IPL 2022: ಮತ್ತೋರ್ವ ಕನ್ನಡಿಗನಿಗೆ ಪಂಜಾಬ್ ಕಿಂಗ್ಸ್‌ ನಾಯಕ ಪಟ್ಟ..?

First Published | Feb 25, 2022, 12:34 PM IST

ನವದೆಹಲಿ: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (India Premier League) ಆರಂಭಕ್ಕೆ ಭರದ ಸಿದ್ದತೆಗಳು ನಡೆಯಲಾರಂಭಿಸಿವೆ. ಇದೆಲ್ಲದರ ನಡುವೆ ಚೊಚ್ಚಲ ಐಪಿಎಲ್‌ ಟ್ರೋಫಿಯ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್‌ (Punjab Kings) ಫ್ರಾಂಚೈಸಿಯು ಇದೀಗ ಹೊಸ ನಾಯಕನ ಹುಡುಕಾಟದಲ್ಲಿದ್ದು, ಮತ್ತೋರ್ವ ಕನ್ನಡಿಗನಿಗೆ ಪಂಜಾಬ್ ತಂಡದ ನಾಯಕತ್ವ ಪಟ್ಟ ಕಟ್ಟಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆ.ಎಲ್‌. ರಾಹುಲ್ ತಮ್ಮ ಸ್ಥಾನಕ್ಕೆ ಗುಡ್‌ ಬೈ ಹೇಳಿದ್ದರು. ಹೀಗಾಗಿ ಪಂಜಾಬ್ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ.

(Photo Source- Instagram)

ಕರ್ನಾಟಕದ ತಾರಾ ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್‌ವಾಲ್‌ ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ತಂಡದ ನೂತನ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಮಯಾಂಕ್ ಅಗರ್‌ವಾಲ್‌ ಪಂಜಾಬ್ ತಂಡದ ಪರ ಸ್ಥಿರ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ.

Tap to resize

Mayank Agarwal

15ನೇ ಆವೃತ್ತಿಯ ಹರಾಜಿಗೂ ಮುನ್ನ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ರನ್ನು ರೀಟೈನ್‌ ಮಾಡಿಕೊಂಡಿದ್ದ ಫ್ರಾಂಚೈಸಿಯು ಶೀಘ್ರದಲ್ಲೇ  ನಾಯಕತ್ವದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಇದುವರೆಗೆ ನಾಯಕನಾಗಿದ್ದ ಕೆ.ಎಲ್‌.ರಾಹುಲ್‌ ತಂಡದಿಂದ ಹೊರಗುಳಿದಿದ್ದು, ನೂತನ ಐಪಿಎಲ್ ಫ್ರಾಂಚೈಸಿಯಾದ ಲಖನೌ ಸೂಪರ್ ಜೈಂಟ್ಸ್‌ ತಂಡದ ಪಾಲಾಗಿದ್ದಾರೆ. ಕೆ.ಎಲ್. ರಾಹುಲ್‌ ಲಖನೌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. 

ಇನ್ನು ಮೆಗಾ ಹರಾಜಿನಲ್ಲಿ ಶಿಖರ್‌ ಧವನ್‌ರನ್ನು ಖರೀದಿಸಿದ್ದ ಪಂಜಾಬ್‌, ಅವರಿಗೆ ನಾಯಕತ್ವ ವಹಿಸಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಫ್ರಾಂಚೈಸಿಯು ಮಯಾಂಕ್‌ಗೆ ಮಣೆ ಹಾಕಲಿದೆ ಎಂದು ತಿಳಿದುಬಂದಿದೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್‌ನಂತೆ, ಪಂಜಾಬ್ ಕಿಂಗ್ಸ್‌ ತಂಡವು ಕೂಡಾ ಕಳೆದ 14 ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದರೂ ಸಹ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿಯಾದರು ಈ ತಂಡಗಳ ಪೈಕಿ ಒಂದು ತಂಡ ಚಾಂಪಿಯನ್ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos

click me!