IPL 2023: ಕೆಕೆಆರ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಒಂದು ಮಹತ್ವದ ಬದಲಾವಣೆ..! ಯಾರಿಗೆ ಸಿಗುತ್ತೆ ಸ್ಥಾನ?

Published : Apr 06, 2023, 02:01 PM IST

ಕೋಲ್ಕತಾ(ಏ.06): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 9ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್‌ ಪಂದ್ಯಕ್ಕೆ ಇಲ್ಲಿನ ಈಡನ್ ಗಾರ್ಡನ್ಸ್‌ ಮೈದಾನ ಆತಿಥ್ಯವನ್ನು ವಹಿಸಿದೆ. ಕೆಕೆಆರ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡವು ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ನಿಚ್ಚಳವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
111
IPL 2023: ಕೆಕೆಆರ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಒಂದು ಮಹತ್ವದ ಬದಲಾವಣೆ..! ಯಾರಿಗೆ ಸಿಗುತ್ತೆ ಸ್ಥಾನ?

1. ಫಾಫ್ ಡು ಪ್ಲೆಸಿಸ್‌:

ಆರ್‌ಸಿಬಿ ತಂಡದ ನಾಯಕ ಫಾಫ್, ಮುಂಬೈ ಎದುರಿನ ಮೊದಲ ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದರ ಜತೆಗೆ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದರು. ಫಾಫ್ ಅದೇ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

211

2. ವಿರಾಟ್ ಕೊಹ್ಲಿ: 

ಮಾಜಿ ನಾಯಕ ವಿರಾಟ್ ಕೊಹ್ಲಿ, ಅಜೇಯ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಕೊಹ್ಲಿ ಉತ್ತಮ ಲಯದಲ್ಲಿದ್ದು, ಕೆಕೆಆರ್ ಬೌಲರ್‌ಗಳ ಮೇಲೆ ಸವಾರಿ ಮಾಡಲು ಸಜ್ಜಾಗಿದ್ದಾರೆ.

 

311

3. ಗ್ಲೆನ್‌ ಮ್ಯಾಕ್ಸ್‌ವೆಲ್‌:

ಆಸ್ಟ್ರೇಲಿಯಾ ಮೂಲದ ತಾರಾ ಆಲ್ರೌಂಡರ್‌, ಮ್ಯಾಕ್ಸ್‌ವೆಲ್‌, ಮೊದಲ ಪಂದ್ಯದಲ್ಲೇ ಸ್ಪೋಟಕ ಬ್ಯಾಟಿಂಗ್ ನಡೆಸಿ ತಾವೆಂಥ ಅಪಾಯಕಾರಿ ಬ್ಯಾಟರ್ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಮ್ಯಾಕ್ಸಿ ಮೇಲೆ ಆರ್‌ಸಿಬಿ ತಂಡವು ಸಾಕಷ್ಟು ನಿರೀಕ್ಷೆಯಿಟ್ಟಿದೆ.
 

411

4. ಮಿಚೆಲ್ ಬ್ರೇಸ್‌ವೆಲ್‌:

ನ್ಯೂಜಿಲೆಂಡ್‌ ಬ್ಯಾಟಿಂಗ್ ಆಲ್ರೌಂಡರ್‌ ಬ್ರೇಸ್‌ವೆಲ್, ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬೌಲಿಂಗ್‌ನಲ್ಲಿ 2 ಓವರ್ ಬೌಲಿಂಗ್‌ ಮಾಡಿ 16 ರನ್ ನೀಡಿ ಪ್ರಮುಖ ಒಂದು ವಿಕೆಟ್ ಕಬಳಿಸಿದ್ದರು.
 

511

5. ಶಹಬಾಜ್ ಅಹಮ್ಮದ್:

ಬೌಲಿಂಗ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಶಹಬಾಜ್ ಅಹಮ್ಮದ್ ಕಳೆದ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಎರಡನೇ ಪಂದ್ಯದಲ್ಲಿ ಶಹಬಾಜ್‌ಗೆ ಬೌಲಿಂಗ್‌ ಮಾಡುವ ಅವಕಾಶ ಸಿಗುವ ಸಾಧ್ಯತೆಯಿದೆ.
 

611

6. ದಿನೇಶ್ ಕಾರ್ತಿಕ್‌:

ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌, ಮ್ಯಾಚ್‌ ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಾ ಬಂದಿದ್ದಾರೆ. ಮೊದಲ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿದ್ದ ಡಿಕೆ, ಇದೀಗ ಜವಾಬ್ದಾರಿ ಆಟವಾಡಬೇಕಿದೆ.

711

7. ಡೇವಿಡ್‌ ವಿಲ್ಲಿ:

ಇಂಗ್ಲೆಂಡ್ ಎಡಗೈ ವೇಗಿ ರೀಸ್ ಟಾಪ್ಲೆ, ಮೊದಲ ಪಂದ್ಯದ ವೇಳೆ ಗಾಯಗೊಂಡು, ಇದೀಗ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಟಾಪ್ಲೆ ಬದಲಿಗೆ ಇಂಗ್ಲೆಂಡ್‌ನ ಮತ್ತೋರ್ವ ವೇಗಿ ಡೇವಿಡ್ ವಿಲ್ಲಿ, ಆರ್‌ಸಿಬಿ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

811

8. ಹರ್ಷಲ್ ಪಟೇಲ್:

ಆರ್‌ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್‌, ಮೊದಲ ಪಂದ್ಯದಲ್ಲಿ 4 ಓವರ್‌ನಲ್ಲಿ 1 ವಿಕೆಟ್ ಕಬಳಿಸಿ 43 ರನ್ ನೀಡಿ ದುಬಾರಿಯಾಗಿದ್ದರು. ಹರ್ಷಲ್‌, ಇದೀಗ ಎರಡನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.
 

911

9. ಆಕಾಶ್‌ದೀಪ್‌:

ಬಿಹಾರ ಮೂಲದ ಬಲಗೈ ವೇಗಿ ಆಕಾಶ್‌ದೀಪ್, ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ಆರ್‌ಸಿಬಿಗೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿದ್ದರು. ಇದೀಗ ಅದೇ ಲಯ ಮುಂದುವರೆಸಿಕೊಂಡು ಹೋಗಲು ಆಕಾಶ್‌ದೀಪ್ ಎದುರು ನೋಡುತ್ತಿದ್ದಾರೆ.
 

1011

10. ಕರ್ಣ್ ಶರ್ಮಾ:

ನೀಳ ಕಾಯದ ಸ್ಪಿನ್ನರ್ ಕರ್ಣ್‌ ಶರ್ಮಾ, ಮೊದಲ ಪಂದ್ಯದಲ್ಲಿ ಮುಂಬೈನ ಎರಡು ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್‌ ಆಗಿ ಹೊರಹೊಮ್ಮಿದ್ದರು. ಕರ್ಣ್ ಶರ್ಮಾ ಮೇಲೆ ಆರ್‌ಸಿಬಿ ಈ ಬಾರಿ ಸಾಕಷ್ಟು ವಿಶ್ವಾಸವಿಟ್ಟಿದೆ.

1111

11. ಮೊಹಮ್ಮದ್ ಸಿರಾಜ್:

ಆರ್‌ಸಿಬಿ ತಂಡದ ನಂಬಿಗಸ್ಥ ವೇಗಿ ಸಿರಾಜ್‌, ಮೊದಲ 3 ಓವರ್‌ಗಳಲ್ಲಿ ಶಿಸ್ತುಬದ್ದ ದಾಳಿ ಮೂಲಕ ಮುಂಬೈ ಬ್ಯಾಟರ್‌ಗಳು ತಬ್ಬಿಬ್ಬಾಗುವಂತೆ ಮಾಡಿದ್ದರು. ಇದೀಗ ಸಿರಾಜ್, ಕೆಕೆಆರ್ ಬ್ಯಾಟರ್‌ಗಳನ್ನು ಕಾಡುವ ವಿಶ್ವಾಸದಲ್ಲಿದ್ದಾರೆ.
 

Read more Photos on
click me!

Recommended Stories