ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಕಾಂಗರೂ ನಾಡಿನಲ್ಲಿ ಬೀಡುಬಿಟ್ಟಿದೆ. ಕೊರೋನಾ ವೈರಸ್ ಕಾರಣ ಟೀಂ ಇಂಡಿಯಾ ಕ್ರಿಕೆಟಿಗರು ಕ್ವಾರಂಟೈನ್ ನಿಯಮ ಪಾಲಿಸಲೇಬೇಕು.
undefined
ಆಸೀಸ್ ತೆರಳಿದ ಬಳಿಕ ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಇದೇ ಮೊದಲ ಬಾರಿಗೆ ಔಟ್‌ಡೂರ್ ಅಭ್ಯಾಸ ಆರಂಭಿಸಿದ್ದಾರೆ. ಸಿಡ್ನಿ ಮೈದಾನದಲ್ಲಿ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದ್ದಾರೆ.
undefined
ಆಸ್ಟ್ರೇಲಿಯಾ ತೆರಳಿದ ಬೆನ್ನಲ್ಲೇ ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಎಲ್ಲಾ ಕ್ರಿಕೆಟಿಗರು ನೆಗಟೀವ್ ರಿಪೋರ್ಟ್ ಬಂದಿದೆ.
undefined
ಹಾರ್ದಿಕ್ ಪಾಂಡ್ಯ, ಪೃಥ್ವಿ ಸಾ, ಕುಲ್ದೀಪ್ ಯಾದವ್, ಹನುಮಾ ವಿಹಾರಿ ಹಾಗೂ ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಅಭ್ಯಾಸ ನಡೆಸುವ ವಿವರಗಳನ್ನು ಬಿಸಿಸಿಐ ಬಹಿರಂಗ ಪಡಿಸಿದೆ.
undefined
ಉಮೇಶ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಚೇತೇಶ್ವರ್ ಪೂಜಾರ, ಕುಲ್ದೀಪ್ ಯಾದವ್, ಟಿ ನಟರಾಜನ್ ಸೇರಿದಂತೆ ಹಲವರು ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಚಿತ್ರಗಳನ್ನು ಬಿಸಿಸಿಐ ಟ್ವಿಟರ್ ಮೂಲಕ ಪೋಸ್ಟ್ ಮಾಡಿದೆ.
undefined
ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಟೆಸ್ಟ್, ಏಕದಿನ, ಹಾಗೂ ಟಿ20 ತಂಡ ಜೊತೆಯಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ಕೊರೋನಾ ಕಾರಣದಿಂದ ಆಟಗಾರರು ಬಯೋಬಬಲ್ ವಾತಾವರಣದೊಳಿಗಿರಲು ಮೂರು ಮಾದರಿ ತಂಡ ಜೊತೆಯಾಗಿ ಪ್ರಯಾಣ ಮಾಡಿದೆ.
undefined
ಆಸೀಸ್ ಪ್ರವಾಸದಲ್ಲಿ 3 ಏಕದಿನ, 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿ ಆಯೋಜಿಸಲಾಗಿದೆ. ನವೆಂಬರ್ 27 ರಿಂದ ಇಂಡೋ-ಆಸೀಸ್ ಟೂರ್ನಿ ಆರಂಭಗೊಳ್ಳಲಿದೆ.
undefined
ನವೆಂಬರ್ 27ರಂದ ಏಕದಿನ ಸರಣಿ ಆರಂಭಗೊಳ್ಳಲಿದೆ. ಡಿಸೆಂಬರ್ 4 ರಿಂದ ಟಿ20 ಟೂರ್ನಿ ಆರಂಭಗೊಳ್ಳಲಿದ್ದು ಡಿಸೆಂಬರ್ 17 ರಿಂದ ಟೆಸ್ಟ್ ಸರಣಿ ನಡೆಯಲಿದೆ
undefined