IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್ 10 CSK ಕ್ರಿಕೆಟಿಗರ ಸುಂದರ ಮಡದಿಯರು..!
First Published | Sep 25, 2021, 6:00 PM ISTಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡವು ಯುಎಇ(UAE) ಚರಣದ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದೆ. ಅರಬ್ಬರ ನಾಡಿನಲ್ಲಿ ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಮ್ಮೆ ನಂ.1 ಸ್ಥಾನಕ್ಕೇರಿದೆ. ಧೋನಿ(MS Dhoni) ನೇತೃತ್ವದ ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಬಾರಿ ಕೂಡಾ ಐಪಿಎಲ್ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಧೋನಿ, ಜಡೇಜಾ, ಬ್ರಾವೋ, ರೈನಾ ಅವರಂತಹ ಸಿಎಸ್‌ಕೆ ಆಟಗಾರರು ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದರೆ, ಅವರ ಪತ್ನಿಯರು ಲೈಮ್‌ಲೈಟ್‌ನಲ್ಲಿ ಮಿಂಚುತ್ತಿರುತ್ತಾರೆ. ಬನ್ನಿ ಒಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ರಿಕೆಟಿಗರ ಮುದ್ದಾದ ಪತ್ನಿಯರ ಪರಿಚಯ ಮಾಡಿಕೊಳ್ಳೋಣ