IPL 2021 ಆರ್‌ಸಿಬಿ ಮಾಡಿದ ಅತಿದೊಡ್ಡ ಎಡವಟ್ಟು ಗುರುತಿಸಿದ ಬ್ರಾಡ್‌ ಹಾಗ್..!

Suvarna News   | Asianet News
Published : Sep 16, 2021, 05:02 PM ISTUpdated : Sep 16, 2021, 05:04 PM IST

ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಯುಎಇ ಚರಣದ ಇನ್ನುಳಿದ 31 ಐಪಿಎಲ್ ಪಂದ್ಯಗಳು ಜರುಗಲಿವೆ. ಎಲ್ಲಾ ತಂಡಗಳು ಮಿಲಿಯನ್‌ ಡಾಲರ್‌ ಕ್ರಿಕೆಟ್ ಟೂರ್ನಿಯಲ್ಲಿ ಕಪ್‌ ಗೆಲ್ಲಲು ಸಕಲ ಸಿದ್ದತೆ ನಡೆಸುತ್ತಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಬ್ರಾಡ್‌ ಹಾಗ್ ಬದಲಿ ಆಟಗಾರರ ಆಯ್ಕೆ ವಿಚಾರದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ದೊಡ್ಡ ಎಡವಟ್ಟು ಮಾಡಿಕೊಂಡಿದೆ ಎಂದಿದ್ದಾರೆ. ಅಷ್ಟಕ್ಕೂ ವಿರಾಟ್ ಪಡೆ ಮಾಡಿದ ಎಡವಟ್ಟಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
19
IPL 2021 ಆರ್‌ಸಿಬಿ ಮಾಡಿದ ಅತಿದೊಡ್ಡ ಎಡವಟ್ಟು ಗುರುತಿಸಿದ ಬ್ರಾಡ್‌ ಹಾಗ್..!

ಯುಎಇ ಚರಣದ ಐಪಿಎಲ್‌ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

29

ಇನ್ನು ಯುಎಇ ಚರಣದ ಐಪಿಎಲ್‌ ಪಂದ್ಯಾವಳಿಗಳು ಆರಂಭವಾಗುವ ಮುನ್ನ ಕೆಲವು ದೇಶಿ ಹಾಗೂ ವಿದೇಶಿ ಆಟಗಾರರು ಕಾರಾಣಾಂತರಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಮತ್ತೆ ಕೆಲವು ಆಟಗಾರರು ತಂಡ ಕೂಡಿಕೊಂಡಿದ್ದಾರೆ.
 

39

ಅದೇ ರೀತಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ಡೇನಿಯಲ್ ಸ್ಯಾಮ್ಸ್‌, ವಾಷಿಂಗ್ಟನ್ ಸುಂದರ್, ಫಿನ್ ಅಲೆನ್‌, ಆಡಂ ಜಂಪಾ, ಕೇನ್‌ ರಿಚರ್ಡ್‌ಸನ್ ಅವರಂತಹ ತಾರಾ ಆಟಗಾರರು ಬೇರೆ-ಬೇರೆ ಕಾರಣಗಳಿಂದಾಗಿ ಯುಎಇ ಚರಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.
 

49

ಈ ಆಟಗಾರರ ಬದಲಿಗೆ ಆರ್‌ಸಿಬಿ ವನಿಂದು ಹಸರಂಗಾ, ದುಸ್ಮಂತಾ ಚಮೀರಾ, ಜಾರ್ಜ್‌ ಗಾರ್ಟನ್‌, ಟಿಮ್ ಡೇವಿಡ್‌ ಹಾಗೂ ಬಂಗಾಳ ಕ್ರಿಕೆಟಿಗ ಆಕಾಶ್‌ದೀಪ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದೆಲ್ಲದರ ನಡುವೆ ಆಸೀಸ್‌ ಮಾಜಿ ಕ್ರಿಕೆಟಿಗ ಬದಲಿ ಆಟಗಾರರ ವಿಚಾರದಲ್ಲಿ ಆರ್‌ಸಿಬಿ ಎಡವಟ್ಟು ಮಾಡಿಕೊಂಡಿದೆ ಎಂದಿದ್ದಾರೆ.
 

59
brad hogg

ಯುಎಇ ಚರಣದಿಂದ ಹೊರಗುಳಿದ ಡೇನಿಯಲ್ ಸ್ಯಾಮ್ಸ್‌ ಹಾಗೂ ವಾಷಿಂಗ್ಟನ್ ಸುಂದರ್ ಬದಲಿಗೆ ಸೂಕ್ತ ಆಲ್ರೌಂಡರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಆರ್‌ಸಿಬಿ ತಂಡ ಎಡವಿದೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

69

ಸ್ಯಾಮ್ಸ್ ಹಾಗೂ ಸುಂದರ್ ಅಲಭ್ಯತೆ ಆರ್‌ಸಿಬಿ ಪಾಲಿಗೆ ದೊಡ್ಡ ಹೊಡೆತವಾಗಿದೆ. ಅವರಿಬ್ಬರು ಉತ್ತಮ ಆಲ್ರೌಂಡರ್‌ಗಳಾಗಿದ್ದು, ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗುತ್ತಿದ್ದರು. ಈ ಇಬ್ಬರು ಆಟಗಾರರ ಅಲಭ್ಯತೆ ಆರ್‌ಸಿಬಿ ಪಾಲಿಗೆ ದೊಡ್ಡ ನಷ್ಟ ಎನಿಸಲಿದೆ ಎಂದು ಬ್ರಾಡ್‌ ಹಾಗ್ ಹೇಳಿದ್ದಾರೆ

79

ಈ ಇಬ್ಬರು ಆಟಗಾರರ ಬದಲಿಗೆ ಡೇವಿಡ್, ಚಮೀರಾ ಹಾಗೂ ಹಸರಂಗ ಅವರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಆದರೆ ಈ ಆಟಗಾರರು ಆ ಇಬ್ಬರು ಆಲ್ರೌಂಡರ್‌ಗಳಿಗೆ ಸರಿಸಮನಾಗಿದ್ದಾರೆಂದು ನನಗನಿಸುತ್ತಿಲ್ಲ. ಬದಲಿ ಆಲ್ರೌಂಡರ್‌ಗಳನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಆರ್‌ಸಿಬಿ ಮಿಸ್ಟೇಕ್‌ ಮಾಡಿದೆ ಎಂದು ನನಗನಿಸುತ್ತಿದೆ ಎಂದು ಹಾಗ್ ಹೇಳಿದ್ದಾರೆ.

89

ಒಂದು ವೇಳೆ ಆರ್‌ಸಿಬಿ ಬೇಗನೇ ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ವಿಕೆಟ್ ಕಳೆದುಕೊಂಡರೆ ಒತ್ತಡ ಎಬಿ ಡಿವಿಲಿಯರ್ಸ್‌ ಮೇಲೆ ಬೀಳುತ್ತದೆ. ಆರ್‌ಸಿಬಿ ಕೊನೆಯಲ್ಲಿ ಸದೃಢ ಬ್ಯಾಟಿಂಗ್ ಪಡೆಯನ್ನು ಹೊಂದಿದೆ ಎಂದು ನನಗನಿಸುತ್ತಿಲ್ಲ ಎಂದು ಹಾಗ್ ಹೇಳಿದ್ದಾರೆ.

99

ಇದೇ ವೇಳೆ, ಮೊದಲ ಹಂತದಲ್ಲಿ ಹರ್ಷಲ್‌ ಪಟೇಲ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ತೋರಿದ್ದರು, ಇದೀಗ ಯುಎಇ ಚರಣದಲ್ಲಿ ಈ ಇಬ್ಬರು ಆಟಗಾರರು ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ ಎಂದು ಹಾಗ್ ಹೇಳಿದ್ದಾರೆ.

click me!

Recommended Stories