Happy Birthday SKY: ಬರ್ತ್‌ ಡೇ ಬಾಯ್ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು

Published : Sep 14, 2023, 01:29 PM IST

ಬೆಂಗಳೂರು: ಭಾರತದ ಮಿಸ್ಟರ್ 360 ಖ್ಯಾತಿಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಸೆಪ್ಟೆಂಬರ್ 14ರಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೂರ್ಯ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಈ ಸಂದರ್ಭದಲ್ಲಿ, ಸೂರ್ಕುಮಾರ್ ಯಾದವ್ ಅವರ ಅಪರೂಪದ ರೆಕಾರ್ಡ್, ಹಾಗೂ ವೈಯುಕ್ತಿಕ ಬದುಕಿನ ಲವ್ ಸ್ಟೋರಿಯನ್ನು ನೋಡೋಣ ಬನ್ನಿ.  

PREV
16
Happy Birthday SKY: ಬರ್ತ್‌ ಡೇ ಬಾಯ್ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು
33 ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್:

ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಗುರುವಾರವಾದ ಇಂದು 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸೂರ್ಯ ಸದ್ಯ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಆಟಗಾರ ಎನಿಸಿಕೊಂಡಿದ್ದಾರೆ 
 

26
ಏಷ್ಯಾಕಪ್ ಹಾಗೂ ವಿಶ್ವಕಪ್‌ ತಂಡದಲ್ಲಿ ಸ್ಥಾನ:

ಸೂರ್ಯಕುಮಾರ್ ಯಾದವ್ ಸದ್ಯ ಲಂಕಾದಲ್ಲಿ ಏಷ್ಯಾಕಪ್ ಆಡುತ್ತಿರುವ ಭಾರತ ತಂಡದಲ್ಲಿದ್ದಾರೆ. ಆದರೆ ಇದುವರೆಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನು ಸೂರ್ಯ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತದ 15 ಆಟಗಾರರ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
 

36
2023ರ ಐಪಿಎಲ್‌ನಲ್ಲಿ 200+ ಸ್ಟ್ರೈಕ್‌ರೇಟ್‌ನಲ್ಲಿ 4  ಅರ್ಧಶತಕ ಚಚ್ಚಿದ್ದ ಸೂರ್ಯ:

ಐಪಿಎಲ್‌ನ ಆವೃತ್ತಿಯೊಂದರಲ್ಲಿ 200+ ಸ್ಟ್ರೈಕ್‌ರೇಟ್‌ನಲ್ಲಿ 4 ಅರ್ಧಶತಕ ಚಚ್ಚಿದ ಏಕೈಕ ಬ್ಯಾಟರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯನಿಂದ ಈ ಪ್ರದರ್ಶನ ಮೂಡಿ ಬಂದಿತ್ತು.
 

46
ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿದ ಆರಂಭಿಕನಲ್ಲದ ಏಕೈಕ ಬ್ಯಾಟರ್

ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3 ಶತಕ ಬಾರಿಸಿದ್ದು, ಈ ಸಾಧನೆ ಮಾಡಿದ ಏಕೈಕ ಆರಂಭಿಕನಲ್ಲದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
 

56
ವರ್ಷವೊಂದರಲ್ಲಿ 1000+ ಅಂತಾರಾಷ್ಟ್ರೀಯ ರನ್ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್

2022ರಲ್ಲಿ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000+ ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.

66
ಸೂರ್ಯ-ದೇವಿಶಾ ಲವ್‌ ಸ್ಟೋರಿ:

ಕಾಲೇಜು ಗೆಳತಿ ದೇವಿಶಾ ಶೆಟ್ಟಿ ಈಗ ಸೂರ್ಯಕುಮಾರ್ ಯಾದವ್ ಮನೆ-ಮನದೊಡತಿ. ಸೂರ್ಯ-ದೇವಿಶಾ ಜುಲೈ 7, 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories