IPL 2022: ಈ ಐವರು ಬ್ಯಾಟರ್‌ಗಳು RCB ಪರ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬಬಲ್ಲರು..!

First Published | Nov 22, 2021, 6:25 PM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (IPL 2022) ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಆರಂಭವಾಗಿವೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪಾಲಿಗೆ ದಶಕಗಳಿಂದ ಆಪತ್ಭಾಂಧವನೆನಿಕೊಂಡಿದ್ದ ಎಬಿ ಡಿವಿಲಿಯರ್ಸ್ (Ab De Villiers) ದಿಢೀರ್ ಎನ್ನುವಂತೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಹೀಗಾಗಿ ಬೆಂಗಳೂರು ಮೂಲದ ಫ್ರಾಂಚೈಸಿ ಇದೀಗ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬಬಲ್ಲ ಮತ್ತೋರ್ವ ಆಟಗಾರನ ಹುಡುಕಾಟದಲ್ಲಿದೆ. ಈ ಐವರು ಆಟಗಾರರು ಸಂಪೂರ್ಣವಾಗಿ ಎಬಿಡಿ ಸ್ಥಾನ ತುಂಬದಿದ್ದರೂ, ಅವಕಾಶ ಸಿಕ್ಕರೇ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಬಲ್ಲರು. ಅಷ್ಟಕ್ಕೂ ಯಾರೂ ಆ ಐವರು ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Jos Buttler

1. ಜೋಸ್ ಬಟ್ಲರ್: 
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟರ್‌ಗಳಲ್ಲಿ ಸದ್ಯ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಯಾವುದೇ ಕ್ರಮಾಂಕದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುವ ಕ್ಷಮತೆ ಇಂಗ್ಲೆಂಡ್ ಕ್ರಿಕೆಟಿಗನಲ್ಲಿದೆ.

jos buttler

ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿರುವ ಬಟ್ಲರ್, ಇದುವರೆಗೂ 276 ಟಿ20 ಇನಿಂಗ್ಸ್‌ಗಳನ್ನಾಡಿ 144.2ರ ಸ್ಟ್ರೈಕ್‌ರೇಟ್‌ನಲ್ಲಿ 7,135 ರನ್‌ ಬಾರಿಸಿದ್ದಾರೆ. ಸದ್ಯ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿರುವ ಬಟ್ಲರ್, ಹರಾಜಿಗೆ ಲಭ್ಯವಾದರೇ ಆರ್‌ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ.

Latest Videos


2. ಜಾನಿ ಬೇರ್‌ಸ್ಟೋವ್‌

ಇನ್ನು ಇಂಗ್ಲೆಂಡ್‌ನ ಮತ್ತೋರ್ವ ಸ್ಟಾರ್ ಬ್ಯಾಟರ್‌ ಜಾನಿ ಬೇರ್‌ಸ್ಟೋವ್ ಕೂಡಾ ಎಬಿಡಿ ಸ್ಥಾನ ತುಂಬುವ ಸಾಮರ್ಥ್ಯವಿದೆ. ಬೇರ್‌ಸ್ಟೋವ್‌ ಕೂಡಾ ಯಾವುದೇ ಕ್ರಮಾಂಕದಲ್ಲಿ ಸ್ಪೋಟಕ ಇನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.

ಜಾನಿ ಬೇರ್‌ಸ್ಟೋವ್‌ 153 ಇನಿಂಗ್ಸ್‌ಗಳನ್ನಾಡಿ 3,904 ರನ್‌ ಬಾರಿಸಿದ್ದು, ವಿಕೆಟ್ ಕೀಪಿಂಗ್ ಕೂಡಾ ಮಾಡಬಲ್ಲರು. ಎಬಿಡಿ ಸ್ಥಾನಕ್ಕೆ ಬೇರ್‌ಸ್ಟೋವ್‌ಗೆ ಆರ್‌ಸಿಬಿ ಗಾಳ ಹಾಕುವ ಸಾಧ್ಯತೆಯಿದೆ.

3. ಲಿಯಾಮ್‌ ಲಿವಿಂಗ್‌ಸ್ಟೋನ್‌: 
ಇಂಗ್ಲೆಂಡ್‌ನ ಮತ್ತೋರ್ವ ಸ್ಪೋಟಕ ಬ್ಯಾಟರ್‌ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರನ್ನು ಖರೀದಿಸಲು ಆರ್‌ಸಿಬಿ ಒಲವು ತೋರುವ ಸಾಧ್ಯತೆಯಿದೆ. ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲೂ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಲಿವಿಂಗ್‌ಸ್ಟೋನ್‌ಗಿದೆ.

Liam Livingstone

ಟಿ20 ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲಿವಿಂಗ್‌ಸ್ಟೋನ್‌ 144 ಇನಿಂಗ್ಸ್‌ಗಳನ್ನಾಡಿ 4,038 ರನ್‌ ಬಾರಿಸಿದ್ದಾರೆ. ಸದ್ಯ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರನಾಗಿರುವ ಲಿವಿಂಗ್‌ಸ್ಟೋನ್ ಮೇಲೆ ಆರ್‌ಸಿಬಿ ಕಣ್ಣಿಡುವ ಸಾಧ್ಯತೆಯಿದೆ.

4. ಏಯ್ಡನ್ ಮಾರ್ಕ್‌ರಮ್‌:
ದಕ್ಷಿಣ ಆಫ್ರಿಕಾದ ನಂಬಿಗಸ್ಥ ಬ್ಯಾಟರ್‌ ಏಯ್ಡನ್‌ ಮಾರ್ಕ್‌ರಮ್‌, ಎಬಿಡಿ ಸ್ಥಾನ ತುಂಬುವ ಸಾಮರ್ಥ್ಯವಿರುವ ಆಟಗಾರ. ಸದ್ಯ ಮಾರ್ಕ್‌ರಮ್‌ ಉತ್ತಮ ಫಾರ್ಮ್‌ನಲ್ಲಿದ್ದು ರನ್ ಮಳೆ ಹರಿಸುತ್ತಿದ್ದಾರೆ.

Aiden Markram

ಮಾರ್ಕ್‌ರಮ್‌ 65 ಇನಿಂಗ್ಸ್‌ಗಳಲ್ಲಿ 1,732 ರನ್ ಬಾರಿಸಿದ್ದಾರೆ. ಸದ್ಯ ಪಂಜಾಬ್ ಕಿಂಗ್ಸ್‌ ತಂಡದಲ್ಲಿರುವ ಮಾರ್ಕ್‌ರಮ್ ಅವರನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡರೆ ಅಚ್ಚರಿಪಡುವಂತಿಲ್ಲ. 

5. ಶಿಮ್ರೊನ್ ಹೆಟ್ಮೇಯರ್
ಎಡಗೈ ಬ್ಯಾಟರ್‌ ಶಿಮ್ರೊನ್‌ ಹೆಟ್ಮೇಯರ್, ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಹೆಟ್ಮೇಯರ್ ಹೊಂದಿದ್ದಾರೆ. ಈ ಮೊದಲು ಹೆಟ್ಮೇಯರ್ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು

ಹೆಟ್ಮೇಯರ್ 111 ಇನಿಂಗ್ಸ್‌ಗಳನ್ನಾಡಿ 2,339 ರನ್ ಸಿಡಿಸಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ಹೆಟ್ಮೇಯರ್‌ ಮತ್ತೊಮ್ಮೆ ಆರ್‌ಸಿಬಿ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

click me!