IPL 2022; ಹೊಸ ತಂಡ ಖರೀದಿ ಮಾಡುವತ್ತ ದೀಪಿಕಾ-ರಣವೀರ್ ಚಿತ್ತ

First Published | Oct 22, 2021, 10:42 PM IST

ಮುಂಬೈ(ಅ. 12)  ಐಪಿಎಲ್(IPL) ಹಬ್ಬ ಮುಗಿದಿದ್ದು ಇದೀಗ ಟಿ-20 ವಿಶ್ವಕಪ್(T20 World Cup) ಜ್ವರ ಶುರುವಾಗಿದೆ.  ಐಪಿಎಲ್ ಹಬ್ಬಕ್ಕೆ ಮುಂದಿನ ವರ್ಷದಿಂದ ಇನ್ನೆರಡು ತಂಡ ಸೇರಿಕೊಳ್ಳುತ್ತಿದೆ. ಈಗಾಗಗಲೇ ತಂಡದ ಬಿಸಿಸಿಐನಿಂದ (Board of Control for Cricket in India)ಪಟ್ಟಿ ಸಹ ಸಿದ್ಧವಾಗಿದೆ.

deepika caption

ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್, ಸನ್ ರೈಸರ್ಸ್ ಹೈದ್ರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Chennai Super Kings, Delhi Capitals, Punjab Kings, Kolkata Knight Riders, Mumbai Indians, Rajasthan Royals, Royal Challengers Bangalore and SunRisers Hyderabad) ತಂಡಗಳು ಹಲವಾರು ವರ್ಷಗಳಿಂದ ಆಡುತ್ತಲೇ ಇವೆ. 

ಹೊಸ ಎರಡು ತಂಡಗಳಿಗೆ ಬಿಡ್ಡಿಂಗ್ ಕಾರ್ಯ ಶುರುವಾಗಿದೆ. Board of Control for Cricket in India (BCCI) ಬಿಸಿಸಿಐ ಟೆಂಡರ್ ಕೆಲಸ ಆರಂಭಿಸಿದೆ.  ಭಾರತ ಮಾತ್ರವಲ್ಲ ವಿದೇಶಿ ಕಂಪನಿಗಳೂ ಐಪಿಎಲ್ ಫ್ರಾಂಚೈಸಿ ಪಡೆದುಕೊಳ್ಳುವುದಕ್ಕೆ ಮುಂದೆ ಬಂದಿದ್ದು ಗ್ಲೋಬಲ್ ರೂಪ ಪಡೆದುಕೊಂಡಿದೆ.

Latest Videos


ಅದಾನಿ (Adani Group) ಗ್ರೂಪ್, ಟೊರೆಂಟ್ ಫಾರ್ಮಾ, ಆರ್ಪಿ ಸಂಜೀವ್ ಗೋಯಂಕಾ ಗ್ರೂಪ್, ಜಿಂದಾಲ್ ಸ್ಟೀಲ್  ಜತೆಗೆ  ಇಪ್ಪತ್ತು ಸಾರಿ ಇಂಗ್ಲಿಷ್ ಪ್ರೀಮಿಯರ್ ಲೀಗ್ ಗೆದ್ದಿರುವ ಮಾಂಚೆಸ್ಟರ್ ಯುನೈಡಟ್ ಮಾಲೀಕರು ಸಕ ಆಸಕ್ತಿ ತೋರಿಸಿದ್ದಾರೆ.  ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ನಡುವೆ ಔಟ್ ಲುಕ್ ಮಾಧ್ಯಮ ವರದಿ ಮಾಡಿರುವಂತೆ ಬಾಲಿವುಡ್ ದಂಪತಿ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸಹ ಒಂದು ಫ್ರಾಂಚೈಸಿ ಪಡೆದುಕೊಳ್ಳಲು ಇಂಟರೆಸ್ಟ್ ತೋರಿಸಿದ್ದಾರೆ.  ಬಿಸಿಸಿಐ ಅಧಿಕೃತ ಬಿಡ್ಡಿಂಗ್ ಕರೆದಾಗ ಯಾರೆಲ್ಲ ಭಾಗವಹಿಸಬಹುದು ಎಂಬ ಕುತೂಹಲ ಮನೆ ಮಾಡಿದೆ.

ಯಾವ ಎರಡು ತಂಡಗಳು: ಅಹಮದಾಬಾದ್ ಮತ್ತು ಲಕ್ನೋ ಹೆಸರಿನಲ್ಲಿ ತಂಡಗಳು ಕಣಕ್ಕೆ ಇಳಿಯಬಹುದು ಎನ್ನಲಾಗಿದೆ.  ಸೋಮವಾರ ಅ. 25  ರಂದು ಬಿಸಿಸಿಐ ಅಧಿಕೃತವಾಗಿ ಹೊಸ ತಂಡಗಳ ಘೋಷಣೆ ಮಾಡುವ ಸಾಧ್ಯತೆ ಇದೆ.

ಬಿಸಿಸಿಐ ಸಹ ಭಾರತೀಯ ಮಾಲೀಕರಿಗೆ ಮೊದಲ ಆದ್ಯತೆ ನೀಡಿಕೊಂಡು ಬಂದಿದೆ. ಬಾಸ್ಕೆಟ್ ಬಾಲ್ 375-425 ಮಿಲಿಯನ್ ಡಾಲರ್  ನಲ್ಲಿ ಬಿಡ್  ಇರಬಹುದು ಎಂದು ಅಂದಾಜಿಸಲಾಗಿದ್ದು ಬಿಸಿಸಿಐ ಹೊಸ ತಂಡದಿಂದ ವರ್ಷಕ್ಕೆ 3000-3500 ಕೋಟಿ ಲಾಭ ಗಳಿಕೆ ಮಾಡಿಕೊಳ್ಳಬಹುದು. 

ಈಗಾಗಲೇ ಕೆಕೆಆರ್ ತಂಡಕ್ಕೆ ಬಾಲಿವುಡ್ ನಾಯಕ ಶಾರುಖ್ ಖಾನ್  ಮಾಲೀಕರಾಗಿದ್ದರೆ ಪಂಜಾಬ್ ಕಿಂಗ್ಸ್ ತಂಡವನ್ನು ನಟಿ ಪ್ರೀತಿ ಜಿಂಟಾ ಮುನ್ನಡೆಸಿಕೊಂಡು ಬಂದಿದ್ದಾರೆ.

click me!