ಇಂಗ್ಲೆಂಡ್‌ನ ತಾರಾ ಬ್ಯಾಟರ್ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 37ನೇ ಶತಕ ಬಾರಿಸಿ, ಗರಿಷ್ಠ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್‌ರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದಾರೆ.
28
ಭಾರತ ವಿರುದ್ಧ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರೂಟ್ ಈ ಸಾಧನೆ ಮಾಡಿದರು. ದ್ರಾವಿಡ್ 164 ಟೆಸ್ಟ್‌ಗಳಲ್ಲಿ 36 ಶತಕ ದಾಖಲಿಸಿದ್ದರು. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 118 ಟೆಸ್ಟ್‌ಗಳನ್ನಾಡಿದ್ದು, ಅವರೂ 36 ಶತಕ ಬಾರಿಸಿದ್ದಾರೆ.
38
ಟೆಸ್ಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಟಾಪ್ 5 ಬ್ಯಾಟರ್‌ಗಳು ಯಾರು ಎನ್ನುವುದನ್ನು ನೋಡೋಣ ಬನ್ನಿ
ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳನ್ನಾಡಿ 51 ಶತಕ ಸಿಡಿಸುವ ಮೂಲಕ ಮೊದಲ ಸ್ಥಾನಲ್ಲಿದ್ದಾರೆ.
58
2. ಜ್ಯಾಕ್ ಕಾಲಿಸ್:
ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜ್ಯಾಕ್ ಕಾಲಿಸ್ ಹರಿಣಗಳ ಪರ 166 ಟೆಸ್ಟ್ ಪಂದ್ಯಗಳನ್ನಾಡಿ 44 ಶತಕ ಸಿಡಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
68
3. ರಿಕಿ ಪಾಂಟಿಂಗ್
ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ 161 ಟೆಸ್ಟ್ ಪಂದ್ಯಗಳನ್ನಾಡಿ 41 ಶತಕ ಸಿಡಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
78
4. ಕುಮಾರ ಸಂಗಕ್ಕರ:
ಶ್ರೀಲಂಕಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಕ್ಕರ 134 ಟೆಸ್ಟ್ ಪಂದ್ಯಗಳನ್ನಾಡಿ 38 ಶತಕ ಸಿಡಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.
88
5. ಜೋ ರೂಟ್:
ಇಂಗ್ಲೆಂಡ್ ತಾರಾ ಕ್ರಿಕೆಟಿಗ ಜೋ ರೂಟ್ 156 ಟೆಸ್ಟ್ ಪಂದ್ಯಗಳನ್ನಾಡಿ 37ನೇ ಶತಕ ಸಿಡಿಸಿದ್ದು, ಸದ್ಯದಲ್ಲಿಯೇ ಸಂಗಕ್ಕರ ಹಾಗೂ ರಿಕಿ ಪಾಂಟಿಂಗ್ ಸೆಂಚುರಿ ರೆಕಾರ್ಡ್ ಮುರಿದರು ಅಚ್ಚರಿಯೇನಿಲ್ಲ.