ಫಲ ನೀಡಿದ ಆಯ್ಕೆ ಸಮಿತಿ, ಟೀಮ್ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ! ಕೊನೆಗೂ ಬಯಲಾಯ್ತು ಗೆಲುವಿನ ಗುಟ್ಟು!

Published : Mar 09, 2026, 11:52 AM IST

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಗೆಲುವಿಗೆ ನಿಜವಾದ ಕಾರಣ ಆಯ್ಕೆ ಸಮಿತಿಯ ಕಠಿಣ ನಿರ್ಧಾರ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. 

PREV
16
ಟೀಂ ಇಂಡಿಯಾ ಗೆಲುವಿನಲ್ಲಿ ಆಯ್ಕೆ ಸಮಿತಿ ಪಾತ್ರ

ಭಾರತದ ವಿಶ್ವಕಪ್‌ ಗೆಲುವಿನ ಹಿಂದೆ ಆಟಗಾರರ ಕೊಡುಗೆ ಮಾತ್ರವಲ್ಲದೆ ಬಿಸಿಸಿಐ, ತಂಡದ ಆಯ್ಕೆ ಸಮಿತಿಯ ಕಠಿಣ ನಿರ್ಧಾರಗಳೂ ಪ್ರಮುಖ ಪಾತ್ರ ವಹಿಸಿವೆ. ಮುಖ್ಯಸ್ಥ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯು ತೆರೆಮರೆಯಲ್ಲಿ ನಿರ್ವಹಿಸಿದ ಪಾತ್ರ, ಭಾರತಕ್ಕೆ ವಿಶ್ವಕಪ್‌ ತಂದುಕೊಡಲು ನೆರವಾಯಿತು.

26
ಶುಭ್‌ಮನ್ ಗಿಲ್ ಕೈಬಿಟ್ಟು ಇಶಾನ್‌ ಕಿಶನ್‌ಗೆ ಬುಲಾವ್ ನೀಡಿದ್ದು

ಟೆಸ್ಟ್‌, ಏಕದಿನ ನಾಯಕನಾಗಿರುವ ಶುಭ್‌ಮನ್‌ ಗಿಲ್‌ರನ್ನು ಟಿ20ಯಲ್ಲೂ ಬೆಳೆಸುವುದು ಆಯ್ಕೆ ಸಮಿತಿ ನಿರ್ಧಾರವಾಗಿತ್ತು. ಆದರೆ ಲಯದ ಕಾರಣಕ್ಕೆ ವಿಶ್ವಕಪ್‌ಗೂ ಮುನ್ನ ಅವರನ್ನು ತಂಡದಿಂದ ಹೊರಗಿಡುವ ದಿಟ್ಟ ನಿರ್ಧಾರ ಕೈಗೊಂಡು, ಇಶಾನ್‌ ಕಿಶನ್‌ರನ್ನು ಸೇರಿಸಿಕೊಂಡಿತು. ಇದು ಹಲವರನ್ನು ಅಚ್ಚರಿಗೆ ದೂಡಿದರೂ ತಂಡದ ವಿಚಾರದಲ್ಲಿ ಸರಿಯಾದ ನಿರ್ಧಾರವೇ ಆಗಿತ್ತು. ಇಶಾನ್‌ ಅಕ್ಷರಶಃ ಅಬ್ಬರಿಸಿ, ಪ್ರಮುಖ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾದರು.

36
ಹರ್ಷಿತ್ ರಾಣಾ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ಮಣೆ ಹಾಕಿದ್ದು

ಹರ್ಷಿತ್‌ ರಾಣಾ ಗಾಯಕೊಂಡ ಕಾರಣ ಅವರಿಗೆ ಸಮರ್ಥ ಬದಲಿ ಆಟಗಾರನಾಗಿ ಮೊಹಮ್ಮದ್‌ ಸಿರಾಜ್‌ರನ್ನು ಆಯ್ಕೆ ಮಾಡಿದ್ದು ಕೂಡಾ ಸಮಿತಿಯ ಮಹತ್ವದ ನಿರ್ಧಾರ. ಅಮೆರಿಕ ವಿರುದ್ಧ ಪಂದ್ಯದಲ್ಲಿ ಸಿರಾಜ್‌ ಆಡಿ 3 ವಿಕೆಟ್‌ ಕಿತ್ತರು. ಟೂರ್ನಿಯುದ್ದಕ್ಕೂ ಸಮರ್ಥ ಬದಲಿ ಆಟಗಾರರ ಕೊರತೆ ತಂಡಕ್ಕೆ ಎದುರಾಗಲೇ ಇಲ್ಲ.

46
ನಿರ್ಣಾಯಕ ಘಟ್ಟದಲ್ಲಿ ಸಂಜುಗೆ ಅವಕಾಶ ನೀಡಿದ್ದು

ಇನ್ನು, ನಿರ್ಣಾಯಕ ಘಟ್ಟದಲ್ಲಿ ಸಂಜು ಸ್ಯಾಮ್ಸನ್‌ರನ್ನು ಆರಂಭಿಕರಾಗಿ ಕಣಕ್ಕಿಳಿಸಲು ತಂಡದ ಆಡಳಿತಕ್ಕೆ ಆಯ್ಕೆ ಸಮಿತಿ ಸಲಹೆ ನೀಡಿತು. ಇದು ತಂಡದ ಚಿತ್ರಣವೇ ಬದಲಾಗುವಂತೆ ಮಾಡಿತು. ಅದುವರೆಗೂ ಆರಂಭಿಕ ಜೋಡಿ ವೈಫಲ್ಯ ಅನುಭವಿಸಿದ್ದರೆ, ಸಂಜು ಆಗಮನದ ಬಳಿಕ ಆ ಸಮಸ್ಯೆ ಕಂಡುಬರಲಿಲ್ಲ.

56
ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮೇಲೆ ವಿಶ್ವಾಸವಿಟ್ಟ ಟೀಮ್ ಮ್ಯಾನೇಜ್‌ಮೆಂಟ್

ಕಳಪೆ ಆಟದ ಹೊರತಾಗಿಯೂ ವಿಶ್ವ ನಂ.1 ಬ್ಯಾಟರ್‌ ಅಭಿಷೇಕ್‌ ಶರ್ಮಾ ಮೇಲೆ ನಂಬಿಕೆ ಇಟ್ಟು ಆಡಿಸಿದ್ದು, ದುಬಾರಿಯಾಗುತ್ತಿದ್ದರೂ ವಿಶ್ವ ನಂ.1 ಬೌಲರ್‌ ವರುಣ್‌ ಚಕ್ರವರ್ತಿಯನ್ನು ಕಣಕ್ಕಿಳಿಸಿದ್ದು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದ್ದಲ್ಲದೇ, ಫೈನಲ್‌ನಲ್ಲಿ ಅದರ ಯಶಸ್ಸನ್ನೂ ತಂಡ ಪಡೆದುಕೊಂಡಿತು.

66
ಸತತ ಎರಡನೇ ಬಾರಿಗೆ ಭಾರತ ಟಿ20 ವಿಶ್ವಕಪ್ ಒಡೆಯ

ಒಟ್ಟಾರೆಯಾಗಿ ಗೌತಮ್ ಗಂಭೀರ್ ಮಾರ್ಗದರ್ಶನ, ಸೂರ್ಯಕುಮಾರ್ ಯಾದವ್ ಅವರ ಚಾಣಾಕ್ಷ ನಾಯಕತ್ವ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ದಿಟ್ಟ ನಿರ್ಧಾರದ ಫಲವಾಗಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚುಟುಕು ಕ್ರಿಕೆಟ್ ಸಾಮ್ರಾಟನನ್ನಾಗಿ ಮಾಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories