ಇಂಡಿಯನ್‌ ಕ್ರಿಕೆಟಿಗರ ಪತ್ನಿಯರ ಮೇಕಪ್ ಇಲ್ಲದ ಲುಕ್‌ ಹೇಗಿದೆ ನೋಡಿ!

First Published | Aug 31, 2021, 10:52 AM IST

ಭಾರತದಲ್ಲಿ ಕ್ರಿಕೆಟ್ ಆಟಗಾರರು ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಹಾಗೇ ಅವರ ಪತ್ನಿಯರು ಸಹ ಫೇಮಸ್‌. ಕ್ರಿಕೆಟಿಗರ ಪತ್ನಿ ಅಥವಾ ಗರ್ಲ್‌ಫ್ರೆಂಡ್ಸ್‌ನ ಬ್ಯೂಟಿ ಮತ್ತು ಲುಕ್‌ ಅಭಿಮಾನಿಗಳ ಗಮನವನ್ನು ಸೆಳೆಯುತ್ತದೆ. ಕ್ರಿಕೆಟಿಗರ ಹೆಂಡತಿಯರ ವಿಥೌಟ್‌ ಮೇಕಪ್‌ ಫೋಟೋಗಳು ಇಲ್ಲಿವೆ. ಅವರು ಮೇಕಪ್  ಇಲ್ಲದೆ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಿ. 

ಟೀಮ್‌ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮರ ಬಾಲಿವುಡ್‌ನ ಬ್ಯೂಟಿ. ಮೇಕಪ್ ಇಲ್ಲದಿದ್ದರೂ ಅವರು ತುಂಬಾ ಸುಂದರವಾಗಿ ಕಾಣಿಸುತ್ತಾರೆ ಏಕೆಂದರೆ ಅವರು ತನ್ನ ಚರ್ಮ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.

ಭಾರತೀಯ ಕ್ರಿಕೆಟ್ ತಂಡದಲ್ಲಿ ಸಿಕ್ಸರ್ ಕಿಂಗ್ ಎಂದೇ ಜನಪ್ರಿಯರಾಗಿದ್ದ ಯುವರಾಜ್ ಸಿಂಗ್, ಬಾಲಿವುಡ್ ನಟಿ ಹೇಜಲ್ ಕೀಚ್ ಅವರನ್ನು  ವಿವಾಹವಾಗಿದ್ದಾರೆ. ಅ ಹೇಜಲ್  ತಮ್ಮ ಮದುವೆಯ ನಂತರ ಬಿಗ್ ಸ್ಕ್ರೀನ್‌ನಿಂದ ದೂರವಿದ್ದಾರೆ. ಮೇಕಪ್ ಇಲ್ಲದ ಅವರ ಲುಕ್‌ ನೋಡಿದರೆ ಗುರುತಿಸುವುದು ಕಷ್ಷ.

Tap to resize

ಟೀಮ್‌ ಇಂಡಿಯಾದ ಮಾಜಿ ಸ್ಪೀನ್ನರ್‌ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ. ಗೀತಾ ಕೂಡ ಬಾಲಿವುಡ್‌ಗೆ ಸೇರಿದವರು. ಆದರೆ ಮದುವೆಯ ನಂತರ ಅವರು ಸಿನಿಮಾ ಪ್ರಪಂಚದಿಂದ ದೂರವಾಗಿದ್ದಾರೆ ಮತ್ತು  ಮೇಕಪ್ ಇಲ್ಲದೆ ಹೇಗೆ ಕಾಣುತ್ತಾರೆ ನೋಡಿ.

ಈ  ಫೋಟೋದಲ್ಲಿರುವರು ಭಾರತೀಯ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟ್ಯಾಂಕೋವಿಕ್. ನತಾಶಾ ಮಾಡೆಲ್‌ ಕಮ್‌ ಬಾಲಿವುಡ್ ನಟಿ. ಹಾರ್ದಿಕ್‌ ಪಾಂಡ್ಯ ಪತ್ನಿ ಸೋಷಿಯಲ್ ಮೀಡಿಯಾ ಸ್ಟಾರ್‌. ಮಗುವಿಗೆ ಜನ್ಮ ನೀಡಿದ ನಂತರವೂ ನತಾಶಾರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನೂ ಯಂಗ್‌ ಆಂಡ್‌ ಫಿಟ್‌ ಆಗಿದ್ದಾರೆ. 

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪತ್ನಿ  ಕೂಡ ನಟಿ. ಆದರೆ  ಬಾಲಿವುಡ್ ಅಲ್ಲ, ಬಂಗಾಳಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇವರ ಫೋಟೋಗಳು ವೈರಲ್‌ ಆಗುತ್ತಿರುತ್ತವೆ. 

ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಡಾಕ್ಟರ್‌ ಹಾಗೂ ಕೊರಿಯೋಗ್ರಾಫರ್‌ ಕೂಡ ಹೌದು. ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ಕತ್‌ ಫಾಲೋವರ್ಸ್‌ ಹೊಂದಿರುವ ಇವರ ಡ್ಯಾನ್ಸ್‌ ವಿಡೀಯೋಗಳು ವೈರಲ್‌ ಆಗುತ್ತಿರುತ್ತವೆ. ಪತ್ನಿ ಧನಶ್ರೀ ಜೊತೆ ಚಹಾಲ್‌ ಕೂಡ ಹೆಜ್ಜೆ ಹಾಕಿರುವ ವಿಡೀಯೋಗಳು ತುಂಬಾ ಫೇಮಸ್‌ ಆಗಿವೆ. 

ಭಾರತ ತಂಡದ ಮಾಜಿ ನಾಯಕ ಕ್ಯಾಪ್ಟನ್‌ ಕೂಲ್‌ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ಆಗಾಗ ತನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಮೇಕಪ್ ಇಲ್ಲದೆ ಈ ರೀತಿ ಕಾಣುತ್ತಾರೆ.

ಓಪನರ್ ಶಿಖರ್ ಧವನ್ ಆಯೇಷಾ ಮುಖರ್ಜಿಯವರನ್ನು ಮದುವೆಯಾದರು. ವಯಸ್ಸಿನಲ್ಲಿ ಶಿಖರ್‌ಗಿಂತ ಹಿರಿಯರು ಆಯೇಶಾ ಫೀಟ್ನೆಸ್‌ ಫ್ರಿಕ್‌, ಇತರ ಕ್ರಿಕೆಟಿಗರ ಪತ್ನಿಯಂತೆ, ಐಪಿಎಲ್ ಸಮಯದಲ್ಲಿ ತನ್ನ ಗಂಡನನ್ನು ಚಿಯರ್‌ ಮಾಡಲು ಆಗಮಿಸುತ್ತಾರೆ ಆಯೇಶಾ. ಇವರು ಮೇಕಪ್‌ ಇಲ್ಲದೆ ನ್ಯಾಚುರಲ್‌ ಆಗಿ ಕಾಣಿಸಿ ಕೊಳ್ಳುವುದೇ ಹೆಚ್ಚು. 

ಭಾರತೀಯ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ರಿತಿಕಾ ಸಜ್ದೆ ಅವರನ್ನು ವಿವಾಹವಾಗಿದ್ದಾರೆ. ವೃತಿಯಲ್ಲಿ ಈವೆಂಟ್ ಮ್ಯಾನೇಜರ್ ಆಗಿದ್ದರು ರಿತಿಕಾ ಸಜ್ದೆ. ಆದರೆ ಮದುವೆಯ ನಂತರ, ಅವರು ರೋಹಿತ್ ಮತ್ತು ಅವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಆಗಾಗ್ಗೆ ರಿತಿಕಾ ಮೈದಾನದಲ್ಲಿ ರೋಹಿತ್ ಅವರನ್ನು ಚಿಯರ್‌ ಮಾಡಲು ಫೀಲ್ಡ್‌ಗೆ ಕೂಡ ಬರುತ್ತಾರೆ.

Latest Videos

click me!