ಅಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸುಮಾರು 5 ತಿಂಗಳ ನಂತರ ಮತ್ತೆ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಸ್ಫೋಟಕ ಸೆಂಚುರಿ ಬಾರಿಸಿ ಸಖತ್ ಫಾರ್ಮ್‌ನಲ್ಲಿದ್ದಾರೆ ಹಾರ್ದಿಕ ಪಾಂಡ್ಯ. ಐಪಿಲ್ ಟೂರ್ನಿಮೆಂಟ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುವ ಇವರು ತಾವು ಮದುವೆಯಾಗುವ ಹುಡುಗಿ ಮತ್ತು ಫ್ಯಾಮಿಲಿ ಜೊತೆ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಿದ ಪೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ.