IPL 2022: ಈ ಬಾರಿ ಈ ಮೂರು ತಂಡಗಳಲ್ಲೊಂದು ತಂಡ ಚಾಂಪಿಯನ್ ಆಗಬಹುದು..!

First Published Mar 21, 2022, 8:57 PM IST

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಲೀಗ್ ಹಂತದ 70 ಪಂದ್ಯಗಳು ಮಹಾರಾಷ್ಟ್ರದಲ್ಲಿನ 4 ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಾರಿ 10 ತಂಡಗಳು ಐಪಿಎಲ್ ಟ್ರೋಫಿಗಾಗಿ (IPL Trophy) ಸೆಣಸಾಟ ನಡೆಸಲಿವೆ. ಈ ಹತ್ತು ತಂಡಗಳ ಪೈಕಿ ಈ ಮೂರು ತಂಡಗಳಲ್ಲಿ ಒಂದು ತಂಡವು ಐಪಿಎಲ್ ಚಾಂಪಿಯನ್ ಆಗಬಹುದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

1. ಚೆನ್ನೈ ಸೂಪರ್‌ ಕಿಂಗ್ಸ್

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು, ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಕಳೆದ ಆವೃತ್ತಿಯಂತೆ ಈ ಬಾರಿಯು ಸಿಎಸ್‌ಕೆ ತಂಡದಲ್ಲಿ 8 ತಜ್ಞ ಆಲ್ರೌಂಡರ್‌ಗಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಋತುರಾಜ್ ಗಾಯಕ್ವಾಡ್ ಜತೆಗೆ ಡೆವೊನ್ ಕಾನ್‌ವೇ, ಮೋಯಿನ್ ಅಲಿ, ಅಂಬಟಿ ರಾಯುಡು ಅವರಂತಹ ಆಟಗಾರದಿದ್ದರೆ, ರವೀಂದ್ರ ಜಡೇಜಾ, ಶಿವಂ ದುಬೆ, ಡ್ವೇನ್ ಬ್ರಾವೋ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವ ಕ್ಷಮತೆ ಹೊಂದಿದ್ದಾರೆ. 
 

Latest Videos


ಚೆನ್ನೈ ಬೌಲಿಂಗ್‌ನಲ್ಲೂ ಸಾಕಷ್ಟು ಬಲಿಷ್ಠವಾಗಿದ್ದು, ದೀಪಕ್ ಚಹರ್ ಜತೆಗೆ ಆಡಂ ಮಿಲ್ನೆ, ಕ್ರಿಸ್ ಜೋರ್ಡನ್‌, ಮಿಚೆಲ್ ಸ್ಯಾಂಟ್ನರ್, ಲಂಕಾದ ಮಿಸ್ಟ್ರಿ ಸ್ಪಿನ್ನರ್ ಮಹೇಶ್ ತೀಕ್ಷಣ ಸೇರಿದಂತೆ ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದು, ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಮತ್ತೊಮ್ಮೆ ಚಾಂಪಿಯನ್ ಅದರೂ ಅಚ್ಚರಿಯಿಲ್ಲ.
 

2. ರಾಜಸ್ಥಾನ ರಾಯಲ್ಸ್‌

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತಂಡವು ಈ ಬಾರಿಯ ಹರಾಜಿನ ಬಳಿಕ ಸಾಕಷ್ಟು ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಎಲ್ಲಾ ವಿಭಾಗದಲ್ಲೂ ರಾಯಲ್ಸ್ ತಂಡವು ಸದೃಢವಾಗಿ ಕಾಣ ಸಿಗುತ್ತಿದೆ.
 

ಬ್ಯಾಟಿಂಗ್ ವಿಭಾಗದಲ್ಲಿ ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್ ಜತೆಗೆ ಸೂಪರ್‌ಸ್ಟಾರ್ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್‌ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್‌ಗೆ ಮತ್ತಷ್ಟು ಬಲ ತುಂಬಲಿದ್ದಾರೆ. ಶಿಮ್ರೊನ್ ಹೆಟ್ಮೇಯರ್ ಕೂಡಾ ಫಿನಿಶರ್ ಪಾತ್ರ ನಿಭಾಯಿಸಲಿದ್ದಾರೆ.

ಇನ್ನು ಬೌಲಿಂಗ್ ವಿಭಾಗ ಕೂಡಾ ರಾಯಲ್ಸ್‌ ಪಾಳಯದಲ್ಲಿ ಸಾಕಷ್ಟು ಬಲಿಷ್ಠವಾಗಿದೆ. ಟ್ರೆಂಟ್ ಬೌಲ್ಟ್, ಪ್ರಸಿದ್ದ್ ಕೃಷ್ಣ ಜತೆಗೆ ಚಾಣಾಕ್ಷ ಸ್ಪಿನ್ನರ್‌ಗಳಾದ ಯುಜುವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದು, ರಾಯಲ್ಸ್‌ ಈ ಬಾರಿ ಟ್ರೋಫಿಗೆ ಮುತ್ತಿಕ್ಕಿದರೆ ಅಚ್ಚರಿ ಪಡುವಂತಿಲ್ಲ

3. ರಾಯಲ್ ಚಾಲೆಂಜರ್ಸ್ ಬೆಂಗಳೂರು

ಚೊಚ್ಚಲ ಐಪಿಎಲ್‌ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹೊಸ ಹುರುಪಿನೊಂದಿಗೆ 15ನೇ ಆವೃತ್ತಿಯ ಐಪಿಎಲ್‌ಗೆ ಸಜ್ಜಾಗಿದೆ. ಫಾಫ್ ಡು ಪ್ಲೆಸಿಸ್‌ ನಾಯಕತ್ವದಲ್ಲಿ ಆರ್‌ಸಿಬಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

ಅಗ್ರಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಜತೆಗೆ ಗ್ಲೆನ್‌ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಅವರಂತಹ ತಜ್ಞ ಟಿ20 ಆಟಗಾರರಿದ್ದಾರೆ. ಇದರ ಜತೆಗೆ ಆಲ್ರೌಂಡರ್‌ಗಳಾದ ವನಿಂದು ಹಸರಂಗ ಕೂಡಾ ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ.

ಇದರ ಜತೆಗೆ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಜತೆಗೆ ಜೋಶ್ ಹೇಜಲ್‌ವುಡ್‌ ವೇಗದ ದಾಳಿ ನಡೆಸಿದರೆ, ಕರ್ಣ್‌ ಶರ್ಮಾ, ಗ್ಲೆನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡುವ ಕ್ಷಮತೆ ಹೊಂದಿದ್ದಾರೆ.

click me!