ಫೈನಲ್‌ಗೆ ಎದುರಾಳಿ ಯಾರೇ ಬರಲಿ RCB ಗೆಲುವು ಖಚಿತ : ಕಾರಣ ಬಿಚ್ಚಿಟ್ಟ ಲೆಜೆಂಡರಿ ಕ್ರಿಕೆಟರ್

Published : May 29, 2025, 10:30 PM IST

ಲೆಜೆಂಡರಿ ಕ್ರಿಕೆಟರ್, ಆರ್‌ಸಿಬಿ ಐಪಿಎಲ್ 2025 ಟ್ರೋಫಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಮರಳಿರುವುದು ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಫಾರ್ಮ್ RCB ಗೆ ಗೆಲುವು ತಂದುಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

PREV
15

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆಲ್ಲಲು ಒಂದು ಹೆಜ್ಜೆ ಹಿಂದಿದೆ. ಈ ನಡುವೆ ಸೀಸನ್ 18ರ ಐಪಿಎಲ್ ಟ್ರೋಫಿಯನ್ನು ಆರ್‌ಸಿಬಿ ಎತ್ತಿ ಹಿಡಿಯಲಿದೆ ಎಂದು ಲೆಜೆಂಡರಿ ಕ್ರಿಕೆಟರ್ ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಕಪ್ ಯಾಕೆ ಗೆಲ್ಲಲಿದೆ ಎಂಬುದರ ಕಾರಣವನ್ನು ರಿವೀಲ್ ಮಾಡಿದ್ದಾರೆ.

25

ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರ, ಲೆಜೆಂಡರಿ ಕ್ರಿಕೆಟರ್ ಶೇನ್ ವ್ಯಾಟ್ಸನ್ ಐಪಿಎಲ್ 2025 ರ ವಿಜೇತರನ್ನು ಭವಿಷ್ಯ ನುಡಿದಿದ್ದಾರೆ. ಶೇನ್ ವಾಟ್ಸನ್ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. "ಐಪಿಎಲ್ 2025 ರ ವಿಜೇತರು ಯಾರಾಗ್ತಾರೆ ಎಂದು ನಾನು ಬಹಳ ಸಮಯದಿಂದ ಯೋಚಿಸುತ್ತಿದ್ದೆ. ನನ್ನ ದೃಷ್ಟಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗುತ್ತದೆ. ವಿರಾಟ್ ಕೊಹ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಲಿದ್ದಾರೆ ಎಂಬುದರ ಬಗ್ಗೆಯೂ ಶೇನ್ ವ್ಯಾಟ್ಸನ್ ಹೇಳಿದ್ದಾರೆ.

35

ಈ ಸೀಸನ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡ ಆರ್‌ಸಿಬಿ, ದ್ವಿತೀಯಾರ್ಧದಲ್ಲಿ ಕೆಲವು ಕಠಿಣ ಪಂದ್ಯಗಳನ್ನು ಎದುರಿಸಿದೆ. ಇದೀಗ ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಮರಳಿರುವುದರಿಂದ ಈ ವರ್ಷ ಆರ್‌ಸಿಬಿ ಚಾಂಪಿಯನ್ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ವ್ಯಾಟ್ಸನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

45

ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠರಾಗುತ್ತಾರೆ ಎಂದಿರುವ ಶೇನ್ ವ್ಯಾಟ್ಸನ್, ಐಪಿಎಲ್ 2025 ರಲ್ಲಿ, ವಿರಾಟ್ ಕೊಹ್ಲಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 60.20 ರ ಅದ್ಭುತ ಸರಾಸರಿಯಲ್ಲಿ 602 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧ ಶತಕಗಳಿವೆ. ಹಾಗಾಗಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಲಿದ್ದಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

55

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಬಾರಿಗೆ 2016 ರಲ್ಲಿ ಐಪಿಎಲ್ ಫೈನಲ್ ಆಡಿತ್ತು. ಇದೀಗ 9 ವರ್ಷಗಳ ಬಳಿಕ ಆರ್‌ಸಿಬಿ ಫೈನಲ್ ಆಡಲಿದೆ. ಜೂನ್ 3ರಂದು ಸೀಸನ್ 18ರ ಫೈನಲ್ ಪಂದ್ಯ ನಡೆಯಲಿದೆ.

Read more Photos on
click me!

Recommended Stories