ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಅತೀ ದೊಡ್ಡ 3 ತಪ್ಪು ಬಹಿರಂಗ ಪಡಿಸಿದ MSK ಪ್ರಸಾದ್!

First Published May 2, 2020, 8:51 PM IST

 ಟೀಂ ಇಂಡಿಯಾ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅವಧಿಯಲ್ಲಿ ಟೀಂ ಇಂಡಿಯಾ ಹಲವು ಐತಿಹಾಸಿಕ ಪ್ರಶಸ್ತಿ ಗೆದ್ದಿಕೊಂಡಿದೆ. ಇಷ್ಟೇ ಅಲ್ಲ ಹಲವು ಮಹತ್ವದ ಪ್ರಶಸ್ತಿಯಿಂದ ವಂಚಿತವಾಗಿದೆ. ಇದರ ಜೊತೆಗೆ ಅತೀ ಹೆಚ್ಚು ಟೀಕೆಗಳಿಗೂ ಆಯ್ಕೆ ಸಮಿತಿ ಗುರಿಯಾಗಿತ್ತು. ಆಯ್ಕೆ ಸಮಿತಿಯಲ್ಲಿ ಮಾಡಿದ ಎಡವಟ್ಟುಗಳಿಗೆ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟಿಗರೂ ಗರಂ ಆಗಿದ್ದರು.  ಇದೀಗ MSK ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಮೂರು ಪ್ರಮುಖ ತಪ್ಪುಗಳನ್ನು ಬಹಿರಂಗ ಪಡಿಸಿದ್ದಾರೆ. 
 

2016ರಿಂದ 2020ರ ವರಗೆ ಸುದೀರ್ಘ ಕಾಲ ಟೀಂ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಕ್ರಿಟಿಗ ಎಂ.ಎಸ್.‌ಕೆ.ಪ್ರಸಾದ್
undefined
MSK ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಹಲವು ಸವಾಲುಗಳನ್ನು ಎದುರಿಸಿದೆ. ಅಷ್ಟೇ ಟೀಕೆಗಳಿಗೂ ಗುರಿಯಾಗಿದೆ. ಕೆಲ ನಿರ್ಧಾರಗಳಿಗೆ ಸ್ವತಃ ಕ್ರಿಕೆಟಿಗರೇ ವಿರೋಧ ವ್ಯಕ್ತಪಡಿಸಿದ್ದರು
undefined
ತನ್ನ ಅವಧಿಯಲ್ಲಿ ಮಾಡಿದ ಪ್ರಮುಖ 3 ತಪ್ಪುಗಳನ್ನು ಬಹಿರಂಗ ಪಡಿಸಿದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ MSK ಪ್ರಸಾದ್
undefined
ತ್ರಿಶತಕ ಸಿಡಿಸಿದ ಕನ್ನಡಿ ಕರುಣ್ ನಾಯರ್‌ಗೆ ಇಂಗ್ಲೆಂಡ್ ಪ್ರವಾಸದ ಬಳಿಕ ಅವಕಾಶವೇ ನೀಡಲಿಲ್ಲ. ಕರುಣ್ ಕಮ್‌ಬ್ಯಾಕ್‌ಗೆ ಹಲವು ಪ್ರಯತ್ನ ಮಾಡಿದರೂ ಆಯ್ಕೆ ಸಮಿತಿ ಕಣ್ಣೆತ್ತಿ ನೋಡಲೇ ಇಲ್ಲ. ಇದು ತನ್ನ ಅವಧಿಯಲ್ಲಿ ಮಾಡಿದ ಮೊದಲ ಹಾಗೂ ಬಹುದೊಡ್ಡ ತಪ್ಪು ಎಂದಿರುವ MSK
undefined
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ಕರುಣ್ ನಾಯರ್ ಪಾತ್ರರಾಗಿದ್ದರು. ಮೊದಲ ಭಾರತೀಯನೆಂಬ ಹೆಗ್ಗಳಿಗೆಗೆ ವಿರೇಂದ್ರ ಸೆಹ್ವಾಗ್ ಪಾತ್ರರಾಗಿದ್ದಾರೆ.
undefined
2019ರ ವಿಶ್ವಕಪ್ ಸಂಭಾವ್ಯ ತಂಡದಲ್ಲಿದ್ದ ಅಂಬಾಟಿ ರಾಯುಡುವನ್ನು ಕೈಬಿಟ್ಟ ನಿರ್ಧಾರ 2ನೇ ತಪ್ಪು ಎಂದಿರುವ MSK
undefined
ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಅಂಬಾಟಿ ರಾಯಡು ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಪಡಿಸಿದ್ದರು. ಬಳಿಕ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
undefined
ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕಡೆಗಣಿಸಿರುವುದು MSK ಮಾಡಿದ 3ನೇ ತಪ್ಪು ಎಂದಿದ್ದಾರೆ. ಅಶ್ವಿನ್ ಹಾಗೂ ಜಡೇಜಾರನ್ನು ಆಯ್ಕೆ ಸಮಿತಿ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಿಗೊಳಿಸಿತ್ತು
undefined
ಅಶ್ವಿನ್ ಹಾಗೂ ಜಡೇಜಾ ಬದಲು ನಿಗದಿತ ಓವರ್ ಕ್ರಿಕೆಟ್‌ಗೆ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಲಾಯಿತು. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದ ಅಶ್ವಿನ್ ಹಾಗೂ ಜಡೇಜಾ ಜೋಡಿಯನ್ನು ಕಡೆಗಣಿಸಲಾಯಿತು.
undefined
ಜಡೇಜಾ ನಿಗದಿತ ಓವರ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಆರ್ ಅಶ್ವಿನ್ ಈಗಲೂ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ
undefined
click me!