ಕರುಣ್ ನಾಯರ್ ಜತೆ ಕಿತ್ತಾಡಿಕೊಂಡ ಬುಮ್ರಾ; ಮಜಾ ತೆಗೆದುಕೊಂಡ್ರಾ ರೋಹಿತ್ ಶರ್ಮಾ?

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಕನ್ನಡದ ಕುವರ ಕರುಣ್ ನಾಯರ್ ಆಕರ್ಷಕ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ನಡುವೆ ಜಸ್ಪ್ರೀತ್ ಬುಮ್ರಾ ಹಾಗೂ ಕರುಣ್ ನಾಯರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ದೂರದಲ್ಲಿ ನಿಂತ ರೋಹಿತ್ ಶರ್ಮಾ ಮಜಾ ತಗೊಂಡ್ರಾ ಎನ್ನುವ ಅನುಮಾನ ಶುರುವಾಗಿದೆ.
 

IPL 2025 Jasprit Bumrah Loses Cool Engages In Heated Chat With Karun Nair kvn
Image Credit: ANI

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ 12 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

IPL 2025 Jasprit Bumrah Loses Cool Engages In Heated Chat With Karun Nair kvn
IPL 2025: Delhi Capitals vs Mumbai Indians

ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ಕರುಣ್ ನಾಯರ್, ಸ್ಪೋಟಕ 89 ರನ್ ಸಿಡಿಸಿದರು. ಕೇವಲ 40 ಎಸೆತಗಳನ್ನು ಎದುರಿಸಿದ ಕನ್ನಡಿಗ ಕರುಣ್ ನಾಯರ್ ಸೊಗಸಾದ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 5 ಮನಮೋಹಕ ಸಿಕ್ಸರ್‌ಗಳು ಸೇರಿದ್ದವು. 


Jasprit Bumrah. (Photo: IPL)

ಇನ್ನು ಇದೇ ಪಂದಗ್ಯದಲ್ಲಿ ಮುಂಬೈ ಇಂಡಿಯನ್ಸ್ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಕರುಣ್ ನಾಯರ್ ನಡುವಿನ ಮಾತಿನ ಚಕಮಕಿಗೂ ಸಾಕ್ಷಿಯಾಯಿತು. ಇದು ನಡೆದದ್ದು ಡೆಲ್ಲಿ ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ

IPL 2025: Delhi Capitals vs Mumbai Indians

ಜಸ್ಪ್ರೀತ್ ಬುಮ್ರಾ ಎಸೆದ ಆರನೇ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಕರುಣ್ ನಾಯರ್ ಎರಡು ಆಕರ್ಷಕ ಸಿಕ್ಸರ್, ಒಂದು ಬೌಂಡರಿ ಹಾಗೂ ಒಮ್ಮೆ ಎರಡು ರನ್ ಕಲೆಹಾಕುವ ಮೂಲಕ 18 ರನ್ ಚಚ್ಚಿದರು. ಇದರ ಜತೆಗೆ ಕೇವಲ 22 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು.  

ಇನ್ನಿಂಗ್ಸ್‌ನಲ್ಲಿ ಬುಮ್ರಾ ಅವರ 9 ಎಸೆತಗಳನ್ನು ಎದುರಿಸಿದ ಕರುಣ್ ನಾಯರ್ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ ಸಿಡಿಸಿದರು. ಇದು ಬುಮ್ರಾ ಅವರನ್ನು ಕೆರಳಿಸುವಂತೆ ಮಾಡಿತು. ಹೀಗಾಗಿ ಕರುಣ್ ನಾಯರ್ ಜತೆ ಬುಮ್ರಾ ಕಾಲು ಕೆರದುಕೊಂಡು ಮಾತಿನ ಚಕಮಕಿ ನಡೆಸಿದರು.

ಈ ಸಂದರ್ಭದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಪೆವಿಲಿಯನ್‌ನಲ್ಲಿದ್ದರೂ, ಸ್ಟ್ರಾಟರ್ಜಿಕ್ ಬ್ರೇಕ್ ವೇಳೆ ಮೈದಾನದಕ್ಕೆ ಬಂದಿದ್ದ ಮಾಜಿ ನಾಯಕ ರೋಹಿತ್ ಶರ್ಮಾ, ದೂರದಲ್ಲೇ ನಿಂತು ಈ ಮಾತಿನ ಚಕಮಕಿ ಎಂಜಾಯ್ ಮಾಡುತ್ತಿರುವುದು ಕ್ಯಾಮರ ಕಣ್ಣಿನಲ್ಲಿ ಸೆರೆಯಾಗಿದೆ.

Karun Nair plays a shot

ಇನ್ನು ಕರುಣ್ ನಾಯರ್ ಸ್ಪೋಟಕ ಅರ್ಧಶತಕದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಾಟಕೀಯವಾಗಿ ವಿಕೆಟ್ ಒಪ್ಪಿಸಿದ್ದರಿಂದ ಇನ್ನೂ ಒಂದು ಓವರ್ ಬಾಕಿ ಇದ್ದಂತೆಯೇ ಆಲೌಟ್ ಆಗುವ ಮೂಲಕ 12 ರನ್ ರೋಚಕ ಸೋಲು ಅನುಭವಿಸಿತು.

ಅಂದಹಾಗೆ ಇದು ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದರೆ, ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಸೋಲು ಎದುರಾಗಿದೆ. ಇದಷ್ಟೇ ಅಲ್ಲದೇ ಡೆಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿದೆ.

Latest Videos

vuukle one pixel image
click me!