ಈಗ ಐಪಿಎಲ್‌ನಲ್ಲಿ ಅಂಪೈರಿಂಗ್‌ ಮಾಡುತ್ತಿದ್ದಾರೆ.
 

55

ಇದೆಲ್ಲದರ ಜೊತೆಗೆ, ಪರಾಶರ್ ಜೋಶಿ ತಮ್ಮ ಲುಕ್ ನಿಂದಾಗಿ ಕೂಡ ಸುದ್ದಿಯಲ್ಲಿದ್ದಾರೆ. ಅನೇಕ ಜನರು ಅವರು ಶ್ರೇಯಸ್ ಅಯ್ಯರ್ ಅವರಂತೆಯೇ ಕಾಣುತ್ತಾರೆ ಎಂದು ಭಾವಿಸುತ್ತಾರೆ. ಕ್ರಿಕೆಟಿಗ ಅಲ್ಲದಿದ್ದರೂ, ಪರಾಶರ್ ಹಾಡುಗಾರಿಕೆ, ಅಂಪೈರಿಂಗ್ ಮುಂತಾದ ಹಲವು ಕಾರಣಗಳಿಂದ ಸ್ಟಾರ್ ಆಗಿದ್ದಾರೆ.

Read more Photos on
click me!

Recommended Stories