ಟ್ರಿಸ್ಟಿನ್ ಸ್ಟಬ್ಸ್‌ಗೆ ಗ್ಲೌಸ್ ಬದಲಿಸಲು ಅಂಪೈರ್ ಬಿಡಲಿಲ್ಲ ಯಾಕೆ? ಐಪಿಎಲ್ ನಿಯಮ ಏನು ಹೇಳುತ್ತೆ?

Published : Apr 12, 2026, 12:34 PM IST

IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಬಹಳ ರೋಚಕವಾಗಿತ್ತು. ಈ ಪಂದ್ಯದ ವೇಳೆ ಐಪಿಎಲ್‌ನ ಒಂದು ಕುತೂಹಲಕಾರಿ ನಿಯಮದ ಬಗ್ಗೆ ಚರ್ಚೆ ಶುರುವಾಗಿದೆ.

PREV
15
ಕೊನೆಗೂ ಗೆಲುವಿನ ನಗೆ ಬೀರಿದ ಚೆನ್ನೈ..!

ಐಪಿಎಲ್ 2026ರಲ್ಲಿ ಸತತ ಮೂರು ಸೋಲುಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ತವರಿನ ಚೆನ್ನೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿತು. 213 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಪರ ಟ್ರಿಸ್ಟಿನ್ ಸ್ಟಬ್ಸ್ ವೀರಾವೇಶದ ಹೋರಾಟ ನಡೆಸಿದರೂ, ಅವರ ವಿಕೆಟ್ ಪತನದೊಂದಿಗೆ ಸಿಎಸ್‌ಕೆ ಗೆಲುವು ಖಚಿತವಾಯಿತು.

25
ಸ್ಟಬ್ಸ್ ಹೋರಾಟ ವ್ಯರ್ಥ..!

ಚೆನ್ನೈ ನಿಗದಿಪಡಿಸಿದ 213 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ಡೆಲ್ಲಿ ಕ್ಯಾಪಿಟಲ್ಸ್‌ಗೆ ಉತ್ತಮ ಆರಂಭ ಸಿಕ್ಕಿತ್ತು. ಓಪನರ್‌ಗಳಾದ ಪಥುಮ್ ನಿಸ್ಸಾಂಕ (41) ಮತ್ತು ಕೆಎಲ್ ರಾಹುಲ್ (18) ಉತ್ತಮ ಪ್ರದರ್ಶನ ನೀಡಿದರು. ಆದರೆ, ಮಧ್ಯಮ ಕ್ರಮಾಂಕದ ಆಟಗಾರರು ಬೇಗನೇ ಔಟಾದಾಗ ತಂಡ ಒತ್ತಡಕ್ಕೆ ಸಿಲುಕಿತು. ಆಗ ಬಂದ ಸ್ಟಬ್ಸ್, 38 ಎಸೆತಗಳಲ್ಲಿ 60 ರನ್ ಗಳಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಕೊನೆಯ ಹಂತದಲ್ಲಿ ಅವರು ಔಟಾಗುತ್ತಿದ್ದಂತೆ ಡಿಸಿ ಸೋಲು ಕಂಡಿತು.

35
ಸ್ಟಬ್ಸ್ ಅಸಮಾಧಾನ ಮಾಡಿಕೊಂಡಿದ್ದೇಕೆ?

ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಡಿದ ಸ್ಟಬ್ಸ್, ಔಟಾದ ಬಳಿಕ ತೀವ್ರ ನಿರಾಸೆ ವ್ಯಕ್ತಪಡಿಸಿದರು. ಪೆವಿಲಿಯನ್‌ಗೆ ಮರಳಿದ ತಕ್ಷಣ ಬ್ಯಾಟ್ ಎಸೆದು, ಡ್ರೆಸ್ಸಿಂಗ್ ರೂಮ್‌ನಲ್ಲಿ ಹೆಲ್ಮೆಟ್‌ ಅನ್ನು ಕೋಪದಿಂದ ಕೆಳಗೆ ಬೀಸಾಕಿದರು. ಅವರು ಔಟಾಗುವ ಸ್ವಲ್ಪ ಮೊದಲು ಗ್ಲೌಸ್ ಬದಲಿಸಲು ಮುಂದಾಗಿದ್ದರು, ಆದರೆ ಅಂಪೈರ್‌ಗಳು ಅನುಮತಿ ನೀಡಿರಲಿಲ್ಲ. ಇದೇ ಕಾರಣಕ್ಕೆ ಅವರು ಅಸಮಾಧಾನಗೊಂಡಿರಬಹುದು ಎಂದು ಕಾಮೆಂಟೇಟರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

45
ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸಬಹುದೇ...?

ಕ್ರಿಕೆಟ್ ನಿಯಮಗಳ ಪ್ರಕಾರ, ಬ್ಯಾಟರ್‌ಗಳು ಓವರ್ ಮಧ್ಯದಲ್ಲಿ ತಮ್ಮ ಇಚ್ಛೆಯಂತೆ ಗ್ಲೌಸ್ ಬದಲಿಸುವಂತಿಲ್ಲ. ಓವರ್ ಮುಗಿದ ನಂತರ ಅಥವಾ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಮಾತ್ರ ಬದಲಿಸಬಹುದು. 

55
ಪದೇ ಪದೇ ಗ್ಲೌಸ್ ಬದಲಿಸಲು ಅವಕಾಶವಿಲ್ಲ

ಐಪಿಎಲ್‌ನಲ್ಲಿ 'ಸ್ಲೋ ಓವರ್ ರೇಟ್' ನಿಯಮ ಕಠಿಣವಾಗಿರುವುದರಿಂದ, ಬ್ಯಾಟರ್‌ಗಳು ಪದೇ ಪದೇ ಗ್ಲೌಸ್ ಬದಲಿಸಿ ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಅಂಪೈರ್‌ಗಳು ಅನುಮತಿ ನಿರಾಕರಿಸಬಹುದು. ಸ್ಟಬ್ಸ್ ವಿಷಯದಲ್ಲಿಯೂ ಇದೇ ಆಗಿರಬಹುದು. ಆಟದ ವೇಗಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಅಂಪೈರ್‌ಗಳು ಅನುಮತಿ ನೀಡಿಲ್ಲ ಎನ್ನಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories