Published : Apr 14, 2025, 12:44 PM ISTUpdated : Apr 14, 2025, 12:59 PM IST
ಕಳೆದ ಒಂದೂವರೆ ದಶಕದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿ ಬ್ಯಾಟರ್ ವಿರಾಟ್ ಕೊಹ್ಲಿ. ಮೂರೂ ಫಾರ್ಮೆಟ್‌ನಲ್ಲೂ ಸೂಪರ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಈ ಐಪಿಎಲ್‌ನಲ್ಲೂ ಅವರ ಫಾರ್ಮ್ ಚೆನ್ನಾಗಿದೆ.
IPL 2025 Virat Kohli: ಟಿ20 ಫಾರ್ಮೆಟ್ ಇತಿಹಾಸದಲ್ಲಿ 100 ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾನುವಾರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅಜೇಯ ಅರ್ಧಶತಕ ಬಾರಿಸಿ ಈ ಸಾಧನೆ ಮಾಡಿದ್ದಾರೆ.
26
Virat Kohli ( Photo: IPL)
ರಾಜಸ್ಥಾನ ರಾಯಲ್ಸ್ ವಿರುದ್ಧ 45 ಬಾಲ್ಗಳಲ್ಲಿ 62 ರನ್ ಗಳಿಸಿ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ಗಳಿದ್ದವು.
36
Virat Kohli
ಟಿ20 ಫಾರ್ಮೆಟ್ನಲ್ಲಿ 100 ಅರ್ಧಶತಕ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ಭಾನುವಾರ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದರು.
46
ಈ ಬಾರಿ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ಗೆ ಯಾವುದೇ ಫ್ರಾಂಚೈಸಿಯಲ್ಲಿ ಅವಕಾಶ ಸಿಕ್ಕಿಲ್ಲ. ಸದ್ಯ ಅವರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ.
56
ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ 39 ಬಾಲ್ಗಳಲ್ಲಿ ಅರ್ಧಶತಕ ಪೂರೈಸಿದರು. ವನಿಂದು ಹಸರಂಗ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದ ಕಿಂಗ್ ಕೊಹ್ಲಿ.
66
Virat Kohli (Photo: @IPL/X)
ಟಿ20 ಫಾರ್ಮೆಟ್ನಲ್ಲಿ ಡೇವಿಡ್ ವಾರ್ನರ್ 108 ಅರ್ಧಶತಕ ಬಾರಿಸಿದ್ದಾರೆ. ವಾರ್ನರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನೂ 9 ಅರ್ಧಶತಕ ಬಾರಿಸಬೇಕು