5 ಎಸೆತಕ್ಕೆ 5 ವಿಕೆಟ್‌ ಕಿತ್ತ ನ್ಯೂಜಿಲೆಂಡ್‌ನ ರಾಂಡೆಲ್‌: ಪ್ರಥಮ ದರ್ಜೆಯ 254 ವರ್ಷದಲ್ಲಿ ಇದೇ ಮೊದಲು!

Published : Mar 09, 2026, 07:20 AM IST

ಸೆಂಟ್ರಲ್‌ ಡಿಸ್ಟ್ರಿಕ್ಟ್‌ ಆಟಗಾರ ಬ್ರೆಟ್‌ ರಾಂಡೆಲ್‌ 5 ಎಸೆತಗಳಲ್ಲಿ 5 ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನ 254 ವರ್ಷಗಳ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

PREV
14
ಬ್ರೆಟ್‌ ರಾಂಡೆಲ್‌

ನೇಪಿಯರ್‌: ನ್ಯೂಜಿಲೆಂಡ್‌ನ ಪ್ಲಂಕೆಟ್‌ ಶೀಲ್ಡ್‌ ಟೂರ್ನಿಯಲ್ಲಿ ನಾರ್ದರ್ನ್‌ ಡಿಸ್ಟ್ರಿಕ್ಟ್‌ ತಂಡದ ವಿರುದ್ಧ ಸೆಂಟ್ರಲ್‌ ಡಿಸ್ಟ್ರಿಕ್ಟ್‌ ಆಟಗಾರ ಬ್ರೆಟ್‌ ರಾಂಡೆಲ್‌ 5 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನ 254 ವರ್ಷಗಳ ಇತಿಹಾಸದಲ್ಲೇ ಮೊದಲು.

24
ಸಾಧನೆ

ಪಂದ್ಯದ 2ನೇ ದಿನವಾದ ಭಾನುವಾರ ರಾಂಡೆಲ್‌ ಈ ಸಾಧನೆ ಮಾಡಿದರು. ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿದ್ದ ನಾರ್ದರ್ನ್‌ ತಂಡ ಬಳಿಕ 9 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ ನಷ್ಟಕ್ಕೊಳಗಾಯಿತು. 

34
ಆರಂಭಿಕ 4 ಎಸೆತ

ತಮ್ಮ 2ನೇ ಓವರ್‌ನ ಕೊನೆ ಎಸೆತದಲ್ಲಿ ಹೆನ್ರಿ ಕೂಪರ್‌ ವಿಕೆಟ್‌ ಕಿತ್ತರು. ಬಳಿಕ ತಮ್ಮ ಮುಂದಿನ ಓವರ್‌ನ ಆರಂಭಿಕ 4 ಎಸೆತಗಳಲ್ಲಿ ಕ್ರಮವಾಗಿ ಜೀತ್‌ ರಾವಲ್‌, ಜೋ ಕಾರ್ಟರ್‌, ರಾಬರ್ಟ್‌ ಓ‘ಡೊನೆಲ್‌ ಹಾಗೂ ಕ್ರಿಸ್ಟಿಯನ್‌ ಕ್ಲಾರ್ಕ್‌ ವಿಕೆಟ್‌ ಪಡೆದರು.

44
82 ರನ್‌ಗೆ ಆಲೌಟಾ

ಬ್ರೆಟ್‌ ರಾಂಡೆಲ್‌ ಅವರು ಸತತ 6 ವಿಕೆಟ್‌ ಪಡೆಯದಿದ್ದರೂ, 8 ಎಸೆತಗಳ ಅಂತರದಲ್ಲಿ 6 ವಿಕೆಟ್‌ ಕಿತ್ತ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು. ಅವರು ಈ ಇನ್ನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 25 ರನ್‌ಗೆ 7 ವಿಕೆಟ್‌ ಕಿತ್ತರು. ನಾರ್ದರ್ನ್‌ ತಂಡ 82 ರನ್‌ಗೆ ಆಲೌಟಾಯಿತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories