ಸಿಕ್ಸ್‌ನಿಂದ ಅದ್ಭುತ ಕ್ಷಣದವರೆಗೆ, ಅವಳೇ ನನ್ನ ಇನ್ನಿಂಗ್ಸ್;‌ 26ನೇ ವಯಸ್ಸಿಗೆ ಕ್ರಿಕೆಟರ್‌ ಪೃಥ್ವಿ ಶಾ ಎಂಗೇಜ್

Published : Mar 08, 2026, 05:26 PM IST

cricketer prithvi shaw age:‌ ಭಾರತೀಯ ಕ್ರಿಕೆಟರ್‌ ಪೃಥ್ವಿ ಶಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗೆಳತಿ ಆಕೃತಿ ಅಗರ್‌ವಾಲ್‌ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ರೊಮ್ಯಾಂಟಿಕ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
17
ಹುಡುಗಿ ಯಾರು?

ಆಕೃತಿ ಅಗರ್‌ವಾಲ್‌ ಅವರು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಕೂಡ ಹೌದು, ಇದರ ಜೊತೆಗೆ ನಟಿ ಕೂಡ ಹೌದು. ಲಕ್ನೋ ಮೂಲದ ಅವರು ಮುಂಬೈನಲ್ಲಿ ವಾಸವಿದ್ದಾರೆ.

27
ದೊಡ್ಡ ಅಭಿಮಾನಿ ಬಳಗ

ಆಕೃತಿ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಇದ್ದಾರೆ. ತ್ರಿಮುಖ ಎನ್ನುವ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

37
ಕರಿಯರ್‌ ಚೆನ್ನಾಗಿಲ್ಲ

2018ರಲ್ಲಿ ಟೆಸ್ಟ್‌ ಸೆಂಚುರಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟರ್‌ಗೆ ಕಾಲಿಟ್ಟಿದ್ದರು. ಆರಂಭದಲ್ಲಿ ಗುಡುಗಿದ್ದ ಪೃಥ್ವಿ ಶಾ ಕರಿಯರ್‌ ಅಷ್ಟು ನಿಶ್ಚಿತತೆಯಿಂದ ಕೂಡಿಲ್ಲ. ಫಿಟ್‌ನೆಸ್‌ಇಲ್ಲ, ಫಾರ್ಮ್‌ ಕೂಡ ಇಲ್ಲ, ಶಿಸ್ತು ಇಲ್ಲ ಎಂಬ ಆರೋಪವಿದೆ.

47
ಐಪಿಎಲ್‌ನಲ್ಲಿ ಮಾರಾಟ ಆಗಿರಲಿಲ್ಲ

ದೇಹದ ತೂಕ ಜಾಸ್ತಿ ಆಗಿದ್ದಕ್ಕೆ, ಶಿಸ್ತು ಇಲ್ಲದಿರೋದಿಕ್ಕೆ, ಪ್ರಾಕ್ಟೀಸ್‌ಗೂ ಕೂಡ ಬಂದಿಲ್ಲ ಎಂಬ ಕಾರಣಕ್ಕೆ 2025, 2026ರ ಐಪಿಎಲ್‌ನ ಆರಂಭಿಕ ಆಕ್ಷನ್‌ನಲ್ಲಿ ಕೂಡ ಪೃಥ್ವಿ ಶಾ ಅವರನ್ನು ಯಾರೂ ಖರೀದಿ ಮಾಡಿರಲಿಲ್ಲ.

57
ಪೃಥ್ವಿ ಶಾಗೆ ಖುಷಿಯೋ ಖುಷಿ

ಮೈದಾನದ ಸಿಕ್ಸರ್‌ಗಳಿಂದ ಹಿಡಿದು, ಜೀವನದ ಅದ್ಭುತ ಕ್ಷಣಗಳವರೆಗೆ... ಅವಳೇ ನನ್ನ ಬದುಕಿನ ಪರಿಪೂರ್ಣ ಇನಿಂಗ್ಸ್ ಎಂದು ಪೃಥ್ವಿ ಶಾ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

67
ಮಂಡಿಯೂರಿ ಉಂಗುರ ಹಾಕಿದ್ರು

ಪೃಥ್ವಿ ಶಾ ಅವರು ಪ್ರೀತಿಸಿದ ಹುಡುಗಿಗೆ ಮಂಡಿಯೂರಿ ಉಂಗುರ ಹಾಕಿದ್ದಾರೆ.

77
ಶುಭಾಶಯಗಳು

ಪೃಥ್ವಿ ಶಾ ಹಾಗೂ ಆಕೃತಿ ಅಗರ್‌ವಾಲ್ ಅವರಿಗೆ ಅನೇಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories