Published : Nov 16, 2019, 04:09 PM ISTUpdated : Nov 16, 2019, 04:56 PM IST
ಬೆಂಗಳೂರು: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಂದು ಕಪ್ ಗೆಲ್ಲುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ತಂಡದಿಂದ 10 ಆಟಗಾರರನ್ನು ಕೈಬಿಟ್ಟರೂ, ಈಗಲೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಉಳಿದೆಲ್ಲಾ ಆಟಗಾರರಿಗಿಂತ ಬಲಿಷ್ಠವಾಗಿ ಕಾಣುತ್ತಿದೆ. ಆಟಗಾರರನ್ನು ಕೈಬಿಡುವ ಮುನ್ನವೇ ಧವಳ್ ಕುಲಕರ್ಣಿ, ರುದರ್’ಫೋರ್ಡ್ ಹಾಗೂ ಟ್ರೆಂಟ್ ಬೋಲ್ಟ್ ಅವರನ್ನು ಖರೀದಿಸಿರುವ ಮುಂಬೈ ಇಂಡಿಯನ್ಸ್ ಸಿದ್ಧಾರ್ಥ್ ಲಾಡ್’ನನ್ನು ಮಾತ್ರ ಬಿಟ್ಟುಕೊಟ್ಟಿತ್ತು. ರೋಹಿತ್, ಡಿಕಾಕ್, ಪಾಂಡ್ಯ ಬ್ರದರ್ಸ್, ಬುಮ್ರಾ ಅವರಂತಹ ಆಟಗಾರರು ಮುಂಬೈ ತಂಡವನ್ನು ಮತ್ತೊಮ್ಮೆ ಚಾಂಪಿಯನ್ಸ್ ಪಟ್ಟಕ್ಕೇರಿಸಿದರೂ ಅಚ್ಚರಿಯಿಲ್ಲ. IPL 2020 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರಿವರು