Ind vs NZ Series: ಈಡನ್‌ಗಾರ್ಡನ್ಸ್‌ನಲ್ಲಿಂದು ರೋಹಿತ್ ಶರ್ಮಾ ಮತ್ತೊಂದು ಸ್ಪೆಷಲ್ ಇನಿಂಗ್ಸ್..?
First Published | Nov 21, 2021, 6:12 PM ISTಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (Ind vs NZ) ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಕೋಲ್ಕತದ ಈಡನ್ ಗಾರ್ಡನ್ಸ್ ಮೈದಾನ ಸಾಕ್ಷಿಯಾಗಲಿದೆ. ಭಾರತದ ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಕೋಲ್ಕತಾದ ಈಡನ್ ಗಾರ್ಡನ್ಸ್ (Eden Gardens stadium) ಮೈದಾನದೊಂದಿಗೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ವಿಶೇಷ ನಂಟು ಹೊಂದಿದ್ದಾರೆ. ಈ ಮೈದಾನದಲ್ಲಿ ರೋಹಿತ್ ಏಕದಿನ, ಟೆಸ್ಟ್ ಹಾಗೂ ಟಿ20(ಐಪಿಎಲ್)ಯಲ್ಲಿ ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಈಡನ್‌ಗಾರ್ಡನ್ಸ್ ಮೈದಾನದಲ್ಲಿ ಟೀಂ ಇಂಡಿಯಾ (Team India) ಪೂರ್ಣಾವಧಿ ಟಿ20 ನಾಯಕರಾದ ಬಳಿಕ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಹಾಗೂ ಈಡನ್ ಗಾರ್ಡನ್ಸ್ ನಂಟಿನ ಒಂದು ಝಲಕ್ ಇಲ್ಲಿದೆ ನೋಡಿ.