ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಕಾಡುತ್ತಿದೆಯಾ ವಿರಾಟ್ ಕೊಹ್ಲಿ ಪ್ಲೇ ಆಫ್ ರೆಕಾರ್ಡ್?

Published : May 29, 2025, 06:41 PM IST

ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮೊದಲು ಇದೀಗ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಪ್ಲೇ ಆಫ್ ಚಿಂತೆ ಕಾಡುತ್ತಿದೆಯಾ? ಇದುವರೆಗಿನ ಕೊಹ್ಲಿ ಪ್ಲೇ ಆಫ್ ರೆಕಾರ್ಡ್ ಹೇಗಿದೆ? ಪ್ಲೇ ಅಫ್ ಸುತ್ತು ಆರ್‌ಸಿಬಿಗೆ ಕಠಿಣವಾಗುತ್ತಾ? 

PREV
15

ಐಪಿಎಲ್ 2025 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಪ್ಲೇ ಆಫ್ ತಲುಪಿರುವ ಆರ್‌ಸಿಬಿ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಸಜ್ಜಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಲು ಆರ್‌ಸಿಬಿ ತಯಾರಾಗಿದೆ. ಆದರೆ ಪಂದ್ಯಕ್ಕೂ ಮೊದಲು ಆರ್‌ಸಿಬಿಗೆ ವಿರಾಟ್ ಕೊಹ್ಲಿ ಪ್ಲೇ ಆಫ್ ರೆಕಾರ್ಡ್ ಕಾಡುತ್ತಿದೆಯಾ? ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. 602 ರನ್ ಸಿಡಿಸಿದ್ದಾರೆ. ಆದರೂ ಕೊಹ್ಲಿ ಪ್ಲೇ ಆಫ್ ರೆಕಾರ್ಡ್ ಆರ್‌ಸಿಬಿಗೆ ಮುಳುವಾಗುತ್ತಾ? ಈ ಚರ್ಚೆ ಶುರುವಾಗಲು ಕಾರಣ ಐಪಿಎಲ್ ಪ್ಲೇ ಆಪ್ ಹಂತದಲ್ಲಿ ವಿರಾಟ್ ಕೊಹ್ಲಿ ನೀಡಿರುವ ಪ್ರದರ್ಶನ.

25

ಐಪಿಎಲ್ ಪ್ಲೇ ಆಫ್ ಹಂತದಲ್ಲಿ ವಿರಾಟ್ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆರ್‌ಸಿಬಿ ಪ್ಲೇ ಆಫ್ ಹಂತದಲ್ಲಿ 15 ಪಂದ್ಯ ಆಡಿದೆ. ಈ ಎಲ್ಲಾ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಆಡಿದ್ದಾರೆ. ಆದರೆ ಕೊಹ್ಲಿ 341 ರನ್ ಸಿಡಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಸರಾಸರಿ 26.23. ಇನ್ನು ಸ್ಟ್ರೈಕ್ ರೇಟ್ 121.28. ಇನ್ನು ಪ್ಲೇ ಆಫ್ ಹಂತದಲ್ಲಿ ವಿರಾಟ್ ಕೊಹ್ಲಿ 2 ಹಾಫ್ ಸೆಂಚುರಿ ಸಿಡಿಸಿದ್ದಾರೆ.

35

ಪ್ಲೇ ಆಫ್ ಹಂತದಲ್ಲಿ ವಿರಾಟ್ ಕೊಹ್ಲಿ ರೆಕಾರ್ಡ್ ಉತ್ತಮವಾಗಿಲ್ಲ. ಆದರೆ ಈ ಬಾರಿ ಕೊಹ್ಲಿ ರೆಕಾರ್ಡ್ ಆರ್‌ಸಿಬಿಗೆ ಚಿಂತೆಯಿಲ್ಲ. ಕಾರಣ ಕಳೆದೆಲ್ಲಾ ಆವೃತ್ತಿಗಳಲ್ಲಿ ಆರ್‌‌ಸಿಬಿ ತಂಡ ಪ್ರಮುಖವಾಗಿ ವಿರಾಟ್ ಕೊಹ್ಲಿಯನ್ನೇ ನೆಚ್ಚಿಕೊಂಡಿತ್ತು. ಆದರೆ ಈ ಬಾರಿ ಕೊಹ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಇಡೀ ತಂಡ ಅತ್ಯುತ್ತಮ ಹೋರಾಟ ನೀಡುತ್ತಿದೆ. ಪ್ರತಿಯೊಬ್ಬರು ಕಾಣಿಕೆ ನೀಡುತ್ತಿದ್ದಾರೆ. ತಂಡವಾಗಿ ಹೋರಾಟ ಮಾಡುತ್ತಿದೆ.

45

ಇದೇ ಕಾರಣದಿಂದ ಕಳೆದ ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡಿದ ಆರ್‌ಸಿಬಿ ಗೆದ್ದು ಬೀಗಿತ್ತು. ನಾಯಕ ಜಿತೇಶ್ ಶರ್ಮಾ, ಮಯಾಂಕ್ ಅಗರ್ವಾಲ್ ಹೀರೋ ಆಗಿ ಮಿಂಚಿದ್ದರು. ಪ್ರತಿ ಪಂದ್ಯದಲ್ಲಿ ಒಬ್ಬೊಬ್ಬರು ಮಿಂಚುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಪ್ಲೇ ಆಫ್ ಹಂತದಲ್ಲಿ ಇದುವರೆಗೆ ನೀಡಿದ ಪ್ರದರ್ಶನ ಈ ಬಾರಿ ಪ್ಲೇ ಆಫ್ ಹಂತಕ್ಕೂ ಸಂಬಂಧವಿಲ್ಲ. ಇದು ಹೊಸ ಹೊರಾಟ ಹೊಸ ಲೆಕ್ಕ ಎಂದು ಅಭಿಮಾನಿಗಳು ವಿಶ್ವಾಸದಲ್ಲಿದ್ದಾರೆ.

55

2025ರ ಐಪಿಎಲ್ ಟೂರ್ನಿಯಲ್ಲಿ 147.91 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಅಭಿಮಾನಿಗಳ ಆತ್ಮವಿಶ್ವಾಸ ಹಚ್ಚಿಸಿದೆ. ಟ್ರೋಫಿ ಬರ ನೀಗಿಸಿಕೊಳ್ಳಲು ಆರ್‌ಸಿಬಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಹೊಸ ಇತಿಹಾಸ ರಚಿಸಲು ತುದಿಗಾಲಲ್ಲಿ ನಿಂತಿದೆ. ಇದೀಗ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸುವ ತವಕಕದಲ್ಲಿದೆ.

Read more Photos on
click me!

Recommended Stories