IPL Auction 2023 ಈ 6 ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿವೆ ಎಲ್ಲಾ 10 ಫ್ರಾಂಚೈಸಿಗಳು..!

Published : Dec 23, 2022, 10:31 AM IST

ಕೊಚ್ಚಿ(ಡಿ.23): ಬಹುನಿರೀಕ್ಷಿತ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, 405 ಆಟಗಾರರು ಅದೃಷ್ಟ ಪರೀಕ್ಷೆ ಮುಂದಾಗಿದ್ದು, ಈ ಪೈಕಿ 87 ಆಟಗಾರರು ಬಿಕರಿಯಾಗಲಿದ್ದಾರೆ. ಈಗಾಗಲೇ ಎಲ್ಲಾ 10 ಫ್ರಾಂಚೈಸಿಗಳು ಕೊಚ್ಚಿ ತಲುಪಿದ್ದು, ಈ ಕೆಳಗಿನ ಆರು ಆಟಗಾರರ ಮೇಲೆ ಎಲ್ಲಾ ಪ್ರಾಂಚೈಸಿಗಳು ಹದ್ದಿನ ಕಣ್ಣಿಟ್ಟಿವೆ. ಅಷ್ಟಕ್ಕೂ ಯಾರು ಆ ಆರು ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..  

PREV
16
IPL Auction 2023 ಈ 6 ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿವೆ ಎಲ್ಲಾ 10 ಫ್ರಾಂಚೈಸಿಗಳು..!
1. ಮಯಾಂಕ್‌ ಅಗರ್‌ವಾಲ್‌

ಕರ್ನಾಟಕ ಮೂಲದ  ಭಾರತದ ತಾರಾ ಬ್ಯಾಟರ್‌ ಮಯಾಂಕ್ ಅಗರ್‌ವಾಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮಿನಿ ಹರಾಜಿಗೂ ಮುನ್ನ ರಿಲೀಸ್ ಮಾಡಿದೆ. 2021ರಲ್ಲಿ ಪಂಜಾಬ್‌ ಕಿಂಗ್ಸ್‌ ನಾಯಕರಾಗಿದ್ದ ಮಯಾಂಕ್‌ ಅಗರ್‌ವಾಲ್‌, ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್‌ ಆಡುವ ಕ್ಷಮತೆ ಹೊಂದಿದ್ದಾರೆ. ಆರ್‌ಸಿಬಿ ಸೇರಿದಂತೆ ಹಲವು ಫ್ರಾಂಚೈಸಿಗಳು ಮಯಾಂಕ್ ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ

26
2. ಬೆನ್‌ ಸ್ಟೋಕ್ಸ್‌

ವಿಶ್ವ ಶ್ರೇಷ್ಠ ಆಲ್ರೌಂಡರ್‌ ಬೆನ್ ಸ್ಟೋಕ್ಸ್‌, ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ.  ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿರುವ ಸ್ಟೋಕ್ಸ್‌ ಕೂಡಾ, ಐಪಿಎಲ್ ಫ್ರಾಂಚೈಸಿಗಳ ಪಾಲಿಗೆ ನೀಲಿಗಣ್ಣಿನ ಹುಡುಗ ಎನಿಸಿಕೊಂಡಿದ್ದಾರೆ.
 

36
3. ಸ್ಯಾಮ್‌ ಕರ್ರನ್‌

ಇಂಗ್ಲೆಂಡ್‌ನ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್, ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಸುಧಾರಿತ ಡೆತ್‌ ಬೌಲಿಂಗ್‌ ಪ್ರದರ್ಶನ ತೋರಿರುವ ಕರ್ರನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ.
 

46
4. ಹ್ಯಾರಿ ಬ್ರೂಕ್‌

ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್‌ ಸದ್ಯ ಭರ್ಜರಿ ಲಯದಲ್ಲಿದ್ದು, ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಟಿ20ಯಲ್ಲಿ 148ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುತ್ತಿರುವ ಹ್ಯಾರಿ ಬ್ರೂಕ್ ಕೂಡಾ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

56
5. ಕ್ಯಾಮರೊನ್‌ ಗ್ರೀನ್

ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್‌ ಕ್ಯಾಮರೋನ್ ಗ್ರೀನ್‌, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಕೈಗೊಂಡಿದ್ದಾಗ ಅಗ್ರಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಕ್ಯಾಮರೋನ್ ಗ್ರೀನ್ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.
 

66
6. ಎನ್‌.ಜಗದೀಶನ್‌:

ಈ ವರ್ಷ ದೇಸಿ ಟೂರ್ನಿಗಳಲ್ಲಿ ವಿಸ್ಫೋಟಕ ಆಡಿರುವ ತಮಿಳುನಾಡು ಬ್ಯಾಟರ್‌ ಕೂಡಾ ಒಳ್ಳೆಯ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಇನ್ನೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಎನ್‌ ಜಗದೀಶನ್ ಮೇಲೆ ಚೆನ್ನೈ ಸೇರಿದಂತೆ ಹಲವು ಫ್ರಾಂಚೈಸಿಗಳು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಪೈಪೋಟಿ ನಡೆಸುವ ಸಾಧ್ಯತೆಯಿದೆ. 

Read more Photos on
click me!

Recommended Stories