ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ದಿನಾಂಕ ಅಂತಿಮಗೊಂಡಿದೆ. ಐಸಿಸಿ ಸಭೆಯಲ್ಲಿ ಚರ್ಚಿಸಿ ದಿನಾಂಕ ಫೈನಲ್ ಮಾಡಲಾಗಿದೆ. ವಿಶೇಷ ಅಂದರೆ ಇದೀಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿಗಳು ಆರಂಭಗೊಂಡಿದೆ. ಹಲವು ಸುತ್ತಿನ ಚರ್ಚೆ, ಸಭೆಗಳ ಬಳಿಕ ಇದೀಗ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ದಿನಾಂಕ ನಿಗಧಿಯಾಗಿದೆ. 2027ರ ಅಕ್ಟೋಬರ್ 4 ರಂದು ಐಸಿಸಿ ಎಕದಿನ ವಿಶ್ವಕಪ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ದಿನಾಂಕ ಬಹುತೇಕ ಅಂತಿಮಗೊಂಡಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
26
ನವೆಂಬರ್ 21ರ ವರೆಗೆ ವಿಶ್ವಕಪ್ ಟೂರ್ನಿ
2027ರ ಅಕ್ಟೋಬರ್ 4 ರಿಂದ ನವೆಂಬರ್ 21ರ ವರೆಗೆ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅಹಮ್ಮದಾಬಾದ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ದಿನಾಂಕ ಅಂತಿಮಗೊಳಿಸಲಾಗಿದೆ. ಐಸಿಸಿ ಸದಸ್ಯ ರಾಷ್ಟ್ರಗಳು ದಿನಾಂಕಕ್ಕೆ ಸಮ್ಮತಿ ಸೂಚಿಸಿದೆ. ಇದೀಗ ತಯಾರಿಗಳು ಆರಂಭಗೊಂಡಿದೆ.
36
ಮೂರು ದೇಶಗಳಿಗೆ ಆತಿಥ್ಯ
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ್ನು ಮೂರು ದೇಶ ಆತಿಥ್ಯವಹಿಸಿದೆ. ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮಿಬಿಯಾ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಆತಿಥ್ಯವಹಿಸಿದೆ. ಒಟ್ಟು 54 ಪಂದ್ಯಗಳ ಪೈಕಿ 41 ಪಂದ್ಯಗಳು ಸೌತ್ ಆಫ್ರಿಕಾದಲ್ಲಿ, 8 ಪಂದ್ಯ ಜಿಂಬಾಬ್ವೆ ಹಾಗೂ 3 ಪಂದ್ಯಗಳು ನಮಿಬಿಯಾದಲ್ಲಿ ಆಯೋಜನೆಗೊಳ್ಳಲಿದೆ.
2027ರ ಅಕ್ಟೋಬರ್ ತಿಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಅಂದರೆ ಸರಿಸುಮಾರು ಒಂದೂವರೆ ವರ್ಷವಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಬ್ಬರಿಗೂ ಇನ್ನು ಒಂದೂವರೆ ವರ್ಷ ಸಮಯವಿದೆ.
56
ರೋಹಿತ್ 39, ಕೊಹ್ಲಿ 37
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಭವಿಷ್ಯದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಸದ್ಯ ರೊಹಿತ್ ಶರ್ಮಾ ವಯಸ್ಸು 39. ಕೊಹ್ಲಿ ವಯಸ್ಸು 37. ಇನ್ನು ಒಂದೂವರೆ ವರ್ಷ ಇಬ್ಬರು ಏಕದಿನ ಆಡಲು ಸಜ್ಜಾಗಿರುತ್ತಾರಾ, ಫಿಟ್ನೆಸ್ ಫಾರ್ಮ್ ಕುರಿತು ಹಲವು ಚರ್ಚೆಗಳು ನಡೆಯುತ್ತಿದೆ. ಇಬ್ಬರು ಉತ್ತಮ ಫಿಟ್ನೆಸ್ ಹಾಗೂ ಫಾರ್ಮ್ ಕಂಡುಕೊಂಡಿದ್ದಾರೆ.
66
ಆಫ್ರಿಕಾ ದೇಶಗಳಿಗೆ ಐಸಿಸಿ ಟೂರ್ನಿ
2003ರ ಬಳಿಕ ಸೌತ್ ಆಫ್ರಿಕಾ ಏಕದಿನ ವಿಶ್ವಕಪ್ ಟೂರ್ನಿ ಆಯೋಜಿಸಿಲ್ಲ. ಆಫ್ರಿಕಾ ದೇಶಗಳು 2007ರ ಟಿ20 ವಿಶ್ವಕಪ್, 2009ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿದೆ. ಇದನ್ನು ಹೊರತುಪಡಿಸಿದರೆ ಯಾವುದೇ ಐಸಿಸಿ ಟೂರ್ನಿ ಆಯೋಜಿಸಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.