ಸಂಜು ಇನ್, ರಿಂಕು ಔಟ್: ಟಿ20 ವಿಶ್ವಕಪ್‌ಗೆ ಭಾರತದ ಪ್ಲೇಯಿಂಗ್ 11 ಆಯ್ಕೆ ಮಾಡಿದ ಇರ್ಫಾನ್ ಪಠಾಣ್!

Published : Feb 07, 2026, 02:06 PM IST

ಟಿ20 ವಿಶ್ವಕಪ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಅನ್ನು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಯ್ಕೆ ಮಾಡಿದ್ದಾರೆ. ಅಚ್ಚರಿಯೆಂದರೆ, ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದು, ಫಿನಿಶರ್ ರಿಂಕು ಸಿಂಗ್‌ರನ್ನು ಕೈಬಿಟ್ಟಿದ್ದಾರೆ. ಪಠಾಣ್ ಆಯ್ಕೆ ಮಾಡಿದ ತಂಡ ಇಲ್ಲಿದೆ ನೋಡಿ.

PREV
16
1. ಅಭಿಷೇಕ್ ಶರ್ಮಾ

ಭಾರತದ ಆಕ್ರಮಣಕಾರಿ ಆರಂಭಿಕ ಬ್ಯಾಟರ್ ಅಭಿಷೇಕ್. ಮೊದಲ ಓವರ್‌ನಿಂದಲೇ ಬೌಲರ್‌ಗಳ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಇವರಿಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 182 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.

2. ಸಂಜು ಸ್ಯಾಮ್ಸನ್:

ಇರ್ಫಾನ್ ಪಠಾಣ್ ಯಾವಾಗಲೂ ಸಂಜು ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಪ್ಲೇಯಿಂಗ್ 11ರಲ್ಲಿ ಸಂಜು ಬೆಸ್ಟ್ ಎನ್ನುವುದು ಪಠಾಣ್ ಅಭಿಪ್ರಾಯ. ನ್ಯೂಜಿಲೆಂಡ್ ವಿರುದ್ಧ 5 ಟಿ20 ಪಂದ್ಯಗಳಿಂದ ಸಂಜು ಗಳಿಸಿದ್ದು ಕೇವಲ 46 ರನ್.  ಹೀಗಿದ್ದೂ ಸಂಜುಗೆ ಅವಕಾಶ ನೀಡಿದ್ದಾರೆ.

26
3. ಇಶಾನ್ ಕಿಶನ್‌

ಭರ್ಜರಿ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್‌ರನ್ನು ಇರ್ಫಾನ್ ಮೂರನೇ ಕ್ರಮಾಂಕಕ್ಕೆ ಪರಿಗಣಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಕಿಶನ್, ತಿರುವನಂತಪುರದಲ್ಲಿ ನಡೆದ ಕೊನೆಯ ಟಿ20ಯಲ್ಲಿ ಶತಕ ಸಿಡಿಸಿದ್ದರು. ಆದರೆ, ಹಲವು ತಜ್ಞರು ಇಶಾನ್ ಓಪನರ್ ಆಗಬೇಕು ಎನ್ನುತ್ತಿದ್ದಾರೆ.

4. ತಿಲಕ್ ವರ್ಮಾ:

ನಾಲ್ಕನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಕಣಕ್ಕಿಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿ ಬಳಿಕ ಗಾಯಗೊಂಡಿದ್ದ ತಿಲಕ್, ಎರಡು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಪಠಾಣ್, ತಿಲಕ್‌ರನ್ನು ಕೈಬಿಟ್ಟಿಲ್ಲ.

36
5. ಸೂರ್ಯಕುಮಾರ್ ಯಾದವ್

ತಿಲಕ್ ವರ್ಮಾ ಬಂದಿದ್ದರಿಂದ ನಾಯಕ ಸೂರ್ಯಕುಮಾರ್ ಯಾದವ್ ಒಂದು ಸ್ಥಾನ ಕೆಳಗಿಳಿದಿದ್ದಾರೆ. ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿದ್ದ ಸೂರ್ಯ, ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂಲಕ ಫಾರ್ಮ್‌ಗೆ ಮರಳಿದ್ದರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದಿದ್ದರು.

6. ಹಾರ್ದಿಕ್ ಪಾಂಡ್ಯ

ಹಾರ್ದಿಕ್ ತಂಡಕ್ಕೆ ಸಮತೋಲನ ನೀಡುವ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸಿ, ಅಗತ್ಯವಿದ್ದಾಗ ವಿಕೆಟ್ ಪಡೆಯುವ ಅವರ ಅನುಭವ ತಂಡಕ್ಕೆ ದೊಡ್ಡ ಶಕ್ತಿ.  

46
7. ಅಕ್ಸರ್‌ ಪಟೇಲ್

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಬಲ್ಲ ಅಕ್ಷರ್ ತಂಡದ 'ಎಕ್ಸ್ ಫ್ಯಾಕ್ಟರ್'. ವಿಕೆಟ್ ಪಡೆಯುವುದರ ಜೊತೆಗೆ ರನ್ ನಿಯಂತ್ರಿಸಿ, ಕೊನೆಯಲ್ಲಿ ರನ್ ಗಳಿಸುವ ಸಾಮರ್ಥ್ಯ ಅಕ್ಷರ್‌ಗಿದೆ.

8. ಶಿವಂ ದುಬೆ

ನ್ಯೂಜಿಲೆಂಡ್ ವಿರುದ್ಧ ದುಬೆ ಉತ್ತಮವಾಗಿ ಆಡಿದ್ದರು. ಅವರು ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಜೊತೆಗೆ, ಮಧ್ಯಮ ಓವರ್‌ಗಳಲ್ಲಿ ಒಂದೆರಡು ಓವರ್‌ಗಳನ್ನು ದುಬೆಗೆ ನಂಬಿ ವಹಿಸಬಹುದು. ಹೀಗಾಗಿ ರಿಂಕು ಅವರನ್ನು ಕೈಬಿಟ್ಟು ದುಬೆಗೆ ಇರ್ಫಾನ್ ಪಠಾಣ್ ಸ್ಥಾನ ನೀಡಿದ್ದಾರೆ.

56
9. ಜಸ್ಪ್ರೀತ್ ಬುಮ್ರಾ

ವಿಶ್ವದ ಅತ್ಯುತ್ತಮ ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ ಇರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆರಂಭಿಕ ಮತ್ತು ಅಂತಿಮ ಓವರ್‌ಗಳಲ್ಲಿ ನಿಖರವಾದ ಯಾರ್ಕರ್‌ಗಳ ಮೂಲಕ ಬ್ಯಾಟರ್‌ಗಳನ್ನು ಕಾಡಬಲ್ಲರು.

10. ಅರ್ಷದೀಪ್ ಸಿಂಗ್

ಎಡಗೈ ವೇಗಿ ಎಂಬುದು ಅರ್ಷದೀಪ್‌ಗೆ ದೊಡ್ಡ ಪ್ಲಸ್ ಪಾಯಿಂಟ್. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡಬಲ್ಲರು ಮತ್ತು ಒತ್ತಡದ ಸಂದರ್ಭಗಳಲ್ಲಿ ಬೌಲಿಂಗ್ ಮಾಡುವಲ್ಲಿ ಅರ್ಷದೀಪ್ ಪ್ರಬುದ್ಧತೆ ತೋರಿದ್ದಾರೆ.

66
11. ವರುಣ್ ಚಕ್ರವರ್ತಿ
ಬುಮ್ರಾ ಅವರಂತೆ ವರುಣ್ ಚಕ್ರವರ್ತಿಯ ನಾಲ್ಕು ಓವರ್‌ಗಳು ಭಾರತಕ್ಕೆ ಮುಖ್ಯ. ವರುಣ್ ತಂಡಕ್ಕೆ ಬಂದರೆ, ಕುಲ್ದೀಪ್ ಯಾದವ್ ಹೊರಗುಳಿಯಬೇಕಾಗಬಹುದು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories