ಎಲ್ಲದಕ್ಕಿಂತ ಮುಖ್ಯವಾಗಿ ಭಾರತ ತಂಡದ ನಾಯಕ.. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. 'ಕೊನೆಗೂ ರಾಜ ಆಟಕ್ಕೆ ಮರಳಿದ್ದಾನೆ. ಗ್ರೆಟೆಸ್ಟ್ ಫಿನಿಶರ್ ಆಟಕ್ಕೆ ಮರಳಿದ್ದಾನೆ. ಸೀಟಿನ ತುದಿಯಲ್ಲಿ ಕುಳಿತು ಆಟ ನೊಡುವ ಅವಕಾಶ ಸಿಕ್ಕಿತು' ಎಂದು ಬರೆದಿದ್ದಾರೆ.
ತೀವ್ರ ಕುತೂಹಲ, ಜಿದ್ದಾಜಿದ್ದಿನ ಹೋರಾಟ, ಒಂದೊಂದು ಎಸೆತವೂ ಅಭಿಮಾನಿಗಳ ಎದೆಯಲ್ಲಿ ನಡುಕ. ಆದರೆ ನಾಯಕ ಎಂ.ಎಸ್.ಧೋನಿ ಭರ್ಜರಿ ಸಿಕ್ಸರ್ ಹಾಗೂ ಹ್ಯಾಟ್ರಿಕ್ ಬೌಂಡರಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ರೋಚಕ ಗೆಲುವು ತಂದುಕೊಟ್ಟಿದೆ.
ಸೋಶಿಯಲ್ ಮೀಡಿಯಾದಲ್ಲಿ ಫಿನಿಶರ್ ಟ್ಯಾಗ್ ಟ್ರೆಂಡ್ ಆಗಿದೆ. ಐಪಿಎಲ್ ಇತಿಹಾಸಲ್ಲಿ ಧೋನಿ ಮತ್ತೊಂದು ದಾಖಲೆ ನಿರ್ಮಾಣ ಮಾಡಿಕೊಂಡಿದ್ದು 25 ಸಾರಿ ನಾಟೌಟ್ ಆಗಿ ಉಳಿದುಕೊಂಡು ತಂಡವನ್ನು ದಡ ಮುಟ್ಟಿಸಿದ ಶ್ರೇಯಕ್ಕೆ ಪಾತ್ರವಾಗಿದ್ದಾರೆ. ರವೀಂದ್ರ ಕಡೇಜಾ(25) ಯುಸಫ್ ಪಠಾಣ್ (23) ನಂತರದ ಸ್ಥಾನದಲ್ಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 9ನೇ ಬಾರಿಗೆ ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿದ ದಾಖಲೆ ಬರೆಯಿತು. ಮೂಲಕ ಧೋನಿ ಹಲವು ದಿನಗಳ ಬಳಿಕ ಪಂದ್ಯ ಫಿನಿಶ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಧೋನಿ 6 ಎಸೆತದಲ್ಲಿ 18 ರನ್ ಸಿಡಿಸಿದರು.
ಗೌತಮ್ ಗಂಭೀರ್ ಸಹ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಪಂದ್ಯಕ್ಕೂ ಮುನ್ನ ಅವರು ನೀಡಿದ್ದ ಹೇಳಿಕೆ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತೊಮ್ಮೆ ಫಿನಿಶರ್ ಎಂದು ಸಾಬೀತು ಮಾಡಿದ್ದಾರೆ. ಡೆಲ್ಲಿ ವಿರುದ್ಧ ಕೊನೆಯಲ್ಲಿ ಅಬ್ಬರಿಸಿದ ಧೋನಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡವನ್ನು ಐಪಿಎಲ್ (IPL 2021)ಫೈನಲ್ ಗೆ ಏರಿಸಿದ್ದಾರೆ. ಸಹಜವಾಗಿಯೇ ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ ನೀಡಿದೆ.
'ರಾಜ ಆಟಕ್ಕೆ ಮರಳಿದ್ದಾನೆ' ಎಂದು ಮನಪೂರ್ವಕವಾಗಿ ಧೋನಿ ಕೊಂಡಾಡಿದ್ದಾರೆ ಕೊಹ್ಲಿ. ಸೋಮವಾರ ವಿರಾಟ್ ನೇತೃತ್ವದ ಆರ್ ಸಿಬಿ ಮತ್ತು ಮಾರ್ಗನ್ ನೇತೃತ್ವದ ಕೆಕೆಆರ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಡೆಲ್ಲಿ ಜತೆ ಆಡಬೇಕಿದ್ದು ಆ ಪಂದ್ಯದಲ್ಲಿ ಗೆದ್ದವರು ಸಿಎಸ್ ಕೆ ಜತೆ ಕಪ್ ಗಾಗಿ ಸೆಣೆಸಬೇಕಿದೆ.