ಟೀಂ ಇಂಡಿಯಾ ಪ್ರಿನ್ಸ್ ಶುಭ್‌ಮನ್‌ ಗಿಲ್ ಗರ್ಲ್‌ಫ್ರೆಂಡ್ಸ್‌ ಒಬ್ಬಿಬ್ಬರಲ್ಲ..! ಗಿಲ್ ನಿಜವಾದ ಗೆಳತಿ ಯಾರು?

Published : Sep 08, 2024, 05:05 PM IST

ಭಾರತ ತಂಡದ ಯುವ ಆಟಗಾರ ಶುಭ್‌ಮನ್ ಗಿಲ್ ಸೆಪ್ಟೆಂಬರ್ 8 ರಂದು ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತ ತಂಡದ ಪ್ರಿನ್ಸ್ ಎಂದು ಕರೆಯಲ್ಪಡುವ ಶುಭ್‌ಮನ್ ಅವರು ತಮ್ಮ ಸ್ಟೈಲಿಶ್ ಬ್ಯಾಟಿಂಗ್ ಮೂಲಕ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆಯನ್ನು ಗಳಿಸಿದ್ದಾರೆ. ಹಲವಾರು ಪ್ರಸಿದ್ಧ ಹೆಸರುಗಳು ಚರ್ಚೆಯಲ್ಲಿದ್ದವು, ಆದರೆ ಗಿಲ್ ಅವರ ನಿಜವಾದ ಗೆಳತಿ ಯಾರು?

PREV
112
ಟೀಂ ಇಂಡಿಯಾ ಪ್ರಿನ್ಸ್ ಶುಭ್‌ಮನ್‌ ಗಿಲ್ ಗರ್ಲ್‌ಫ್ರೆಂಡ್ಸ್‌ ಒಬ್ಬಿಬ್ಬರಲ್ಲ..!  ಗಿಲ್ ನಿಜವಾದ ಗೆಳತಿ ಯಾರು?

ಶುಭಮನ್ ಗಿಲ್ ಗೆಳತಿಯರು: ಭಾರತ ತಂಡದ ಯುವ ಆಟಗಾರ ಶುಭಮನ್ ಗಿಲ್ ಸೆಪ್ಟೆಂಬರ್ 8 ರಂದು ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2018 ರಲ್ಲಿ, ಅವರು ಭಾರತದ ಅಂಡರ್ 19 ವಿಶ್ವಕಪ್ ವಿಜೇತ ತಂಡದಲ್ಲಿ ಸರಣಿಶ್ರೇಷ್ಠ ಆಟಗಾರ ಎನಿಸಿಕೊಂಡು ಗಮನ ಸೆಳೆದಿದ್ದರು

212


ಏಕದಿನ ಕ್ರಿಕೆಟ್‌ ವೇಗವಾಗಿ 2,000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು 2023 ರಲ್ಲಿ ಒಡಿಐಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.  2023ರ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿ 890 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು

312

ಭಾರತ ತಂಡದ ಪ್ರಿನ್ಸ್ ಎಂದು ಕರೆಯಲ್ಪಡುವ ಶುಭಮನ್ ಗಿಲ್ ಅವರು ತಮ್ಮ ಸ್ಟೈಲಿಶ್ ಬ್ಯಾಟಿಂಗ್ ಮೂಲಕ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾರತ ತಂಡಕ್ಕಾಗಿ 25 ಟೆಸ್ಟ್ ಪಂದ್ಯಗಳಲ್ಲಿ 35.5 ಸರಾಸರಿಯಲ್ಲಿ 1492 ರನ್ ಗಳಿಸಿದ್ದಾರೆ. 

412

ಇನ್ನು 47 ಏಕದಿನ ಪಂದ್ಯಗಳಲ್ಲಿ ಆಡಿ 2328 ರನ್ ಗಳಿಸಿದ್ದಾರೆ. ಅವರ ಸರಾಸರಿ 58.1. ಇದಲ್ಲದೆ, ಅವರು 21 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 30.4 ಸರಾಸರಿಯಲ್ಲಿ 587 ರನ್ ಗಳಿಸಿದ್ದಾರೆ.

512

ಕ್ರಿಕೆಟ್‌ನಲ್ಲಿ ಅಗಾಧ ಯಶಸ್ಸು ಗಳಿಸಿರುವ ಗಿಲ್, ಕ್ರಿಕೆಟ್ ಮೈದಾನದ ಹೊರಯೂ ತಮ್ಮ ಪ್ರೇಮ ವ್ಯವಹಾರಗಳಿಂದಾಗಿ ಬಾಲಿವುಡ್ ಜಗತ್ತಿನಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಪ್ರೇಮ ವ್ಯವಹಾರಗಳ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ.

612

ಹಲವಾರು ಸುಂದರ ಮಹಿಳೆಯರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿದ್ದರಿಂದ ಶುಭಮನ್ ಸದಾ ಚರ್ಚೆಯಲ್ಲಿರುವ ಹೆಸರು ಎನಸಿಕೊಂಡಿದೆ. ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರ ಹೆಸರು ಇತ್ತೀಚೆಗೆ ಟಿವಿ ನಟಿ ರಿತಿಮಾ ಪಂಡಿತ್ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಣೆದುಕೊಂಡಿತ್ತು.

712

ಟಿವಿ ನಟಿ ರಿತಿಮಾ ಪಂಡಿತ್ ಅವರನ್ನು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈ ಬಗ್ಗೆ ರಿತಿಮಾ ಪಂಡಿತ್ ಸ್ಪಷ್ಟನೆ ನೀಡಬೇಕಾಯಿತು. ತನಗೆ ಶುಭಮನ್ ಗಿಲ್ ಅವರ ಪರಿಚಯವಿಲ್ಲ, ಅವರನ್ನು ಭೇಟಿಯೂ ಆಗಿಲ್ಲ ಎಂದು ಹೇಳಿದ್ದರು.

812

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಅವರೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಶುಭಮನ್ ಗಿಲ್ ಅವರ ಹೆಸರು ಸುದ್ದಿಯಾಯಿತು. ಇಬ್ಬರೂ ರೆಸ್ಟೋರೆಂಟ್‌ವೊಂದರಲ್ಲಿ ಒಟ್ಟಿಗೆ ಊಟ ಮಾಡುತ್ತಿದ್ದರು. ಅದರ ನಂತರ ಅವರನ್ನು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

912

ಇದರೊಂದಿಗೆ, ಶುಭಮನ್ ಗಿಲ್ ಅವರ ಗೆಳತಿ ಸಾರಾ ಅಲಿ ಖಾನ್ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿತು. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಕೆಲವು ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇವರ ಪ್ರೀತಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

1012

ಸಾರಾ ತೆಂಡೂಲ್ಕರ್ ಅವರನ್ನು ಪ್ರಸ್ತಾಪಿಸದೆ ಶುಭಮನ್ ಗಿಲ್ ಅವರ ಪ್ರೇಮಕಥೆಗಳು ಪೂರ್ಣಗೊಳ್ಳುವುದಿಲ್ಲ. ಐಪಿಎಲ್ 2020 ರ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ಅವರು ಶುಭಮನ್ ಅವರನ್ನು ಹೊಗಳಿದ್ದರು. ಇದರಿಂದ ಇವರಿಬ್ಬರ ಪ್ರೀತಿಯ ಬಗ್ಗೆ ವದಂತಿಗಳು ಹಬ್ಬಿದ್ದವು.

1112

ಇದೇ ವೇಳೆ, ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬಂದಿತ್ತು. ಆದರೆ, ಅದರ ನಂತರ ಅವರ ಬಗ್ಗೆ ಹೆಚ್ಚು ಕೇಳಿಬಂದಿಲ್ಲ.

1212

ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡುವ ಮತ್ತು ನಂತರ ಮತ್ತೆ ಫಾಲೋ ಮಾಡುವ ಕಥೆಗಳಿದ್ದವು. ಈ ಸಂಬಂಧದ ಬಗ್ಗೆ ಇಬ್ಬರು ಸೆಲೆಬ್ರಿಟಿಗಳು ಇದುವರೆಗೆ ಏನನ್ನೂ ಹೇಳಿಕೊಂಡಿಲ್ಲ.

Read more Photos on
click me!

Recommended Stories