ಮಗಳಿಗೆ ಮೋಸ ಮಾಡಿದ ಪಲಾಶ್‌; ರೋಸ್ಟ್‌ ಮಾಡಿ, ಇಂಡಿಯನ್‌ ಮಮ್ಮಿ ಗತ್ತು ತೋರಿಸಿದ ಸ್ಮೃತಿ ಮಂಧಾನ ತಾಯಿ

Published : Feb 07, 2026, 01:02 PM IST

ವೈಯಕ್ತಿಕ ಜೀವನದಲ್ಲಿ ಏರಿಳಿತವಾಗಿದ್ದರೂ ಕೂಡ, women’s premier league ಅಲ್ಲಿ ಟ್ರೋಫಿ ಗೆದ್ದು ಬೀಗಿದ ಸ್ಮೃತಿ ಮಂಧಾನ ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಮನಸ್ಸೊಂದಿದ್ದರೆ ಯಾವುದು ಕೂಡ ದೊಡ್ಡದಲ್ಲ ಎನ್ನುವುದಕ್ಕೆ ಸ್ಮೃತಿ ದೊಡ್ಡ ಉದಾಹರಣೆ. 

PREV
16
ಗೆಲುವಿನ ಮೆಟ್ಟಿಲು ಏರಿದರು

ಬ್ರೇಕಪ್‌ ಆಯ್ತು, ಕೆಲಸ ಸಿಗ್ತಿಲ್ಲ, ಅನಾರೋಗ್ಯ ಎಂದು ಸಾಕಷ್ಟು ಜನರು ದುಡುಕಿ ನಿರ್ಧಾರ ತಗೊಂಡ ಉದಾಹರಣೆಗಳು ಇವೆ. ಹೀಗಿರುವಾಗ ಈಗ ಮದುವೆ ಮುರಿದಿರುವುದನ್ನೇ ಸ್ಮೃತಿ ಅವರು ಮೆಟ್ಟಿಲಾಗಿ ಮಾಡಿಕೊಂಡು, ಗೆಲುವಿನ ಏಣಿ ಹತ್ತಿದ್ದಾರೆ.

26
ಟ್ರೋಲ್‌ ಆದ ಪಲಾಶ್

ದೆಹಲಿ ಕ್ಯಾಪಿಟಲ್ಸ್‌ ವಿರುದ್ಧ ಸ್ಮೃತಿ ಮಂಧಾನ ಅವರು ಗೆಲುವಿನ ನಗೆ ಬೀರಿದರು. ಇದಾದ ಬಳಿಕ ಅನೇಕರು ಪಲಾಶ್‌ ಅವರನ್ನು ಟ್ರೋಲ್‌ ಮಾಡಿದರು, ಮೀಮ್ಸ್‌ ಕೂಡ ಮಾಡಿದರು.

36
ತಾಯಿಯಿಂದಲೂ ಟ್ರೋಲ್

ಇಡೀ ಊರೇ ಪಲಾಶ್‌ ಅವರನ್ನು ಟ್ರೋಲ್‌ ಮಾಡುತ್ತಿರುವಾಗ ಸ್ಮೃತಿ ಮಂಧಾನ ತಾಯಿ ಕೂಡ, ತಮ್ಮದೂ ಒಂದು ಇರಲಿ ಎಂದು ಟ್ರೋಲ್‌ ಮಾಡಿದ್ದಾರೆ. ಒಟ್ಟಿನಲ್ಲಿ ಇಂಡಿಯನ್‌ ಮಮ್ಮಿ ಗತ್ತು ತೋರಿಸಿದ್ದಾರೆ.

46
ಏನು ಟ್ರೋಲ್‌ ಮಾಡಿದ್ರು?

ದೆಹಲಿ ಕ್ಯಾಪಿಟಲ್ಸ್‌ ಅವರು ಟ್ರೋಫಿ ಸೋತು ಸುಣ್ಣವಾಗಿದ್ದರು. ಅವರ ಬಾಡಿದ ಮುಖಗಳಿಗೆ ಪಲಾಶ್‌ ಮುಖ ಹಾಕಿ ಎಡಿಟ್‌ ಮಾಡಿ ಫೋಟೋ ವೈರಲ್ ಮಾಡಲಾಗಿತ್ತು. ಇದನ್ನು ಸ್ಮೃತಿ ತಾಯಿ ರಿಪೋಸ್ಟ್‌ ಮಾಡಿದ್ದಾರೆ. ಮಿಸ್ಟೇಕ್‌ ಆಗಿ ರಿ ಪೋಸ್ಟ್‌ ಮಾಡಿದ್ದಾರಾ ಎಂಬ ಡೌಟ್‌ ಇದೆ. ಅಷ್ಟೇ ಅಲ್ಲದೆ ಪೋಸ್ಟ್‌ ಆಗಿರೋದು ಒಂದು ದಿನದ ಬಳಿಕ ಡಿಲಿಟ್‌ ಆಗಿದೆ.

56
ಮದುವೆ ದಿನ ಮುರಿದೋಯ್ತು

ಪಲಾಶ್‌ ಮಚ್ಚಲ್‌ ಅವರು ಸಂಗೀತ ಸಂಯೋಜಕರಾಗಿದ್ದಾರೆ. ಇವರಿಬ್ಬರು ಕಳೆದ ಐದು ವರ್ಷಗಳಿಂದ ಡೇಟ್‌ ಮಾಡುತ್ತಿದ್ದರು. ಇನ್ನೇನು ಮದುವೆ ಡೇಟ್‌ ಫಿಕ್ಸ್‌ ಆಗಿ, ಹಳದಿ, ಸಂಗೀತ ಶಾಸ್ತ್ರ ನಡೆದು ಇನ್ನೇನು ಮಾಂಗಲ್ಯ ಕಟ್ಟಬೇಕು ಎನ್ನುಕೊಳ್ಳುವಷ್ಟರಲ್ಲಿ ಮದುವೆ ನಿಂತಿದೆ.

66
ಸ್ಮೃತಿ ದೂರ ಆಗಿದ್ದು ಯಾಕೆ?

ಮದುವೆ ದಿನ ಪಲಾಶ್‌ ಬೇರೆ ಹುಡುಗಿಯ ಜೊತೆ ಬೆಡ್‌ನಲ್ಲಿದ್ದರು, ಅವರ ಚಾಟ್‌ ಮೆಸೇಜ್‌ ಗೊತ್ತಾಯಿತು ಎಂದು ಸ್ಮೃತಿ ದೂರ ಆದರು ಎನ್ನಲಾಗಿದೆ. ಅಂದಹಾಗೆ ಸ್ಮೃತಿ ತಂದೆಗೆ ಅನಾರೋಗ್ಯ ಆಗಿ ಅವರು ಆಸ್ಪತ್ರೆ ಸೇರಿದ್ದರು ಎನ್ನಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories