IPL 2021 ಎಂದೆಂದಿಗೂ ನಮ್ದು ಆರ್‌ಸಿಬಿಗೆ ಸಪೋರ್ಟ್ ಎಂದ ಕಿಚ್ಚ ಸುದೀಪ್..!

Suvarna News   | Asianet News
Published : Sep 25, 2021, 01:40 PM ISTUpdated : Sep 25, 2021, 01:48 PM IST

ಶಾರ್ಜಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bangalore) ತಂಡವು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings)ಗೆ ಶರಣಾಗಿದೆ. ಸಾಕಷ್ಟು ಪೈಪೋಟಿ ನಿರೀಕ್ಷೆ ಮಾಡಲಾಗಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ಧೋನಿ(MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್‌ಸಿಬಿ ಸೋಲಿನ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌(Kichcha Sudeepa) ಬೆಂಗಳೂರು ತಂಡದ ಕುರಿತಂತೆ ಮುತ್ತಿನಂತ ಮಾತನಾಡಿದ್ದಾರೆ. Hats of to the way @ChennaiIPL bounced bk after a great opening by @RCBTweets .. Supaa happy to see @imVkohli bk in his form.. two more needed outta 5.. Best wshs and yes,,,, we RCB fans wil always keep backing you all.#RCBfanForever 😎♥️🥂 pic.twitter.com/5k81vmUVZ0 — Kichcha Sudeepa (@KicchaSudeep) September 24, 2021

PREV
17
IPL 2021 ಎಂದೆಂದಿಗೂ ನಮ್ದು ಆರ್‌ಸಿಬಿಗೆ ಸಪೋರ್ಟ್ ಎಂದ ಕಿಚ್ಚ ಸುದೀಪ್..!

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 35ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

27

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಸ್ಪೋಟಕ ಅರ್ಧಶತಕದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 6 ವಿಕೆಟ್ ಕಳೆದುಕೊಂಡು 156 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು.
 

37

ಇನ್ನು ಈ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು 18.1 ಓವರ್‌ನಲ್ಲಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಮತ್ತೆ ಅಗ್ರಸ್ಥಾನಕ್ಕೇರಿದೆ. 

47

ಸದ್ಯ ಐಪಿಎಲ್‌ ವೀಕ್ಷಿಸಲು ಯುಎಇಗೆ ತೆರಳಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈಗಾಗಲೇ ಕೆಲವು ಪಂದ್ಯಗಳನ್ನು ಮೈದಾನಕ್ಕೆ ತೆರಳಿ ವೀಕ್ಷಿಸಿ ಎಂಜಾಯ್‌ ಮಾಡಿದ್ದಾರೆ. ಅದೇ ರೀತಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯವನ್ನು ವೀಕ್ಷಿಸಿದ್ದಾರೆ.

57

ಸದ್ಯ ಐಪಿಎಲ್‌ ವೀಕ್ಷಿಸಲು ಯುಎಇಗೆ ತೆರಳಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈಗಾಗಲೇ ಕೆಲವು ಪಂದ್ಯಗಳನ್ನು ಮೈದಾನಕ್ಕೆ ತೆರಳಿ ವೀಕ್ಷಿಸಿ ಎಂಜಾಯ್‌ ಮಾಡಿದ್ದಾರೆ. ಅದೇ ರೀತಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯವನ್ನು ವೀಕ್ಷಿಸಿದ್ದಾರೆ.

67

ಆರ್‌ಸಿಬಿ ಪಡೆದ ಉತ್ತಮ ಆರಂಭದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಿರುಗೇಟು ನೀಡಿದ ರೀತಿ ನಿಜಕ್ಕೂ ಹ್ಯಾಟ್ಸಾಫ್‌. ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿದ್ದು ಖುಷಿ ಕೊಟ್ಟಿತು. ಇನ್ನೈದು ಪಂದ್ಯಗಳ ಪೈಕಿ ಪ್ಲೇ ಆಫ್‌ಗೇರಲು 2 ಗೆಲುವು ಸಾಕು. ಆರ್‌ಸಿಬಿ ಅಭಿಮಾನಿಗಳಾದ ನಾವು ಎಂದೆಂದಿಗೂ ನಿಮಗೆ ಸಪೋರ್ಟ್‌ ನೀಡುತ್ತೇವೆ ಎಂದು ಸುದೀಪ್ ಹೇಳಿದ್ದಾರೆ

77

ಸದ್ಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 9 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 4 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನುಳಿದ 5 ಪಂದ್ಯಗಳ ಪೈಕಿ 2 ಗೆಲುವು ಸಾಧಿಸಿದರೆ ಆರ್‌ಸಿಬಿ ಬಹುತೇಕ ತನ್ನ ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಳ್ಳಲಿದೆ.

click me!

Recommended Stories