ಐಪಿಎಲ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳ ಆಯೋಜನೆಗೆ ಸಿದ್ಧತೆ ಶುರು

Naveen Kodase   | Kannada Prabha
Published : Jan 04, 2026, 08:28 AM IST

ಬೆಂಗಳೂರು: ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುತ್ತಾ ಎನ್ನುವ ಕುತೂಹಲದ ಕುರಿತಂತೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

PREV
16
ಐಪಿಎಲ್ ಆಯೋಜನೆಗೆ ಸಿದ್ದತೆ ಆರಂಭ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 19ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯಗಳನ್ನು ಆಯೋಜಿಸಲು ಬೇಕಿರುವ ಸಿದ್ಧತೆಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆರಂಭಿಸಿದೆ.

26
ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಮಹತ್ವದ ಸೂಚನೆ

ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಅನುಮತಿ ಬೇಕಿದ್ದರೆ ನಿವೃತ್ತ ನ್ಯಾ.ಮೈಕಲ್‌ ಡಿ ಕುನ್ಹಾ ಅವರ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಕೆಎಸ್‌ಸಿಎಗೆ ಇತ್ತೀಚೆಗೆ ಸೂಚಿಸಿತ್ತು.

36
ಕ್ರೀಡಾಂಗಣದ ಪ್ರವೇಶ ದ್ವಾರ ವಿಸ್ತರಣೆ ಕೆಲಸ ಆರಂಭ

ಅದರಂತೆ, ನವೀಕರಣ ಕಾಮಗಾರಿಯನ್ನು ಕೆಎಸ್‌ಸಿಎ ಆರಂಭಿಸಿದ್ದು, ಕ್ರೀಡಾಂಗಣದ ಪ್ರವೇಶ ದ್ವಾರಗಳನ್ನು ವಿಸ್ತರಣೆ ಮಾಡಲು ಕೆಲಸ ನಡೆಯುತ್ತಿದೆ.

46
ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಮಾಹಿತಿ

ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಅವರು, ‘ನ್ಯಾ.ಕುನ್ಹಾ ಅವರ ಸಮಿತಿ ಶಿಫಾರಸಿನಂತೆ ನವೀಕರಣ ಕಾರ್ಯ ಆರಂಭಿಸಿದ್ದೇವೆ. ಪ್ರಮುಖವಾಗಿ ಪ್ರವೇಶ ದ್ವಾರಗಳನ್ನು ವಿಸ್ತರಿಸಬೇಕಿದ್ದು, ಅದಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. 1 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ಮಾಹಿತಿ ನೀಡಿದರು.

56
ಐಪಿಎಲ್ ಟೂರ್ನಿ ಮಾರ್ಚ್ 26ರಿಂದ ಆರಂಭ

ಐಪಿಎಲ್‌ ಟೂರ್ನಿ ಮಾ.26ರಿಂದ ಆರಂಭಗೊಳ್ಳಲಿದ್ದು, ಫೆಬ್ರವರಿ ವೇಳೆಗೆ ನವೀಕರಣ ಕಾರ್ಯ ಮುಕ್ತಾಯಗೊಂಡರೂ, ಸರ್ಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿ, ಅನುಮತಿ ನೀಡಲು ಸಮಯಾವಾಶ ಇರಲಿದೆ ಎನ್ನಲಾಗಿದೆ.

66
ಏನೇನು ಶಿಫಾರಸು?

ನ್ಯಾ.ಕುನ್ಹಾ ಸಮಿತಿಯು ತಮ್ಮ ವರದಿಯಲ್ಲಿ 17 ಅಂಶಗಳನ್ನು ಉಲ್ಲೇಖಿಸಿತ್ತು. ಅದರಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಸಂಖ್ಯೆಯನ್ನು ಹೆಚ್ಚಿಸುವುದು, ಮುಖ್ಯರಸ್ತೆಯಲ್ಲಿ ಪ್ರೇಕ್ಷಕರ ದಟ್ಟಣೆ ಆಗದಂತೆ ತಡೆಯುವುದು, ಅಂ.ರಾ. ಮಟ್ಟದಲ್ಲಿ ಮನ್ನಣೆ ಪಡೆದಿರುವ ತುರ್ತು ನಿರ್ಗಮನ ಸೌಲಭ್ಯ ಅನುಷ್ಠಾನ, ಕ್ರೀಡಾಂಗಣದ ಸುತ್ತಮುತ್ತ ಟ್ರಾಫಿಕ್‌ ನಿರ್ವಹಣೆ ಹಾಗೂ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವುದು ಪ್ರಮುಖ ಶಿಫಾರಸುಗಳಾಗಿವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories