ದಿಗ್ಗಜ ಕಪಿಲ್‌ XI ಕನಸಿನ ಏಕದಿನ ತಂಡ ಪ್ರಕಟ; ದಾದಾಗಿಲ್ಲ ಸ್ಥಾನ..!

First Published | Nov 24, 2020, 5:33 PM IST

ನವದೆಹಲಿ: ವಿಶ್ವಕ್ರಿಕೆಟ್‌ ಕಂಡ ಶ್ರೇಷ್ಠ ಆಲ್ರೌಂಡರ್‌, ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ತಮ್ಮ ನೆಚ್ಚಿನ ಏಕದಿನ ಭಾರತ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡಿದ್ದು ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ.
ಕಪಿಲ್ XI ಸಾಕಷ್ಟು ಬಲಿಷ್ಠವಾಗಿದ್ದರೂ, ಸೌರವ್‌ ಗಂಗೂಲಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಬಾಲಿವುಡ್ ನಟಿ ನೇಹಾ ಧೂಪಿಯಾ ನಡೆಸಿಕೊಡುವ ನೋ ಫಿಲ್ಟರ್‌ ವಿತ್ ನೇಹ ಕಾರ್ಯಕ್ರಮದಲ್ಲಿ ಕಪಿಲ್ ದೇವ್ ತಮ್ಮ ನೆಚ್ಚಿನ ಭಾರತೀಯ ಏಕದಿನ ತಂಡವನ್ನು ಆಯ್ಕೆ ಮಾಡಿದ್ದಾರೆ. ಕಪಿಲ್ XI ನಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ಸಚಿನ್ ತೆಂಡುಲ್ಕರ್: ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ದಿಗ್ಗಜ ಬ್ಯಾಟ್ಸ್‌ಮನ್
2.ವಿರೇಂದ್ರ ಸೆಹ್ವಾಗ್: ವಿಸ್ಫೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಡೆಲ್ಲಿ ಡ್ಯಾಷರ್
Tap to resize

3. ವಿರಾಟ್ ಕೊಹ್ಲಿ: ಟೀಂ ಇಂಡಿಯಾ ಹಾಲಿ ನಾಯಕ, ರನ್‌ ಮಷೀನ್ ಎಂದೇ ಗುರುತಿಸಿಕೊಂಡಿರುವ ಬ್ಯಾಟ್ಸ್‌ಮನ್
4. ರಾಹುಲ್ ದ್ರಾವಿಡ್: ದ ವಾಲ್ ಖ್ಯಾತಿಯ ದ್ರಾವಿಡ್ ತಮ್ಮ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದ ನಂಬಿಕಸ್ಥ ಬ್ಯಾಟ್ಸ್‌ಮನ್
5. ಯುವರಾಜ್ ಸಿಂಗ್; ಸ್ಟಾರ್ ಆಲ್ರೌಂಡರ್, 2011ರ ಏಕದಿನ ವಿಶ್ವಕಪ್ ಹೀರೋ
6. ಎಂ ಎಸ್ ಧೋನಿ: ಕ್ಯಾಪ್ಟನ್ ಕೂಲ್, ಚಾಣಾಕ್ಷ ವಿಕೆಟ್ ಕೀಪರ್‌, ಗ್ರೇಟ್ ಮ್ಯಾಚ್ ಫಿನಿಶರ್, ಕಪಿಲ್ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್
7.ಜಾವಗಲ್ ಶ್ರೀನಾಥ್: ಮೈಸೂರ್‌ ಎಕ್ಸ್‌ಪ್ರೆಸ್ ಖ್ಯಾತಿಯ ವೇಗಿ, ದಶಕಗಳ ಕಾಲ ಟೀಂ ಇಂಡಿಯಾ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದ ಕರ್ನಾಟಕದ ವೇಗಿ
8. ಜಹೀರ್ ಖಾನ್: ಭಾರತ ಕಂಡ ಮತ್ತೋರ್ವ ಯಶಸ್ವಿ ವೇಗದ ಬೌಲರ್, 2011ರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಗದ ದಾಳಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಆಟಗಾರ
9.ಅನಿಲ್ ಕುಂಬ್ಳೆ: ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಕರ್ನಾಟಕದ ದಿಗ್ಗಜ ಲೆಗ್‌ಸ್ಪಿನ್ನರ್
10. ಹರ್ಭಜನ್ ಸಿಂಗ್: ಕುಂಬ್ಳೆ ಜತೆ ಏಕಾಂಗಿಯಾಗಿ ಟೀಂ ಇಂಡಿಯಾಗೆ ಗೆಲುವು ದಕ್ಕಿಸಿಕೊಟ್ಟ ಅನುಭವಿ ಆಫ್‌ಸ್ಪಿನ್ನರ್
11. ಜಸ್ಪ್ರೀತ್ ಬುಮ್ರಾ: ಡೆತ್ ಓವರ್ ಹಾಗೆಯೇ ಯಾರ್ಕರ್ ಸ್ಪೆಷಲಿಸ್ಟ್, ಆಧುನಿಕ ಕ್ರಿಕೆಟ್‌ನ ಡೇಂಜರಸ್ ಬೌಲರ್.

Latest Videos

click me!