ರಾಹುಲ್‌ ದ್ರಾವಿಡ್ ಬಳಿಕ ಈ ಐವರಲ್ಲಿ ಯಾರಾಗಬಹುದು ಟೀಂ ಇಂಡಿಯಾ ಹೆಡ್‌ ಕೋಚ್?

Published : Jun 14, 2023, 03:56 PM IST

ನವದೆಹಲಿ: ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, ಐಸಿಸಿ ಟೂರ್ನಿಗಳಲ್ಲಿ ಕಪ್‌ ಗೆಲ್ಲಲು ವಿಫಲವಾಗಿದೆ. ಹೀಗಾಗಿ ಒಂದು ವೇಳೆ ದ್ರಾವಿಡ್ ಕೋಚ್ ಹುದ್ದೆ ತ್ಯಜಿಸಿದರೆ ಟೀಂ ಇಂಡಿಯಾ ಹೆಡ್‌ ಕೋಚ್ ಯಾರಾಗಬಹುದು ಎನ್ನುವ ಕುತೂಹಲ ಜೋರಾಗಿದೆ  

PREV
114
ರಾಹುಲ್‌ ದ್ರಾವಿಡ್ ಬಳಿಕ ಈ ಐವರಲ್ಲಿ ಯಾರಾಗಬಹುದು ಟೀಂ ಇಂಡಿಯಾ ಹೆಡ್‌ ಕೋಚ್?

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, ಐಸಿಸಿ ಟೂರ್ನಿಗಳಲ್ಲಿ ಕಪ್‌ ಗೆಲ್ಲಲು ವಿಫಲವಾಗಿದೆ  2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಮುಕ್ತಾಯದ ಬಳಿಕ ದ್ರಾವಿಡ್ ಕೋಚ್ ಅವಧಿಯ ಒಪ್ಪಂದ ಕೊನೆಯಾಗಲಿದೆ.

214

ರಾಹುಲ್‌ ದ್ರಾವಿಡ್ ಮತ್ತೆ ಕೋಚ್ ಆಗಿ ಮುಂದುವರೆಯದಿದ್ದರೆ, 2023ರ ಏಕದಿನ ವಿಶ್ವಕಪ್ ಬಳಿಕ ಯಾರಾಗಬಹುದು ಭಾರತದ ಹೆಡ್‌ ಕೋಚ್ ಎನ್ನುವ ಚರ್ಚೆ ಜೋರಾಗಿದೆ. ಹೀಗಾಗಿ ಇಲ್ಲಿವೆ ನೋಡಿ 5 ಆಯ್ಕೆಗಳು
 

314
1. ಆಶಿಶ್‌ ನೆಹ್ರಾ:

ಟೀಂ ಇಂಡಿಯಾ ಮಾಜಿ ಆಟಗಾರ ನೆಹ್ರಾ, ಸದ್ಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

414

ಆಶಿಶ್‌ ನೆಹ್ರಾ ಮಾರ್ಗದರ್ಶನದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಎರಡು ಬಾರಿ ಫೈನಲ್‌ಗೇರಿದ್ದು, ಒಮ್ಮೆ ಚಾಂಪಿಯನ್ ಪಟ್ಟವನ್ನೂ ಅಲಂಕರಿಸಿದೆ

514

ಐಪಿಎಲ್‌ ಟ್ರೋಫಿ ಗೆದ್ದ ಮೊದಲ ಭಾರತೀಯ ಕೋಚ್ ಎನಿಸಿರುವ ನೆಹ್ರಾ, ಭಾರತದ ಭವಿಷ್ಯದ ಹೆಡ್‌ ಕೋಚ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

614
2. ಜಸ್ಟಿನ್ ಲ್ಯಾಂಗರ್:

ಜಸ್ಟಿನ್ ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡವು 2021ರ ಟಿ20 ವಿಶ್ವಕಪ್, 2021-22ರ ಆಷಸ್ ಟೆಸ್ಟ್ ಸರಣಿಯನ್ನು ಜಯಿಸಿದೆ.
 

714

ಆಸ್ಟ್ರೇಲಿಯಾದ ಅನುಭವಿ ಕ್ರಿಕೆಟಿಗರಾಗಿರುವ ಲ್ಯಾಂಗರ್, ಆಸ್ಟ್ರೇಲಿಯಾದ ಯಶಸ್ವಿ ಕೋಚ್ ಎನ್ವುವುದನ್ನು ಸಾಬೀತುಪಡಿಸಿದ್ದು, ಇದೀಗ ಟೀಂ ಇಂಡಿಯಾ ಭವಿಷ್ಯದ ಹೆಡ್ ಕೋಚ್ ಆದರೂ ಅಚ್ಚರಿಯಿಲ್ಲ

814
3. ಸ್ಟಿಫನ್ ಫ್ಲೆಮಿಂಗ್:

ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಸ್ಟಿಫನ್ ಫ್ಲೆಮಿಂಗ್, ಸದ್ಯ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್ ಕೋಚ್

914

ಕಳೆದೊಂದು ದಶಕದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚಿಂಗ್ ಸ್ಟಾಫ್ ಆಗಿರುವ ಫ್ಲಮಿಂಗ್‌, ದ್ರಾವಿಡ್ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ

1014
4. ಗೌತಮ್ ಗಂಭೀರ್

ಭಾರತದ ಯಶಸ್ವಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಸದ್ಯ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್

1114

ಉಳಿದವರಿಗೆ ಹೋಲಿಸಿದರೆ, ಗಂಭೀರ್‌ಗೆ ಹೆಡ್‌ಕೋಚ್ ಆಗುವ ಅನುಭವವಿಲ್ಲದಿದ್ದರೂ, ಅವರ ಆಕ್ರಮಣಕಾರಿ ರಣತಂತ್ರ ತಂಡಕ್ಕೆ ಆಸರೆಯಾಗಬಹುದು.

1214
5. ರಿಕಿ ಪಾಂಟಿಂಗ್‌:

ಅತಿಹೆಚ್ಚು ಐಸಿಸಿ ಟ್ರೋಫಿ ಗೆದ್ದ ಆಟಗಾರ ಎನ್ನುವ ಹೆಗ್ಗಳಿಕೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ.

1314

ರಿಕಿ ಪಾಂಟಿಂಗ್ ನಾಯಕನಾಗಿ ಮಾತ್ರವಲ್ಲದೇ ಹೆಡ್‌ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದು, 2015ರಲ್ಲಿ ಪಾಂಟಿಂಗ್ ಮಾರ್ಗದರ್ಶನದ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಆಗಿತ್ತು.

1414

ಇನ್ನು 2020ರಲ್ಲಿ ಡೆಲ್ಲಿ ತಂಡವು ಮೊದಲ ಬಾರಿಗೆ ಐಪಿಎಲ್ ಫೈನಲ್‌ಗೇರುವಲ್ಲಿ ಪಂಟರ್ ಪಾತ್ರವಿದೆ. ಸದ್ಯ ಡೆಲ್ಲಿ ಹೆಡ್‌ಕೋಚ್‌ ಸ್ಥಾನಕ್ಕೆ ಪಾಂಟಿಂಗ್ ನಿವೃತ್ತಿ ಘೋಷಿಸುವ ಸಾಧ್ಯತೆಯಿದ್ದು, ಮುಂದೆ ಟೀಂ ಇಂಡಿಯಾ ಹೆಡ್‌ ಕೋಚ್ ಆದರೂ ಅಚ್ಚರಿಯಿಲ್ಲ.

Read more Photos on
click me!

Recommended Stories