1. ದೇವದತ್ ಪಡಿಕ್ಕಲ್
ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಚೆನ್ನೈ ಎದುರು ಉತ್ತಮ ಆರಂಭವನ್ನು ಒದಗಿಸಿಕೊಡಬೇಕಿದೆ. ಪಡಿಕ್ಕಲ್ ಮೇಲೆ ಆರ್‌ಸಿಬಿ ಅಭಿಮಾನಿಗಳು ದೊಡ್ಡ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
2. ವಿರಾಟ್ ಕೊಹ್ಲಿ
ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ದೊಡ್ಡ ಮೊತ್ತ ಗಳಿಸಲು ಪದೇ ಪದೇ ಎಡವುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಾದರೂ ನಾಯಕ ವಿರಾಟ್ ಕೊಹ್ಲಿ ಅಬ್ಬರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
3. ಶ್ರೀಕರ್ ಭರತ್
ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಕೆಕೆಆರ್ ಎದುರಿನ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಇಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
4. ಗ್ಲೆನ್ ಮ್ಯಾಕ್ಸ್‌ವೆಲ್
ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೆಕೆಆರ್ ಎದುರಿನ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದರು. ಶಾರ್ಜಾ ಅತ್ಯಂತ ಚಿಕ್ಕ ಮೈದಾನವಾಗಿದ್ದರಿಂದ ಮ್ಯಾಕ್ಸ್‌ವೆಲ್ ದೊಡ್ಡ ಮೊತ್ತ ಗಳಿಸುವ ಸಾಧ್ಯತೆಯಿದೆ
5. ಎಬಿ ಡಿವಿಲಿಯರ್ಸ್
ಆರ್‌ಸಿಬಿ ಪಾಲಿನ ಆಪತ್ಭಾಂದವ. ಕೆಕೆಆರ್ ಎದುರಿನ ಪಂದ್ಯದಲ್ಲಿ ಶೂನ್ಯ ಸುತ್ತಿ ನಿರಾಸೆ ಮೂಡಿಸಿದ್ದ ಎಬಿಡಿ, ಶಾರ್ಜಾ ಮೈದಾನದಲ್ಲಿ ರನ್ ಮಳೆ ಹರಿಸಲಿದ್ದಾರೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ
6. ವನಿಂದು ಹಸರಂಗ
ಲಂಕಾ ಸ್ಟಾರ್ ಆಲ್ರೌಂಡರ್ ಹಸರಂಗ, ಆರ್‌ಸಿಬಿ ಪರ ಮೊದಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದರು. ಇಂದಿನ ಪಂದ್ಯದಲ್ಲಿ ಹಸರಂಗ ತಮ್ಮ ಕೈಚಳಕ ತೋರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
7. ಮೊಹಮ್ಮದ್ ಅಜರುದ್ದೀನ್
ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಸಚಿನ್ ಬೇಬಿ ಬದಲಿಗೆ ಇಂದು ಮೊಹಮ್ಮದ್ ಅಜರುದ್ದೀನ್ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
8. ಕೈಲ್ ಜೇಮಿಸನ್
ಕಿವೀಸ್ ಮೂಲದ ವೇಗದ ಬೌಲರ್ ಕೈಲ್ ಜೇಮಿಸನ್ ಕೆಕೆಆರ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರು. ಇಂದಿನ ಪಂದ್ಯದಲ್ಲಿ ಜೇಮಿಸನ್ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
9. ಹರ್ಷಲ್ ಪಟೇಲ್
ಹರ್ಷಲ್ ಪಟೇಲ್ ಆರ್‌ಸಿಬಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದು, ಯುಎಇ ಚರಣದಲ್ಲೂ ವಿರಾಟ್ ಪಡೆ ಗೆಲುವಿನಲ್ಲಿ ಹರ್ಷಲ್ ಪಟೇಲ್ ಪ್ರಮುಖ ಪಾತ್ರವನ್ನು ನಿಭಾಯಿಸಬೇಕಾಗಿದೆ
10. ಮೊಹಮ್ಮದ್ ಸಿರಾಜ್
ಆರ್‌ಸಿಬಿ ವೇಗದ ಬೌಲರ್ ಸಿರಾಜ್ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ತೋರಿದ್ದರು. ಆದರೆ ವಿಕೆಟ್ ಕಬಳಿಸಲು ವಿಫಲವಾಗಿದ್ದರು. ಬೌಲಿಂಗ್‌ನಲ್ಲಿ ಸಿರಾಜ್ ಮೊನಚಾದ ದಾಳಿ ನಡೆಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
11. ಯುಜುವೇಂದ್ರ ಚಹಲ್
ಆರ್‌ಸಿಬಿ ಸ್ಪಿನ್ ಬೌಲಿಂಗ್ ಅಸ್ತ್ರ. ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರೂ ಸಹಾ ಯಾವುದೇ ಸಂದರ್ಭದಲ್ಲಿ ಸಹಾ ಬೇಕಾದರೂ ವಿಕೆಟ್ ಕಬಳಿಸಿ ಆರ್‌ಸಿಬಿಗೆ ಮುನ್ನಡೆ ಒದಗಿಸಿಕೊಡಬಲ್ಲ ಬೌಲರ್.