ಎಬಿ ಡಿವಿಲಿಯರ್ಸ್‌ಗೆ ಮಿ.360 ಎಂದು ಕರೆಯೋದೇಕೆ..?

Suvarna News   | Asianet News
Published : Feb 17, 2020, 07:58 PM ISTUpdated : Feb 17, 2020, 08:03 PM IST

ಬೆಂಗಳೂರು(ಫೆ.17) ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸೋಮವಾರ(ಫೆ.17)ರಂದು 36ನೇ ಜನ್ಮದಿನಕ್ಕೆ ಕಾಲಿರಿಸಿದ್ದಾರೆ. ಆಧುನಿಕ ಕ್ರಿಕೆಟ್‌ನ ಸೂಪರ್‌ಮ್ಯಾನ್ ಎಬಿಡಿಯನ್ನು ಮಿಸ್ಟರ್ ಪರ್ಫೆಕ್ಟ್, ಮಿಸ್ಟರ್ 360 ಎಂದೂ ಕರೆಯಲಾಗುತ್ತದೆ. ಚೆಂಡನ್ನು 360 ಡಿಗ್ರಿಯಲ್ಲೂ ಮೈದಾನದ ಮೂಲೆಮೂಲೆಗಳಿಗೆ ಅಟ್ಟುವ ಸಾಮರ್ಥ್ಯ ಹೊಂದಿದ್ದರಿಂದಲೇ ಎಬಿಡಿಗೆ ಈ ಹೆಸರು ಬಂದಿದೆ.  ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಎದುರಾಳಿ ತಂಡದ ಬೌಲರ್‌ಗಳ ಜಂಘಾಬಲವನ್ನೇ ಅಡಗಿಸುವ ಸಾಮರ್ಥ್ಯ ಎಬಿಡಿ ಬ್ಯಾಟಿಂಗ್‌ಗಿದೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಬಿಡಿ ಏಕಾಂಗಿಯಾಗಿ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿಟ್ಟಿದ್ದಾರೆ. ಸದ್ಯದಲ್ಲೇ ಎಬಿಡಿ ನಿವೃತ್ತಿ ಹಿಂಪಡೆದ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಎಬಿಡಿಗೆ ಮಿ.360 ಎನ್ನುವ ಹೆಸರು ಹೇಗೆ ಬಂತು ಎನ್ನುವುದನ್ನು ತಿಳಿಯಬೇಕಾದರೆ ಈ ಫೋಟೋ ಗ್ಯಾಲರಿ ನೋಡಿ, ಆಮೇಲೆ ನಿಮಗೆ ಅರ್ಥವಾಗುತ್ತೆ ಯಾಕಂತ...

PREV
114
ಎಬಿ ಡಿವಿಲಿಯರ್ಸ್‌ಗೆ ಮಿ.360 ಎಂದು ಕರೆಯೋದೇಕೆ..?
ಎಬಿ ಡಿವಿಲಿಯರ್ಸ್ ಲೆಗ್ ಸೈಡ್‌ನಲ್ಲಿ ಬೌಂಡರಿ ಬಾರಿಸುತ್ತಿರುವ ಕ್ಷಣ
ಎಬಿ ಡಿವಿಲಿಯರ್ಸ್ ಲೆಗ್ ಸೈಡ್‌ನಲ್ಲಿ ಬೌಂಡರಿ ಬಾರಿಸುತ್ತಿರುವ ಕ್ಷಣ
214
ಪಾಕಿಸ್ತಾನದೆದುರು ಸ್ವಿಚ್ ಹಿಟ್ ಮಾಡುತ್ತಿರುವ ಡಿವಿಲಿಯರ್ಸ್
ಪಾಕಿಸ್ತಾನದೆದುರು ಸ್ವಿಚ್ ಹಿಟ್ ಮಾಡುತ್ತಿರುವ ಡಿವಿಲಿಯರ್ಸ್
314
ಆಫ್ ಸೈಡ್‌ನಲ್ಲಿ ಬೌಂಡರಿ ಬಾರಿಸುತ್ತಿರುವ ಮನಮೋಹಕ ಕ್ಷಣ
ಆಫ್ ಸೈಡ್‌ನಲ್ಲಿ ಬೌಂಡರಿ ಬಾರಿಸುತ್ತಿರುವ ಮನಮೋಹಕ ಕ್ಷಣ
414
ಇಂಗ್ಲೆಂಡ್ ಎದುರು ಎಬಿಡಿ 'ಇನ್‌ಸೈಡ್ ಔಟ್ ಶಾಟ್' ಬಾರಿಸಿದಾಗ
ಇಂಗ್ಲೆಂಡ್ ಎದುರು ಎಬಿಡಿ 'ಇನ್‌ಸೈಡ್ ಔಟ್ ಶಾಟ್' ಬಾರಿಸಿದಾಗ
514
ಟೆಸ್ಟ್ ಕ್ರಿಕೆಟ್‌ನಲ್ಲೂ ಎಬಿಡಿ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್
ಟೆಸ್ಟ್ ಕ್ರಿಕೆಟ್‌ನಲ್ಲೂ ಎಬಿಡಿ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್
614
ಮೊಣಕಾಲ ಮೇಲೆ ನಿಂತು ಮತ್ತೊಂದು ಅಮೋಘ ಶಾಟ್
ಮೊಣಕಾಲ ಮೇಲೆ ನಿಂತು ಮತ್ತೊಂದು ಅಮೋಘ ಶಾಟ್
714
ಎಬಿಡಿ ಅಬ್ಬರಿಸುತ್ತಿರುವ ಕ್ಷಣ
ಎಬಿಡಿ ಅಬ್ಬರಿಸುತ್ತಿರುವ ಕ್ಷಣ
814
ಕೆರಿಬಿಯನ್ನರೆದುರು ಎಬಿಡಿ ಅಬ್ಬರಿಸಿ ಬೊಬ್ಬಿರಿದ ಕ್ಷಣ
ಕೆರಿಬಿಯನ್ನರೆದುರು ಎಬಿಡಿ ಅಬ್ಬರಿಸಿ ಬೊಬ್ಬಿರಿದ ಕ್ಷಣ
914
ಈ ರೀತಿಯ ಶಾಟ್ ಕೇವಲ ಎಬಿಡಿಯಿಂದ ಮಾತ್ರ ಸಾಧ್ಯ
ಈ ರೀತಿಯ ಶಾಟ್ ಕೇವಲ ಎಬಿಡಿಯಿಂದ ಮಾತ್ರ ಸಾಧ್ಯ
1014
ಈ ರೀತಿಯ ಬ್ಯಾಟಿಂಗ್ ಅನುಭವಿಸಬೇಕಷ್ಟೇ, ವರ್ಣಿಸಲಸಾಧ್ಯ
ಈ ರೀತಿಯ ಬ್ಯಾಟಿಂಗ್ ಅನುಭವಿಸಬೇಕಷ್ಟೇ, ವರ್ಣಿಸಲಸಾಧ್ಯ
1114
ಎಬಿಡಿ ಎಡಗೈ ಬ್ಯಾಟ್ಸ್‌ಮನ್ ಆಗಿ ಬದಲಾದ ಕ್ಷಣ
ಎಬಿಡಿ ಎಡಗೈ ಬ್ಯಾಟ್ಸ್‌ಮನ್ ಆಗಿ ಬದಲಾದ ಕ್ಷಣ
1214
ಎಬಿಡಿಯ ನಟರಾಜ ಭಂಗಿಯ ಬ್ಯಾಟಿಂಗ್
ಎಬಿಡಿಯ ನಟರಾಜ ಭಂಗಿಯ ಬ್ಯಾಟಿಂಗ್
1314
ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಬಿಡಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕಾತುರರಾಗಿರುವ ಅಭಿಮಾನಿಗಳು
ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಬಿಡಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕಾತುರರಾಗಿರುವ ಅಭಿಮಾನಿಗಳು
1414
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿನ ಆಪತ್ಬಾಂಧವ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿನ ಆಪತ್ಬಾಂಧವ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories