2021ನೇ ಐಪಿಎಲ್ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಇನ್ನು 10 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
undefined
2021ರ ಐಪಿಎಲ್ ಟೂರ್ನಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ಯಜುವೇಂದ್ರ ಚಹಾಲ್ ಅವರನ್ನು ಉಳಿಸಿಕೊಂಡಿದೆ.
undefined
ದೇವದತ್ ಪಡಿಕ್ಕಲ್, ವಾಶಿಂಗ್ಟನ್ ಸುಂದರ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಸ್ಥಾನ ಕೂಡ ಭದ್ರವಾಗಿದೆ. ಮುಂದಿನ ಆವೃತ್ತಿಯಲ್ಲೂ ಈ ಆಟಗಾರರು ಆರ್‌ಸಿಬಿ ತಂಡ ಪ್ರತಿನಿಧಿಸಲಿದ್ದಾರೆ.
undefined
ವೇಗಿ ನವದೀಪ್ ಸೈನಿ, ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಮ್ ಝಂಪಾ ಹಾಗೂ ಶಹಬಾಝ್ ಅಹಮ್ಮದ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
undefined
ಆರ್‌ಸಿಬಿ ಉಳಿಸಿಕೊಂಡ ಆಟಗಾರರ ಪೈಕಿ ಜೋಶ್ ಫಿಲಿಪ್, ಕೇನ್ ರಿಚರ್ಡ್ಸನ್ ಹಾಗೂ ಪವನ್ ದೇಶಪಾಂಡೆ ಕೂಡ ಇದ್ದಾರೆ. ಈ ಮೂಲಕ ಪಡಿಕ್ಕಲ್ ಹಾಗೂ ದೇಶಪಾಂಡೆ ಇಬ್ಬರು ಕನ್ನಡಿಗರು ಆರ್‌ಸಿಬಿ ತಂಡದಲ್ಲಿ ಉಳಿದುಕೊಂಡಿದ್ದಾರೆ.
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟ 10 ಆಟಗಾರರ ಪೈಕಿ ಮೊಯಿನ್ ಆಲಿ, ಶಿವಂ ದುಬೆ, ಗುರುಕೀರತ್ ಸಿಂಗ್ ಮಾನ್, ಆ್ಯರೋನ್ ಫಿಂಚ್, ಕ್ರಿಸ್ ಮೊರೀಸ್ ಸೇರಿದ್ದಾರೆ.
undefined
ಇನ್ನು ಪವನ್ ನೇಗಿ, ಪಾರ್ಥೀವ್ ಪಟೇಲ್, ಡೇಲ್ ಸ್ಟೇನ್, ಇಸ್ರು ಉದಾನ, ಉಮೇಶ್ ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದೆ.
undefined
2021ರ ಐಪಿಎಲ್ ಟೂರ್ನಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಈ ವೇಳೆ ಮತ್ತೆ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಲು ಮುಂದಾಗಿದೆ
undefined