IPL 2024: ಈ ಸಲ ಕಪ್ ಗೆಲ್ಲಬೇಕಿದ್ದರೆ RCB ಈ 5 ಕೆಲಸ ಮಾಡಲೇಬೇಕು..!

First Published Mar 15, 2024, 12:33 PM IST

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೂರು ಬಾರಿ ಫೈನಲ್ ಪ್ರವೇಶಿಸಿ ಐಪಿಎಲ್ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿರುವ ಆರ್‌ಸಿಬಿ ಈ ಬಾರಿ ಶತಾಯಗತಾಯ ಕಪ್ ಗೆಲ್ಲುವ ಕನವರಿಕೆಯಲ್ಲಿದೆ. ಆರ್‌ಸಿಬಿ ಈ ಬಾರಿ ಕಪ್ ಗೆಲ್ಲಬೇಕಿದ್ದರೇ ಏನು ಮಾಡಬೇಕು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 22ರಂದು ಚೆನ್ನೈನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಮೂರು ಬಾರಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿರುವ ಆರ್‌ಸಿಬಿ ತಂಡವು ಈ ಬಾರಿ ಐಪಿಎಲ್ ಕಪ್ ಎತ್ತಿಹಿಡಿಯುವ ಕನಸು ಕಾಣುತ್ತಿದೆ. ಇದು ನನಸಾಗಬೇಕಿದ್ದರೆ, ಈ 5 ಕೆಲಸಗಳನ್ನು ಮಾಡಲೇಬೇಕು.
 

1. ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಬೇಕು. ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆಯಬೇಕಿದ್ದರೆ ವಿರಾಟ್ ವಿಸ್ಪೋಟಕ ಆಟ ಆಡಬೇಕಿದೆ.

2. ಮೊಹಮ್ಮದ್ ಸಿರಾಜ್ ಆರ್‌ಸಿಬಿ ತಂಡದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಪವರ್‌ಪ್ಲೇನಲ್ಲಿಯೇ ಪರಿಣಾಮಕಾರಿ ದಾಳಿ ನಡೆಸಿ ಎದುರಾಳಿ ಪಡೆಯ ವಿಕೆಟ್ ಕಬಳಿಸುವ ಗುರುತರ ಜವಾಬ್ದಾರಿ ಸಿರಾಜ್ ಮೇಲಿದೆ.

3. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರಷ್ಟೇ ಮಿಂಚಿದರೆ ಸಾಲದು, ಯುವ ಆಟಗಾರರಾದ ಮಹಿಪಾಲ್ ಲೋಮ್ರರ್ ಅವರಂತಹ ಆಟಗಾರರು ಜವಾಬ್ದಾರಿಯುತ ಆಟ ಆಡಬೇಕಿದೆ.

4. ಇನ್ನು ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಕೆರಿಬಿಯನ್ ನೀಳಕಾಯದ ವೇಗಿ ಅಲ್ಜರಿ ಜೋಸೆಫ್ ಅವರನ್ನು 11.50 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಆರ್‌ಸಿಬಿ ಇಟ್ಟ ನಿರೀಕ್ಷೆಯನ್ನು ಜೋಸೆಫ್ ಉಳಿಸಿಕೊಂಡರೆ ಕಪ್ ಗೆಲ್ಲುವುದು ಬೆಂಗಳೂರಿಗೆ ಕಷ್ಟವೇನಲ್ಲ.

5. ಅದೇ ರೀತಿ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಬರೋಬ್ಬರಿ 17.50 ಕೋಟಿ ರುಪಾಯಿ ನೀಡಿ ಮುಂಬೈನಿಂದ ಟ್ರೇಡ್‌ ಮಾಡಿಕೊಂಡಿದೆ. ಗ್ರೀನ್ ಮಿಂಚಿದರೆ ಖಂಡಿತ ಈ ಸಲ ಕಪ್ ನಮ್ದೇ.
 

click me!