ಈ ಬಾರಿ ಆರ್‌ಸಿಬಿ ಚಾಂಪಿಯನ್ ಕಿರೀಟ ಖಚಿತ, ಕಾರಣ 14ರಲ್ಲಿ 11ರ ಸೀಕ್ರೆಟ್

Published : May 30, 2025, 01:09 PM IST

ಐಪಿಎಲ್ 2025 ಫೈನಲ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲುತ್ತಾ? ಚಾಂಪಿಯನ್ ಪಟ್ಟ ಖಚಿತ ಎನ್ನುತ್ತಿದ್ದಾರೆ. ಫ್ಯಾನ್ಸ್. ಕಾರಣ 14ರಲ್ಲಿ 11ರ ಲೆಕ್ಕ ಮುಂದಿಟ್ಟಿದ್ದಾರೆ. ಏನಿದು 14ರಲ್ಲಿ 11 ಸ್ಟ್ಯಾಟ್ಸ್

PREV
16

ಐಪಿಎಲ್ ಪ್ಲೇ ಆಫ್ ಟೂರ್ನಿ ಆರಂಭದಲ್ಲೇ ರೋಚಕತೆ ಹೆಚ್ಚಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿದ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಈಗಾಗಲೇ ಆರಂಭಗೊಂಡಿದೆ. ಇದೀಗ ಅಭಿಮಾನಿಗಳು ಫೈನಲ್ ಗೆಲುವಿನ ಸಂಭ್ರಮಕ್ಕೂ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಆರ್‌ಸಿಬಿಗೆ ಗೆಲುವಿನ ಸಾಧ್ಯತೆ ಹೆಚ್ಚು ಎಂದು ಅಭಿಮಾನಿಗಳು ಕೆಲ ಅಂಕಿ ಅಂಶ ತೆರೆದಿಟ್ಟಿದ್ದಾರೆ. ಈ ಅಂಕಿ ಅಂಶ ಇದೀಗ ಆರ್‌ಸಿಬಿಗೆ ಪ್ರಶಸ್ತಿ ಎನ್ನುತ್ತಿದೆ.

26

ಇದು 18ನೇ ಐಪಿಎಲ್ ಟೂರ್ನಿ ಆದರೂ, ಪ್ಲೇ ಆಫ್ ಮಾದರಿ ಜಾರಿಗೊಳಿಸಿ 14 ಆವೃತ್ತಿ ನಡೆದಿದೆ. ವಿಶೇಷ ಅಂದರೆ 14 ಐಪಿಎಲ್ ಪ್ಲೇ ಆಫ್‌ಗಳಲ್ಲಿ 11 ಬಾರಿ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದ ತಂಡ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಅಂದರೆ 14ರಲ್ಲಿ 11 ಬಾರಿ ಮೊದಲ ಕ್ವಾಲಿಫೈಯರ್ ಗೆದ್ದ ತಂಡಕ್ಕೆ ಚಾಂಪಿಯನ್ ಕಿರೀಟ ಒಲಿದಿದೆ. ಇದೀಗ ಈ ಬಾರಿ ಆರ್‌ಸಿಬಿ ತನ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಫೈನಲ್ ಪ್ರವೇಶಿಸಿದೆ.

36

ಕಳೆದ 7 ಐಪಿಎಲ್ ಆವೃತ್ತಿಗಳಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದ ತಂಡ ಐಪಿಎಲ್ ಟ್ರೋಫಿ ಗೆದ್ದಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದುಕೊಂಡಿತ್ತು. ಬಳಿಕ ಫೈನಲ್ ಪಂದ್ಯದಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಆರ್‌ಸಿಬಿ ಸರದಿ.

46

ಅಂಕಿ ಅಂಶ ಆರ್‌ಸಿಬಿ ಪರವಾಗಿದೆ. ಆದರೆ ಈ ಬಾರಿ ಆರ್‌ಸಿಬಿ ನೀಡಿದ ಪ್ರದರ್ಶನವೇ ಅಭಿಮಾನಿಗಳ ಆತ್ಮವಿಶ್ವಾಸಕ್ಕೆ ಕಾರಣ. ಈ ಬಾರಿ ಆರ್‌ಸಿಬಿ ತಂಡವಾಗಿ ಹೋರಾಟ ನಡೆಸಿದೆ. ಕಳೆದೆಲ್ಲಾ ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ಮೇಲೆ ತಂಡ ಅವಲಂಬಿತವಾಗಿತ್ತು. ಆದರೆ ಈ ಬಾರಿ ಕೊಹ್ಲಿ ಸೇರಿದಂತೆ ತಂಡದ ಪ್ರತಿಯೊಬ್ಬರು ಗೆಲುವಿನಲ್ಲಿ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ 18ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಗೆಲುವು ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್.

56

3 ಬಾರಿ ಕ್ವಾಲಿಫೈಯರ್ 1 ಪಂದ್ಯ ಗೆದ್ದ ತಂಡ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. 2013ರಲ್ಲಿ ಸಿಎಸ್‌ಕೆ, 2016ರಲ್ಲಿ ಆರ್‌ಸಿಬಿ ಹಾಗೂ 2017ರಲ್ಲಿ ಪುಣೆ ಸೂಪರ್‌ಜೈಂಟ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ 2025ರ ಆರ್‌ಸಿಬಿ ವರ್ಷ, ಈ ಬಾರಿ ಪ್ರಶಸ್ತಿ ಗೆಲ್ಲೋದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

66

ಫೈನಲ್ ಪಂದ್ಯದಲ್ಲಿ ಆರ್‌ಸಿಬಿಗೆ ಎದುರಾಳಿ ಯಾರು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಇಂದು ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಜೂನ್ 1 ರಂದು ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಆರ್‌ಸಿಬಿ ವಿರುದ್ದ ಫೈನಲ್ ಪಂದ್ಯ ಆಡಲಿದೆ.

Read more Photos on
click me!

Recommended Stories