Published : Feb 18, 2020, 05:29 PM ISTUpdated : Feb 18, 2020, 05:32 PM IST
ವೆಲ್ಲಿಂಗ್ಟನ್(ಫೆ.18): ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ 13 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದೆ. ತಂಡಕ್ಕೆ ವೇಗಿ ಟ್ರೆಂಟ್ ಬೌಲ್ಟ್ ಕಮ್‌ಬ್ಯಾಕ್ ಮಾಡಿರುವುದು ಕಿವೀಸ್ ಪಾಳಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಟಿ20 ಹಾಗೂ ಏಕದಿನ ಸರಣಿ ಬಳಿಕ ಇದೀಗ ಉಭಯ ತಂಡಗಳು 2 ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್ ಆಡಲು ಸಜ್ಜಾಗಿವೆ. ಭಾರತ ವಿರುದ್ಧ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಕಿವೀಸ್ ಪಡೆ ಸಜ್ಜಾಗಿದೆ. ಕಿವೀಸ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ...