ಶ್ರೀಲಂಕಾದಲ್ಲಿ ನಡೆದ ಮೊದಲ ಅಂಧ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ, ನೇಪಾಳ ವಿರುದ್ಧ ಏಳು ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ.
ಶ್ರೀಲಂಕಾದಲ್ಲಿ ನಡೆದ ಮೊದಲ ಅಂಧ ಮಹಿಳೆಯರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ, ನೇಪಾಳವನ್ನು 7 ವಿಕೆಟ್‌ಗಳಿಂದ ಸೋಲಿಸಿ ಇತಿಹಾಸ ಬರೆಯಿತು. 114 ರನ್‌ಗಳ ಗುರಿಯನ್ನು 12 ಓವರ್‌ಗಳಲ್ಲಿ ತಲುಪಿತು.
24
ಭಾರತಕ್ಕೆ ಸುಲಭ ಜಯಭೇರಿ
ಮೊದಲು ಬ್ಯಾಟ್ ಮಾಡಿದ ನೇಪಾಳ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 114 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಇನ್ನೂ 8 ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
34
ಟೂರ್ನಿಯಲ್ಲಿ ಭಾರತದ ಪ್ರಾಬಲ್ಯ ಒಂದೇ ಒಂದು ಮ್ಯಾಚ್ ಸೋತಿಲ್ಲ
ಟೂರ್ನಿಯಲ್ಲಿ ಅಜೇಯವಾಗಿ ಉಳಿದ ಭಾರತ, ಫೈನಲ್‌ನಲ್ಲಿ ನೇಪಾಳವನ್ನು ಸೋಲಿಸಿ ಚಾಂಪಿಯನ್ ಆಯಿತು. ಫುಲಾ ಸರೆನ್ ಪಂದ್ಯ ಶ್ರೇಷ್ಠೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಗೆಲುವು ದೇಶದಲ್ಲಿ ಅಂಧರ ಕ್ರಿಕೆಟ್‌ಗೆ ಸಿಕ್ಕ ದೊಡ್ಡ ಪ್ರೋತ್ಸಾಹವಾಗಿದೆ.
ಇದಕ್ಕೂ ಮೊದಲು ಭಾರತ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಇನ್ನು ನೇಪಾಳ ತಂಡವು ಸೆಮೀಸ್‌ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತ್ತು.