ಐಪಿಎಲ್‌ ಹರಾಜಿನಲ್ಲಿ ಈ ನಾಲ್ವರು ವಿಕೆಟ್ ಕೀಪರ್‌ಗಳ ಮೇಲೆ ಕಣ್ಣಿಟ್ಟಿದೆ ಸಿಎಸ್‌ಕೆ..!

First Published Jun 5, 2021, 4:18 PM IST

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ದೀರ್ಘಕಾಲ ಕ್ರಿಕೆಟ್‌ ಆಡುವುದಿಲ್ಲ, ಅದಕ್ಕೆ ಅಪವಾದ ಎನ್ನುವಂತೆ ಆಡಂ ಗಿಲ್‌ಕ್ರಿಸ್ಟ್, ಕುಮಾರ ಸಂಗಕ್ಕರ, ಮಾರ್ಕ್‌ ಬೌಷರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರಂತಹ ಕೆಲವೇ ಕೆಲವು ಆಟಗಾರರು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಮಹೇಂದ್ರ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. ಸದ್ಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದು, ಮುಂಬರುವ ದಿನಗಳಲ್ಲಿ ಐಪಿಎಲ್‌ಗೂ ವಿದಾಯ ಹೇಳುವ ಸಾಧ್ಯತೆಯಿದೆ. ಹೀಗಾಗಿ 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ನಾಲ್ವರು ವಿದೇಶಿ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ಗಳ ಮೇಲೆ ಕಣ್ಣಿಟ್ಟಿದೆ. ಯಾರು ಅವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ಟಿಮ್‌ ಸೈಫರ್ಟ್‌: ನ್ಯೂಜಿಲೆಂಡ್
undefined
ಕಿವೀಸ್ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಸೈಫರ್ಟ್‌ 2022ರ ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ಪಾಲಾಗುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ಪರ ಸೈಫರ್ಟ್‌ 133.1ರ ಸ್ಟ್ರೈಕ್‌ರೇಟ್‌ನಂತೆ 695 ರನ್ ಚಚ್ಚಿದ್ದಾರೆ. ಸದ್ಯ ಅಲಿ ಖಾನ್ ಬದಲಿ ಆಟಗಾರನಾಗಿ ಸೈಫರ್ಟ್‌ ಕೆಕೆಆರ್ ತಂಡ ಕೂಡಿಕೊಂಡಿದ್ದಾರೆಯಾದರೂ ಆಡುವ ಹನ್ನೊಂದರ ಬಳಗದಲ್ಲಿ ಒಮ್ಮೆಯೂ ಸ್ಥಾನ ಸಿಕ್ಕಿಲ್ಲ.
undefined
2. ಡೆವೊನ್ ಕಾನ್‌ವೇ: ನ್ಯೂಜಿಲೆಂಡ್
undefined
ಕೆಲವು ತಿಂಗಳ ಹಿಂದಷ್ಟೇ ಬೆಳಕಿಗೆ ಬಂದ ಡೆವೊನ್ ಕಾನ್‌ವೇ ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್ ಕೀಪಿಂಗ್ ಕೂಡಾ ಮಾಡಬಲ್ಲರು. ವೃತ್ತಿಜೀವನದ ಆರಂಭದ ದಿನದಲ್ಲೇ ಕಮಾಲ್ ಮಾಡಿರುವ ಕಾನ್ವೇ ಅವರನ್ನು ಸಿಎಸ್‌ಕೆ ತನ್ನ ತೆಕ್ಕೆಗೆ ಸೆಳೆದುಕೊಂಡರೂ ಅಚ್ಚರಿ ಪಡುವಂತಿಲ್ಲ.
undefined
3. ಮ್ಯಾಥ್ಯೂ ವೇಡ್: ಆಸ್ಟ್ರೇಲಿಯಾ
undefined
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಆಸೀಸ್‌ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ವೇಡ್‌ ಕಳೆದ ಕೆಲವು ವರ್ಷಗಳಿಂದ ಆಸೀಸ್ ತಂಡದ ನಂಬಿಕಸ್ಥ ಆಟಗಾರ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯವಾದ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಮಿಂಚಿರುವ ವೇಡ್‌ಗೆ ಸಿಎಸ್‌ಕೆ ಗಾಳ ಹಾಕಿದರೂ ಅಚ್ಚರಿ ಪಡುವಂತಿಲ್ಲ.
undefined
4.ಗ್ಲೆನ್ ಫಿಲಿಫ್ಸ್: ನ್ಯೂಜಿಲೆಂಡ್
undefined
ನ್ಯೂಜಿಲೆಂಡ್ ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಫಿಲಿಫ್ಸ್ ಈಗಾಗಲೇ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. 149.7ರ ಸ್ಟ್ರೈಕ್‌ರೇಟ್‌ ಹೊಂದಿರುವ ಫಿಲಿಫ್ಸ್, ಮುಂಬರುವ ದಿನಗಳಲ್ಲಿ ಧೋನಿ ಗರಡಿಯಲ್ಲಿ ಪಳಗುವ ಸಾಧ್ಯತೆಯಿದೆ.
undefined
click me!