ಐಪಿಎಲ್ 2022: ಮೆಗಾ ಹರಾಜಿನಲ್ಲಿ ಸೂರ್ಯಕುಮಾರ್ ಮೇಲೆ ಕಣ್ಣಿಟ್ಟಿವೆ ಈ 5 ತಂಡಗಳು..!

First Published May 31, 2021, 5:03 PM IST

ಬೆಂಗಳೂರು: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್ ಲೀಗ್, ದಿನಕಳೆದಂತೆ ತನ್ನ ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಜತೆ ಜತೆಗೆ ದೇಸಿ ಕ್ರಿಕೆಟಿಗರು ತಾವೇನು ಕಮ್ಮಿ ಇಲ್ಲ ಎನ್ನುವಂತೆ ಈ ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
5 ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 2022 ಮೆಗಾ ಹರಾಜಿನಲ್ಲಿ ಫ್ರಾಂಚೈಸಿ 5 ಆಟಗಾರರನ್ನು(ಮೂವರು ರೀಟೈನ್‌ ಹಾಗೂ ಇಬ್ಬರನ್ನು ಆರ್‌ಟಿಎಂ ಅದರಲ್ಲಿ ಓರ್ವ ವಿದೇಶಿ ಆಟಗಾರು ಮತ್ತು ಅನ್‌ ಕ್ಯಾಪ್‌ ಆಟಗಾರ) ಉಳಿಸಿಕೊಳ್ಳುವ ಅವಕಾಶ ಇದ್ದರೆ ರೋಹಿತ್ ಪಡೆ, ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿದೆ. ಹೀಗಾದಲ್ಲಿ 5 ಪ್ರಮುಖ ತಂಡಗಳು ಸೂರ್ಯಕುಮಾರ್ ಯಾದವ್‌ ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ.
 

1. ಚೆನ್ನೈ ಸೂಪರ್‌ ಕಿಂಗ್ಸ್‌
undefined
ಸಾಕಷ್ಟು ಹಿರಿಯ ಆಟಗಾರರನ್ನು ಹೊಂದಿರುವ ಸಿಎಸ್‌ಕೆ ಡ್ಯಾಡೀಸ್ ಆರ್ಮಿ ಎನಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಧೋನಿ, ತಾಹಿರ್, ಡು ಪ್ಲೆಸಿಸ್‌, ಬ್ರಾವೋ ಅವರಂತಹ ಆಟಗಾರರು ಐಪಿಎಲ್‌ಗೆ ಗುಡ್‌ಬೈ ಹೇಳುವ ಸಾಧ್ಯತೆಯಿದೆ. ರೈನಾ, ರಾಯುಡು ಜತೆಗೆ ಸೂರ್ಯ ಕುಮಾರ್ ತಂಡ ಕೂಡಿಕೊಂಡರೆ ಮಧ್ಯಮ ಕ್ರಮಾಂಕ ಬಲಿಷ್ಠವಾಗಲಿದೆ. ಹೀಗಾಗಿ ಸಿಎಸ್‌ಕೆ ಫ್ರಾಂಚೈಸಿ ಸೂರ್ಯನ ಮೇಲೆ ಕಣ್ಣಿಟ್ಟಿದೆ.
undefined
2. ಪಂಜಾಬ್ ಕಿಂಗ್ಸ್‌
undefined
14ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ 8 ಪಂದ್ಯಗಳನ್ನಾಡಿ ಕೇವಲ 3 ಪಂದ್ಯಗಳನ್ನಷ್ಟೇ ಜಯಿಸಿದೆ. ಒಂದು ವೇಳೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರೆ ಪಂಜಾಬ್ ದಿಢೀರ್ ಕುಸಿತ ಕಾಣುತ್ತಿದೆ. ಹೀಗಾಗಿ ಪೂರನ್ ಜತೆ ಸೂರ್ಯ ಪಂಜಾಬ್ ಕೂಡಿಕೊಂಡರೆ ರನ್‌ ಮಳೆ ಹರಿಯುವುದು ಗ್ಯಾರಂಟಿ
undefined
3. ರಾಯಲ್ ಚಾಲೆಂಜರ್ಸ್‌ ಬೆಂಗಳೂರು
undefined
ಈ ಆವೃತ್ತಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನವನ್ನೇ ತೋರಿದೆ. ಆದರೆ ಅಗ್ರಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ವಿಕೆಟ್ ಬೇಗನೇ ಪತನವಾದರೆ, ಆನಂತರ ತಂಡಕ್ಕೆ ಆಸರೆಯಾಗಬಲ್ಲ ನಂಬಿಕಸ್ಥ ಬ್ಯಾಟ್ಸ್‌ಮನ್‌ ಮತ್ತೊಬ್ಬರಿಲ್ಲ. ಹೀಗಾಗಿ ಸೂರ್ಯ ಆರ್‌ಸಿಬಿ ತೆಕ್ಕೆಗೆ ಬಂದರೆ, ಎಬಿಡಿ ಡೆತ್‌ ಓವರ್‌ನಲ್ಲಿ ಅಬ್ಬರಿಸಲು ಇನ್ನಷ್ಟು ಸುಲಭವಾಗಲಿದೆ.
undefined
4. ಸನ್‌ರೈಸರ್ಸ್ ಹೈದರಾಬಾದ್
undefined
ಈ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ 7 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಸೋಲಿನ ಕಹಿ ಉಂಡಿದೆ. ಹೈದರಾಬಾದ್‌ ಉತ್ತಮ ಆರಂಭದ ಹೊರತಾಗಿಯೂ ಗೆಲುವಿನ ಗೆರೆ ತಲುಪಲು ಸಾಧ್ಯವಾಗುತ್ತಿಲ್ಲ. ಕಾರಣ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹ ಪರಿಸ್ಥಿತಿಗೆ ಹೊಂದಿಕೊಂಡು ಬ್ಯಾಟ್ ಬೀಸುತ್ತಿಲ್ಲ. ಹೀಗಾಗಿ ಹೈದರಾಬಾದ್‌ ಫ್ರಾಂಚೈಸಿ ಸೂರ್ಯನಿಗೆ ಗಾಳ ಹಾಕುವ ಸಾಧ್ಯತೆಯಿದೆ.
undefined
5. ರಾಜಸ್ಥಾನ ರಾಯಲ್ಸ್‌
undefined
ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಸ್ಟೀವ್ ಸ್ಮಿತ್ ಹಾಗೂ ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ಮಧ್ಯಮ ಕ್ರಮಾಂಕ ಸಾಕಷ್ಟು ದುರ್ಬಲ ಎನಿಸಿಕೊಂಡಿದೆ. ಅದರಲ್ಲೂ ಈ ಆವೃತ್ತಿಯಲ್ಲಿ ಸ್ಟೋಕ್ಸ್ ಹಾಗೂ ಆರ್ಚರ್‌ ಅನುಪಸ್ಥಿತಿ ತಂಡವನ್ನು ಇನ್ನಿಲ್ಲದಂತೆ ಕಾಡಿದೆ. ಹೀಗಾಗಿ ರಾಯಲ್ಸ್‌ ಸಾಕಷ್ಟು ಅಳೆದು ತೂಗಿ ಮುಂಬರುವ ಆವೃತ್ತಿಗೂ ಮುನ್ನ ಸೂರ್ಯಕುಮಾರ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ.
undefined
click me!