ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ಈ ಮೂವರನ್ನು ರೀಟೈನ್‌ ಮಾಡಿಕೊಳ್ಳಬೇಕೆಂದ ಆಕಾಶ್ ಚೋಪ್ರಾ

First Published | May 28, 2021, 6:58 PM IST

ಬೆಂಗಳೂರು: ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಪ್ರದರ್ಶನವನ್ನೇ ತೋರಿತ್ತು. 2022ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಒಂದು ವೇಳೆ ಕೇವಲ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದ್ದರೆ ಮುಂಬೈ ಇಂಡಿಯನ್ಸ್‌ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.
ಇದೀಗ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಮುಂಬೈ ಇಂಡಿಯನ್ಸ್‌ ಈ ಮೂವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬೇಕು ಎಂದಿದ್ದಾರೆ. ಅಷ್ಟಕ್ಕೂ ಯಾರು ಆ ಮೂವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ರೋಹಿತ್ ಶರ್ಮಾ
ಮೊದಲ ಆಯ್ಕೆಯಾಗಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರನ್ನು ರೀಟೈನ್ ಮಾಡಿಕೊಳ್ಳಬೇಕು ಎಂದಿದ್ದಾರೆ.
Tap to resize

ರೋಹಿತ್ ಶರ್ಮಾಗೆ ಉತ್ತಮ ನಾಯಕತ್ವ ಗುಣಗಳಿದ್ದು, ತಂಡ ಕಟ್ಟುವ ವಿಚಾರದಲ್ಲಿ ರೋಹಿತ್ ಶರ್ಮಾ ನೋಡಿ ಕಲಿಯುವುದು ಸಾಕಷ್ಟು ಇದೆ. ಐಪಿಎಲ್‌ನಲ್ಲಿ ರೋಹಿತ್ ಶರ್ಮಾಗಿಂತ ಉತ್ತಮ ನಾಯಕನನ್ನು ಹುಡುಕುವುದು ಕಷ್ಟಸಾಧ್ಯ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
2. ಜಸ್ಪ್ರೀತ್ ಬುಮ್ರಾ
ಮುಂಬೈ ಇಂಡಿಯನ್ಸ್‌ ತನ್ನ ಎರಡನೇ ರೀಟೈನ್‌ ಆಗಿ ಡೆತ್ ಓವರ್‌ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾಕೆಂದರೆ ಅವರಂತಹ ಮಾರಕ ವೇಗಿ ಮತ್ತೊಬ್ಬರಿಲ್ಲ ಎಂದಿದ್ದಾರೆ.
ಟಿ20 ಕ್ರಿಕೆಟ್‌ಗೆ ಬುಮ್ರಾ ಹೇಳಿ ಮಾಡಿಸಿದ ಬೌಲರ್. ಜೋಫ್ರಾ ಆರ್ಚರ್‌ ಹಾಗೂ ಬುಮ್ರಾ ಯಾವುದೇ ತಂಡದ ಪಾಲಿಗೆ ನಿಜವಾದ ಆಸ್ತಿಯಿದ್ದಂತೆ ಎಂದು ಚೋಪ್ರಾ ಗುಣಗಾನ ಮಾಡಿದ್ದಾರೆ.
3. ಹಾರ್ದಿಕ್ ಪಾಂಡ್ಯ
ಇನ್ನು ಕೇವಲ ಒಂದು ಆರ್‌ಟಿಎಂ(ರೈಟ್‌ ಟು ಮ್ಯಾಚ್) ಅವಕಾಶವಿದ್ದರೆ, ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ರೀಟೈನ್‌ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹಾರ್ದಿಕ್‌ಗೆ ಇದೆ ಎಂದು ಚೋಪ್ರಾ ಹೇಳಿದ್ದಾರೆ.

Latest Videos

click me!