Ind vs Ban ಇಶಾನ್ ಕಿಶನ್ ಒಂದು ದ್ವಿಶತಕ: ಹಲವು ದಾಖಲೆಗಳು ನುಚ್ಚುನೂರು..!

Published : Dec 10, 2022, 05:22 PM IST

ಛಟ್ಟೋಗ್ರಾಮ(ಡಿ.10): ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಇಶಾನ್‌ ಕಿಶನ್‌, ಬಾಂಗ್ಲಾದೇಶ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ದ್ವಿಶತಕದೊಂದಿಗೆ ಇಶಾನ್ ಕಿಶನ್‌ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇಶಾನ್ ಕಿಶನ್ ಒಂದು ದ್ವಿಶತಕದಿಂದ ನಿರ್ಮಾಣವಾದ ದಾಖಲೆಗಳ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ ನೋಡಿ

PREV
15
Ind vs Ban ಇಶಾನ್ ಕಿಶನ್ ಒಂದು ದ್ವಿಶತಕ: ಹಲವು ದಾಖಲೆಗಳು ನುಚ್ಚುನೂರು..!
1. ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಮೊದಲ ಕ್ರಿಕೆಟಿಗ ಇಶಾನ್ ಕಿಶನ್‌

ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 85 ಎಸೆತಗಳನ್ನು ಎದುರಿಸಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಇದಾದ ಬಳಿಕ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಇಶಾನ್ ಕಿಶನ್ ಯಶಸ್ವಿಯಾದರು. ಈ ಮೂಲಕ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಇಶಾನ್ ಕಿಶನ್ ಪಾತ್ರರಾದರು. ಈ ಮೊದಲು ಜಿಂಬಾಬ್ವೆ ಕ್ರಿಕೆಟಿಗ ಚಾರ್ಲ್ಸ್‌ ಕೊವೆಂಟ್ರಿ ಚೊಚ್ಚಲ ಶತಕದಲ್ಲೇ ಅಜೇಯ 194 ರನ್ ಬಾರಿಸಿದ್ದು ಇಲ್ಲಿಯವರೆಗಿನ ಗರಿಷ್ಟ ಸ್ಕೋರ್ ಎನಿಸಿಕೊಂಡಿತ್ತು.
 

25
* ಅತಿವೇಗದ ದ್ವಿಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಕಿಶನ್

ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಅತಿವೇಗದ ದ್ವಿಶತಕದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಮೊದಲು ಕ್ರಿಸ್‌ ಗೇಲ್ 2015ರ ಏಕದಿನ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಎದುರು 138 ಎಸೆತಗಳನ್ನು ಎದುರಿಸಿ ದ್ವಿಶತಕ ಸಿಡಿಸಿದ್ದರು.

35
* ದ್ವಿಶತಕ ಸಿಡಿಸಿದ ಅತಿ ಕಿರಿಯ ಕ್ರಿಕೆಟಿಗ:

24 ವರ್ಷ 145 ದಿನದ ಇಶಾನ್‌ ಕಿಶನ್, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನ್ನುವ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಈ ಮೊದಲು ರೋಹಿತ್ ಶರ್ಮಾ(26 ವರ್ಷ 186 ದಿನ) 2013ರಲ್ಲಿ ಆಸ್ಟ್ರೇಲಿಯಾ ಎದುರು ಮೊದಲ ದ್ವಿಶತಕ ಬಾರಿಸಿದ್ದಾಗ ಅತಿಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಆ ದಾಖಲೆ ಇಶಾನ್ ಕಿಶನ್ ಪಾಲಾಗಿದೆ.
 

45
ಅತಿಕಡಿಮೆ ಇನಿಂಗ್ಸ್‌ಗಳನ್ನಾಡಿ ದ್ವಿಶತಕ ಬಾರಿಸಿದ ಇಶಾನ್ ಕಿಶನ್‌:

ಇಶಾನ್ ಕಿಶನ್‌ ಭಾರತ ಪರ ಅತಿ ಕಡಿಮೆ ಇನಿಂಗ್ಸ್‌(09)ಗಳನ್ನಾಡಿ ಚೊಚ್ಚಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು ರೋಹಿತ್ ಶರ್ಮಾ 103ನೇ ಇನಿಂಗ್ಸ್‌ನಲ್ಲಿ ಮೊದಲ ಏಕದಿನ ದ್ವಿಶತಕ ಸಿಡಿಸಿದ್ದರು. ಆದರೆ ಇದೀಗ ಇಶಾನ್ ಕಿಶನ್ ಕೇವಲ 9ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.
 

55
ಕೊಹ್ಲಿ-ಕಿಶನ್ 290 ರನ್‌ಗಳ ಜತೆಯಾಟದ ದಾಖಲೆ

ಬಾಂಗ್ಲಾದೇಶ ವಿರುದ್ದ ಎರಡನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಜೋಡಿ 290 ರನ್‌ಗಳ ಜತೆಯಾಟವಾಡುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ವಿರುದ್ದ ಗರಿಷ್ಠ ರನ್‌ ಜತೆಯಾಟವಾಡಿದ ಜೋಡಿ ಎನ್ನುವ ದಾಖಲೆಗೆ ಪಾತ್ರವಾಗಿದೆ. ಈ ಮೊದಲು 2017ರಲ್ಲಿ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ 282 ರನ್‌ಗಳ ಜತೆಯಾಟವಾಡಿದ್ದೇ ಇಲ್ಲೀವರೆಗಿನ ದಾಖಲೆಯಾಗಿತ್ತು.
 

Read more Photos on
click me!

Recommended Stories